ಮಹದೇವಪ್ಪ ಸಿಎಂ ಆದರೆ ಸಂತೋಷ
*ಸಚಿವ ಕೆ.ವೆಂಕಟೇಶ್ ಹೇಳಿಕೆ
ವಿಕ ಸುದ್ದಿಲೋಕ ಮೈಸೂರು
ಜಿಲ್ಲಾಉಸ್ತುವಾರಿ ಸಚಿವ ಡಾ.ಎಚ್ .ಸಿ.ಮಹದೇವಪ್ಪ ನನ್ನ ಅತ್ಮೀಯ ಸ್ನೇಹಿತ, ಅವರು ರಾಜ್ಯದ ಮುಖ್ಯಮಂತ್ರಿ ಆದರೆ ಸಂತೋಷ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಹೇಳಿದರು.
ಸೋಮವಾರ ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಸದ್ಯ ರಾಜ್ಯದಲ್ಲಿಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಖಾಲಿ ಆದ ಮೇಲೆ ದಲಿತ, ಲಿಂಗಾಯತ, ಒಕ್ಕಲಿಗ, ಕುರುಬ ಹೀಗೆ ಯಾವುದಾದರೂ ಸಮುದಾಯದ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ,’’ ಎಂದರು.
‘‘ಬಂಡೀಪುರ-ನಾಗರಹೊಳೆ ಸಫಾರಿಯನ್ನು ರಾಜ್ಯ ಸರಕಾರ ಏಕಾಏಕಿ ಪುನರಾರಂಭ ಮಾಡಿಲ್ಲ. ತಜ್ಞರ ಸಮಿತಿ ಮಾಡಿ, ಚರ್ಚಿಸಿಯೇ ತೀರ್ಮಾನ ತೆಗೆದುಕೊಂಡಿದೆ. ರೈತರು ಪ್ರತಿಭಟನೆಗೆ ಮುಂದಾದರೆ ಏನನ್ನು ಹೇಳಲಾಗದು,’’ ಎಂದರು.

