ವಿಕ ಸುದ್ದಿಲೋಕ ಪುತ್ತೂರು
ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ನೇತೃತ್ವದಲ್ಲಿನನ್ನ ಭಾರತಕ್ಕಾಗಿ ಯುವ ಜನತೆ- ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ ಎಂಬ ಶಿರೋನಾಮೆಯೊಂದಿಗೆ ವಾರ್ಷಿಕ ವಿಶೇಷ ಶಿಬಿರ ಪೆರ್ನೆ ಅಯೋಧ್ಯಾನಗರ ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯದಲ್ಲಿನಡೆಯಿತು.
ಉಚ್ಚ ನ್ಯಾಯಾಲಯದ ವಕೀಲ ಹರೀಶ್ ಭಂಡಾರಿ ಟಿ. ಉದ್ಘಾಟಿಸಿ, ನಾನು ಕೂಡ ವಿದ್ಯಾರ್ಥಿ ದೆಸೆಯಲ್ಲಿರುವಾಗ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಕೊಂಡಿದ್ದೆ. ವಿದ್ಯಾರ್ಥಿ ಜೀವನದಲ್ಲಿಎನ್ನೆಸ್ಸೆಸ್ ನಮಗೆ ಉತ್ತಮ ಪಾಠ ಕಲಿಸುತ್ತದೆ. ಶ್ರಮ ಸಂಸ್ಕೃತಿ ಮತ್ತು ಸಹಬಾಳ್ವೆಯನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಎನ್ನೆಸ್ಸೆಸ್ ಮೂಲಕ ಸಮಾಜ ಮುಖಿ ಚಿಂತನೆ ರೂಪಿಸಿಕೊಳ್ಳಬೇಕು ಎಂದರು.
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲ್ ಅಧ್ಯಕ್ಷತೆ ವಹಿಸಿದ್ದರು. ಪೆರ್ನೆ ಕಾಲೇಜಿನ ಪ್ರಿನ್ಸಿಪಾಲ್ ಶೇಖರ್ ರೈ ಕೆ., ಅಯೋಧ್ಯಾ ನಗರ ಶ್ರೀ ರಾಮಚಂದ್ರ ಪ್ರೌಢಶಾಲೆ ಮುಖ್ಯ ಶಿಕ್ಷಕ ಸತ್ಯನಾರಾಯಣ ರೈ ಕೆ.ಎಂ. ಶುಭ ಹಾರೈಸಿದರು.
ಅಕ್ಷಯ ಕಾಲೇಜಿನ ಪ್ರಿನ್ಸಿಪಾಲ್ ಸಂಪತ್ ಕೆ. ಪಕ್ಕಳ ಮಾತನಾಡಿ, ನಮ್ಮ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯು 14 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡು ಇದೀಗ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಿದೆ. ವಾರ್ಷಿಕ ವಿಶೇಷ ಶಿಬಿರದಲ್ಲಿ 75 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.
ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ , ಆಡಳಿತ ಅಧಿಕಾರಿ ಅರ್ಪಿತ್ ಟಿ.ಎ. ಉಪಸ್ಥಿತರಿದ್ದರು. ಶಿಬಿರಾಧಿಕಾರಿ ರಾಕೇಶ್ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರಾಧಿಕಾರಿ ಮೇಘಶ್ರೀ ಸ್ವಾತಗಸಿ, ಘಟಕ ನಾಯಕ ಸುಹಾಸ್ ವಂದಿಸಿದರು. ವಿಂದುಶ್ರೀ ಕಾರ್ಯಕ್ರಮ ನಿರೂಪಿಸಿದರು.
ಫೋಟೋ: 23ಪಿ-ಎನ್ನೆಸ್ಸೆಸ್
ಅಕ್ಷಯ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಪೆರ್ನೆ ಅಯೋಧ್ಯಾನಗರ ಪ.ಪೂ. ಕಾಲೇಜಿನಲ್ಲಿಉದ್ಘಾಟನೆಗೊಂಡಿತು.

