ಕುರ್ಚಿ ಕಾದಾಟದಿಂದ ಅಭಿವೃದ್ಧಿ ಕುಂಠಿತ: ಸಂಸದ

Contributed byharisha.lakshmipathy@timesgroup.com|Vijaya Karnataka

Mysuru MP Yaduvir Krishnadatta Chamaraja Wadiyar has voiced concerns. He believes the ongoing Chief Minister chair struggle within the Congress party is stalling development in the state. Regarding the KSIC land in T. Narasipur, he stated the state government is adopting a dual policy. The MP emphasized that the KSIC land should be utilized for KSIC's own development.

cm chair tussle putting brakes on karnatakas development yaduveer chamaraja wadiyars sharp criticism

ಮೈಸೂರು: ರಾಜ್ಯದಲ್ಲಿಸಿಎಂ ಕುರ್ಚಿ ಕಾದಾಟದಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಮೈಸೂರು ನಗರದಲ್ಲಿಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಕುರ್ಚಿ ಕಾದಾಟ ಕಾಂಗ್ರೆಸ್ ಆಂತರಿಕ ವಿಚಾರ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಧ್ಯಮದವರು ಏನನ್ನು ಹೇಳುತ್ತಾರೆ ಅಷ್ಟೇ ಗೊತ್ತಿರುವುದು. ಆದರೆ, ಕಾದಾಟದಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ,’’ ಎಂದು ಹೇಳಿದರು. ತಿ.ನರಸೀಪುರದಲ್ಲಿಕೆಎಸ್ ಐಸಿ ಭೂಮಿಯನ್ನು ಕ್ರೀಡಾಂಗಣಕ್ಕೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ‘‘ಈ ಬಗ್ಗೆ ರಾಜ್ಯ ಸರಕಾರ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಕೆಎಸ್ ಐಸಿ ಜಾಗವನ್ನು ಕೆಎಸ್ ಐಸಿ ಅಭಿವೃದ್ಧಿಗೆ ಬಳಸಬೇಕು. ಇದು ನಮ್ಮ ಒತ್ತಾಯ, ಈ ಬಗ್ಗೆ ನಾವು ಹೋರಾಟ ಮಾಡುತ್ತೇವೆ,’’ ಎಂದರು.