ಕೈಗಾರಿಕಾ ವಸ್ತು ಪ್ರದರ್ಶನ 28ರಿಂದ

Contributed bymanjunathrd59@gmail.com|Vijaya Karnataka

ಹಾವೇರಿ ಜಿಲ್ಲಾ ಗುರುಭವನದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 4ರ ವರೆಗೆ ಐದು ದಿನಗಳ ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಗ್ರಾಮೀಣ ಕುಶಲಕರ್ಮಿಗಳು, ಸಣ್ಣ ಕೈಗಾರಿಕೆಗಳು, ಖಾದಿ, ಕೈಮಗ್ಗ ಸಂಘಗಳು, ಸ್ವ-ಸಹಾಯ ಗುಂಪುಗಳು ತಯಾರಿಸಿದ ವಸ್ತುಗಳು ಪ್ರದರ್ಶನಗೊಳ್ಳಲಿವೆ. ಕರಕುಶಲ ವಸ್ತುಗಳು, ಅಲಂಕಾರಿಕ ವಸ್ತುಗಳು, ಆಹಾರ ಉತ್ಪನ್ನಗಳು, ಖಾದಿ, ಜವಳಿ, ಅಗರಬತ್ತಿ, ಸೀರೆಗಳು, ಬ್ಯಾಗ್‌ಗಳು, ಗೊಂಬೆಗಳು, ಆಭರಣಗಳು ಮಾರಾಟಕ್ಕೆ ಲಭ್ಯವಿರಲಿವೆ. ಹೆಚ್ಚಿನ ಮಾಹಿತಿಗೆ 08375-249065 ಸಂಪರ್ಕಿಸಬಹುದು.

industrial goods exhibition in haveri from 28th february to 4th march

ಹಾವೇರಿ : ಜಿಪಂ ಗ್ರಾಮೀಣ ಕೈಗಾರಿಕೆ ವಿಭಾಗದಿಂದ ಫೆ.28 ರಿಂದ ಮಾ.4ರ ವರೆಗೆ ಐದು ದಿನಗಳ ಜಿಲ್ಲಾಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಹಾವೇರಿ ನಗರದ ಜಿಲ್ಲಾಗುರುಭವನದಲ್ಲಿಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಕುಶಲಕರ್ಮಿಗಳು, ಅತೀ ಸಣ್ಣ, ಸಣ್ಣ ಕೈಗಾರಿಕೆಗಳು, ಖಾದಿ ಗ್ರಾಮೋದ್ಯೋಗ, ಕೈಮಗ್ಗ ಮತ್ತು ಜವಳಿ ಸಂಘಗಳು ಮತ್ತು ಸ್ವ-ಸಹಾಯ ಗುಂಪುಗಳು ತಯಾರಿಸುವ ಕರಕುಶಲ ವಸ್ತುಗಳು, ಬಿದರಿನ ಅಲಂಕಾರಿಕ ವಸ್ತುಗಳು, ಟೇರಾಕೋಟ, ಆಹಾರ ಉತ್ಪನ್ನಗಳು, ಖಾದಿ, ಕೈಮಗ್ಗ, ಜವಳಿ ಉತ್ಪನ್ನಗಳು, ಅಗರಬತ್ತಿ, ಕಸೂತಿ ಸೀರೆಗಳು, ಬ್ಯಾಗ್ , ಗೊಂಬೆಗಳು, ಕೃತಕ ಆಭರಣಗಳು ಹಾಗೂ ಇತರೆ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಲ್ಪಿಸಲಾಗಿದೆ. ಮಾಹಿತಿಗೆ ದೂ.08375-249065ನ್ನು ಸಂಪರ್ಕಿಸಲು ಕೋರಲಾಗಿದೆ.