ಅರ್ಥಪೂರ್ಣ ಆಚರಣೆಗೆ ನಿರ್ಧಾರ | ಶಾಸಕ ಎಚ್ .ಕೆ.ಸುರೇಶ್ ಗೌಡ ಅಧ್ಯಕ್ಷತೆಯಲ್ಲಿಸಭೆ
ವಿಕ ಸುದ್ದಿಲೋಕ ಬೇಲೂರು
ಶ್ರೀಚನ್ನಕೇಶವ ಸ್ವಾಮಿ ದೇವರ ರಥೋತ್ಸವ ಮಾ.23ರಿಂದ ಏ.5ರವರೆಗೆ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಶಾಸಕ ಎಚ್ .ಕೆ.ಸುರೇಶ್ ಹೇಳಿದರು.
ಪಟ್ಟಣದ ದೇಗುಲ ಆವರಣದಲ್ಲಿನಡೆದ ಪೂರ್ವಭಾವಿ ಸಭೆಯಲ್ಲಿಮಾತನಾಡಿದರು. ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘‘909 ವರ್ಷ ಕಳೆದಿರುವ ದೇಗುಲದಲ್ಲಿರಥೋತ್ಸವ ವೇಳೆ ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ವಿದ್ಯುತ್ ದೀಪಾಲಂಕಾರ, ಪ್ರಸಾದ ವಿತರಣೆ, ಟ್ರಾಫಿಕ್ ಸಮಸ್ಯೆ, ಆರೋಗ್ಯದ ಅರಿವು ಮೂಡಿಸಲು ಕ್ರಮಕೈಗೊಳ್ಳಬೇಕು,’’ಎಂದರು.
‘‘ಕಾಡಾನೆ ಹಾವಳಿ ಇರುವುದರಿಂದ ರಥೋತ್ಸವ ತಡವಾದರೆ ತೊಂದರೆಯಾಗಲಿದೆ. ನವರಾತ್ರಿ ಮಂಟಪ, ಸಂಸ್ಕೃತ ಪಾಠಶಾಲೆ ದುರಸ್ತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ರಥೋತ್ಸವ ಭಕ್ತರ ರಥೋತ್ಸವ ಆಗಬೇಕು ಹೊರತು ಅಧಿಕಾರಿಗಳ ರಥೋತ್ಸವ ಆಗಬಾರದು. ಎಲ್ಲರ ಸಹಕಾರ, ಸಲಹೆ ಅಗತ್ಯ,’’ಎಂದು ತಿಳಿಸಿದರು.
ಶ್ರೀಚನ್ನಕೇಶವಸ್ವಾಮಿ ದೇವರ ರಥೋತ್ಸವವು ಮಾ.23ರಿಂದ ಏ.5ರವರಗೆ ನಡೆಯಲಿದೆ. ಮಾ.31ರಂದು ಬ್ರಹ್ಮ ರಥೋತ್ಸವ, ಏ.1ರಂದು ನಾಡರಥೋತ್ಸವ ನಡೆಸಲಾಗುತ್ತಿದ್ದು, ಕಳೆದ ವರ್ಷದ ಬಜೆಟ್ , ವ್ಯವಸ್ಥೆ, ನ್ಯೂನ್ಯತೆ, ಸೌಲಭ್ಯ ಇವುಗಳ ಕುರಿತು ಹಲವರು ಮಾತನಾಡಿದರು.
ಸಭೆಯಲ್ಲಿತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ತಾಪಂ ಇಒ ಸತೀಶ್ , ಬಿಇಒ ಭಾಗ್ಯಮ್ಮ, ಪುರಸಭೆ ಅಧ್ಯಕ್ಷೆ ಉಷಾ ಸತೀಶ್ , ಸದಸ್ಯರಾದ ರತ್ನಮ್ಮ ಸತ್ಯನಾರಾಯಣ, ಎ.ಆರ್ .ಅಶೋಕ್ , ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ , ಪುರಸಭೆ ಸಿಒ ಶಿಗ್ಗಾವಿ, ಎಸ್ ಐ ಪಾಟೀಲ್ ,ಮಾಜಿ ಕನ್ವೀನರ್ ಕೆ.ಪಿ.ಶೈಲೇಶ್ , ಜಿ.ಕೆ.ಕುಮಾರ್ , ಕೋಟೆ ಶ್ರೀನಿವಾಸ್ , ಪುರಸಭೆ ಸದಸ್ಯ ಶೈಲೇಶ್ , ಜಗದೀಶ್ , ವಲಯ ಅರಣ್ಯಾಧಿಕಾರಿ ಯತೀಶ್ , ಸೆಸ್ಕ್ ಎಂಜಿನಿಯರ್ ಬಸವರಾಜು, ಕರವೇ ಚಂದ್ರಶೇಖರ್ , ಬಲರಾಮಣ್ಣ, ಮಾಜಿ ಸದಸ್ಯ ಸತೀಶ್ , ಯು.ಟಿ.ಕೇಶವಮೂರ್ತಿ, ವೆಂಕಟೇಶ್ , ಅರುಣ ರಜಪೂತ್ , ಚನ್ನೇಗೌಡ, ಪ್ರಮೋದ್ , ಬಳ್ಳೂರು ಉಮೇಶ್ , ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಸುಂದರರಾಜು, ದೇಗುಲ ಇಒ ಯೋಗೇಶ್ ಮತ್ತಿತರರು ಭಾಗವಹಿಸಿದ್ದರು.
ಸಭೆಯಲ್ಲಿನಿರ್ಣಯ
ವೈಕುಂಠ ಬೀದಿ ನಂತರ ರಸ್ತೆ ಪಕ್ಕ ವ್ಯಾಪಾರ ನಡೆಸುವಂತಿಲ್ಲ. ಭಕ್ತರಿಗೆ ತೊಂದರೆ ಆಗದಂತೆ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ವಿದ್ಯುತ್ ಅಲಂಕಾರ ಮಾಡಬೇಕು. ಬಳ್ಳೂರು ಗ್ರಾಮಸ್ಥರು ಬರುವಾಗ ಮೆರವಣಿಗೆಗೆ ಕಲಾತಂಡ ಒದಗಿಸುವುದು, ನಾಟಪಟೇಲರು, ಅಡ್ಡೇಗಾರರು, ನಾಲ್ಕು ಮೂಲೆ ನಾಡಗೌಡರಿಗೆ ಗೌರವ ಸಲ್ಲಿಸಬೇಕು. ನಾಡರಥದಂದು ಆದಷ್ಟು ಬೇಗ ರಥ ಹೊರಡುವಂತೆ ನೋಡಿಕೊಳ್ಳಬೇಕು. ಕಳೆದ ವರ್ಷದಲ್ಲಿಕೆಲವರಿಗೆ ಬಾಕಿ ಹಣ ಕೊಡಬೇಕಾಗಿದ್ದು, ಅದನ್ನು ಪಾವತಿಸಬೇಕು. ವಿಶೇಷ ಬಸ್ ಸೌಲಭ್ಯ, ಟ್ರಾಫಿಕ್ ಸಮಸ್ಯೆ, ಪ್ರಸಾದ, ಪೂಜಾ ವ್ಯವಸ್ಥೆ, ರಕ್ಷಣೆ, ಸಿಸಿ ಕ್ಯಾಮೆರಾ ಅಳವಡಿಸಬೇಕು, ಸರಕಾರಿ ಕಚೇರಿಗಳ ಮೇಲೆ ವಿದ್ಯುತ್ ಅಲಂಕಾರ ಮಾಡುವುದು ವಿಶೇಷವಾಗಿ ವಿಷ್ಣುಸಮುದ್ರ ಕಲ್ಯಾಣಿ ಸ್ವಚ್ಛತೆ ಮಾಡಿಸುವುದು ಸೇರಿದಂತೆ ಒಟ್ಟಾರೆ ನಾಡ ಹಬ್ಬದಂತೆ ರಥೋತ್ಸವ ಆಚರಿಸಲು ಸಭೆಯಲ್ಲಿನಿರ್ಣಯ ಕೈಗೊಳ್ಳಾಯಿತು.
22 ಬಿಎಲ್ ಆರ್ 02ಪಿ04 ಬೇಲೂರಿನಲ್ಲಿಶ್ರೀಚನ್ನಕೇಶವಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿನಡೆದ ಪೂರ್ವಭಾವಿ ಸಭೆಯಲ್ಲಿಶಾಸಕ ಎಚ್ .ಕೆ.ಸುರೇಶ್ ಮಾತನಾಡಿದರು.

