ಕುಂದಾಪುರ: ಕೆಂಪು ಪುಸ್ತಕ ದಿನಾಚರಣೆ

Contributed byjohn.dsouza@timesofindia.com|Vijaya Karnataka

ಕುಂದಾಪುರದಲ್ಲಿ ಕೆಂಪು ಪುಸ್ತಕ ದಿನಾಚರಣೆ ಅಂಗವಾಗಿ ಯುಎಸ್ ಸಾಮ್ರಾಜ್ಯಶಾಹಿ ವಿರೋಧಿ ಪುಸ್ತಕ ಓದು ಕಾರ್ಯಕ್ರಮ ನಡೆಯಿತು. ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ ಕಲ್ಲಾಗರ ಅವರು ಯುಎಸ್ ಸಾಮ್ರಾಜ್ಯಶಾಹಿ ಭಾರತದ ನೀತಿ ನಿರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಕಾರ್ಮಿಕರ, ರೈತರ ಹಕ್ಕುಗಳನ್ನು ರದ್ದುಗೊಳಿಸುವ ಮತ್ತು ದುಬಾರಿ ಬೆಲೆಗೆ ತೈಲ ಆಮದು ಮಾಡಿಕೊಳ್ಳುವ ನೀತಿಗಳ ವಿರುದ್ಧ ದುಡಿಯುವ ವರ್ಗ ಒಂದಾಗಿ ಹೋರಾಡಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.

red book day fighting against american imperialism

ಕುಂದಾಪುರ: ಕಾಲ್ ರ್ ಮಾರ್ಕ್ಸ್ ಹಾಗೂ ಫೆಡ್ರಿಕ್ ಎಂಗೆಲ್ಸ್ ಅವರ ಕಮ್ಯುನಿಸ್ಟ್ ಪ್ರಣಾಳಿಕೆಯ ಕೆಂಪು ಪುಸ್ತಕ ದಿನಾಚರಣೆ ಪ್ರತಿ ಫೆ.21ರಂದು ತಿಂಗಳುಗಳ ಕಾಲ ಜಗತ್ತಿನಾದ್ಯಂತ ನಡೆಯುತ್ತದೆ. ಭಾರತದಲ್ಲಿಈ ಬಾರಿ ಯುಎಸ್ ಸಾಮ್ರಾಜ್ಯಶಾಹಿ ವಿರೋಧಿ ಪುಸ್ತಕ ಓದುವುದು ಫೆ.21 ರಿಂದ ಆರಂಭಗೊಂಡಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ಇಲ್ಲಿನ ಹೆಂಚು ಕಾರ್ಮಿಕರ ಭವನದಲ್ಲಿರೆಡ್ ಬುಕ್ ಡೇ ದಿನದ ಅಂಗವಾಗಿ ಹಮ್ಮಿಕೊಂಡ ಯುಎಸ್ ಸಾಮ್ರಾಜ್ಯಶಾಹಿ-ಭಾರತ ಜನತೆಯ ಶತ್ರು ಪುಸ್ತಕ ಓದು ಕಾರ್ಯಕ್ರಮದಲ್ಲಿಮಾತನಾಡಿದರು.

ಬ್ರಿಟಿಷ್ ಸಾಮ್ರಾಜ್ಯಶಾಹಿ ಆಳ್ವಿಕೆಯ ವಿರುದ್ಧ ಹೋರಾಟ ನಡೆಸಿ ಸ್ವಾತಂತ್ರ್ಯ ಗಳಿಸಿದ ಇತಿಹಾಸ ನಮ್ಮ ದೇಶದ್ದು. ಆದರೆ ಇಂದು ಯುಎಸ್ ಸಾಮ್ರಾಜ್ಯಶಾಹಿ ನಮ್ಮನ್ನು ನೇರವಾಗಿ ಆಳ್ವಿಕೆ ಮಾಡದಿದ್ದರೂ ದೇಶದ ನೀತಿ ನಿರೂಪಣೆಯಲ್ಲಿಮಹತ್ವದ ಪಾತ್ರ ವಹಿಸುತ್ತಿದೆ. ಅಮೆರಿಕ ಸಾಮ್ರಾಜ್ಯಶಾಹಿಯು ಮಿಲಿಟರಿ ದಾಳಿಯ ಬೆದರಿಕೆ ಹಾಕಿ ಒಂದು ದೇಶದ ಸರಕಾರದ ನೀತಿಗಳನ್ನು ಬದಲಾಯಿಸಲು ಒತ್ತಡ ಹಾಕುವುದು ನೋಡುತ್ತಿದ್ದೇವೆ. ಈ ಒತ್ತಡ ಭಾರತ ದೇಶದ ಮೇಲೂ ಹಾಕುತ್ತಿದ್ದು ಕಾರ್ಮಿಕರ, ರೈತರ ಹಕ್ಕು, ಕಾಯಿದೆಗಳನ್ನು ರದ್ದುಗೊಳಿಸುವ, ಕಡಿಮೆ ಬೆಲೆಗೆ ತೈಲ ಪಡೆಯುವುದನ್ನು ತಪ್ಪಿಸಿ ಅಮೆರಿಕದಿಂದಲೇ ದುಬಾರಿ ಬೆಲೆಗೆ ತೈಲ ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಿಸುತ್ತಿರುವುದು ಅಮೆರಿಕ ಸಾಮ್ರಾಜ್ಯಶಾಹಿ ನೀತಿಗಳು. ಇಂತಹ ನೀತಿಗಳ ವಿರುದ್ಧ ದುಡಿಯುವ ವರ್ಗದ ಜನರು ಒಂದಾಗಿ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದರು.

ಚಿಕ್ಕ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಪೂಜಾರಿ, ಅಣ್ಣಪ್ಪ ಅಬ್ಬಿಗುಡ್ಡಿ, ರೆಹಮಾನ್ , ರಾಧಾ, ನಾಗೇಶ್ ಕುಲಾಲ್ ಉಪಸ್ಥಿತರಿದ್ದರು. ರಾಘವೇಂದ್ರ ದೋಣಿಮನೆ ಪುಸ್ತಕ ಓದು ನಡೆಸಿಕೊಟ್ಟರು. ಉಮೇಶ್ ಆಚಾರ್ಯ ವಂದಿಸಿದರು.

ಫೊಟೋ: 23ಕೆ-ಬಿಓಕೆ

ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ ಕಲ್ಲಾಗರ ಮಾತನಾಡಿದರು.