ಮಾವಿನಹಳ್ಳಿ ಬಸವೇಶ್ವರಸ್ವಾಮಿ ತೇಧಿರು

Contributed byravimgl.kumar13@gmail.com|Vijaya Karnataka

ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರಸ್ವಾಮಿ ರಥೋತ್ಸವ ಫೆಬ್ರವರಿ 22 ರಿಂದ 27 ರವರೆಗೆ ನಡೆಯಲಿದೆ. ವಿವಿಧ ಉತ್ಸವಗಳು, ಸಾಮೂಹಿಕ ವಿವಾಹ, ಕೆಂಡದಾರ್ಚನೆ ಸೇವೆಗಳು ಆಯೋಜಿಸಲಾಗಿದೆ. ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಫೆಬ್ರವರಿ 26 ರಂದು ಮುಖ್ಯ ರಥೋತ್ಸವ ಜರುಗಲಿದೆ. ಫೆಬ್ರವರಿ 27 ರಂದು ಸೇವೆಗಳು ಸಂಪನ್ನಗೊಳ್ಳಲಿವೆ.

mavinahalli basaveshwara swami rathotsava 2023 updates and events

ಮಾವಿನಹಳ್ಳಿ ಬಸವೇಶ್ವರಸ್ವಾಮಿ ತೇಧಿರು

ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಬಸವಾಪುರದ ಶ್ರೀಮಾವಿನಹಳ್ಳಿ ಬಸವೇಶ್ವರಸ್ವಾಮಿ ರಥೋತ್ಸವ ಅಂಗವಾಗಿ ಕಳೆದ ಫೆ.22ರಿಂದ ಫೆ.27ರವರೆಗೆ ನಾನಾ ರೀತಿಯ ಕಾರ್ಯಕ್ರಮ ಆಯೋಜಿಸಿದ್ದು ಸೋಮವಾರ ಅಶ್ವೋತ್ಸವ ಜರುಗಿತು.

ಭಾನುವಾರ ರುದ್ರಾಭಿಷೇಕ, ಕಂಕಣಧಾರಣೆ, ಪಲ್ಲಕ್ಕಿ ಉತ್ಸವ ಧ್ವಜಾರೋಹಣ ನೆರವೇರಿದ್ದು ಫೆ.24ರಂದು ವೃಷಭೋತ್ಸವ, ಫೆ.25ರಂದು ಹೂವಿನ ಉತ್ಸವ, ಸ್ವಾಮಿಗೆ ಗಜೋತ್ಸವ ಹಾಗೂ 10ಕ್ಕೆ ಕೆಂಡದಾರ್ಚನೆ ಸೇವೆ, ಫೆ.26ರಂದು ಸ್ವಾಮಿ ಸಾನ್ನಿಧಿಧ್ಯದಲ್ಲಿಬೆಳಗ್ಗೆ 11ಕ್ಕೆ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭದಲ್ಲಿಮಧು-ವರನಿಗೆ ಬಟ್ಟೆ, ವಧುವಿಗೆ ತಾಳಿ ನೀಡಲಾಗುವುದು. ವಿವಾಹ ಕಾರ್ಯಕ್ರಮದಲ್ಲಿಭಾಗವಹಿಸುವವರು ದೇವಸ್ಥಾನದಲ್ಲಿಹೆಸರು ನೋಂದಾಯಿಸಬಹುದಾಗಿದೆ. ಸಂಜೆ 4ಕ್ಕೆ ಹೂವಿನ ಅಡ್ಡಪಲ್ಲಕ್ಕಿ ನಂತರ 5 ಗಂಟೆಗೆ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ನಡೆಯಲಿದ್ದು, ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನ್ನ ದಾಸೋಹ ನೆರವೇರಲಿದೆ. ಫೆ.27ರಂದು ಕಂಕಣ ವಿಸರ್ಜನೆ ಹಾಗೂ ಮಹಾಮಂಗಳಾರತಿಯೊಂದಿಗೆ ಸ್ವಾಮಿ ರಥೋತ್ಸವದ ಸೇವೆಗಳು ಮುಕ್ತಾಯವಾಗಲಿದೆ ಎಂದು ಮಾವಿನಹಳ್ಳಿ ಬಸವೇಶ್ವರಸ್ವಾಮಿ ಟ್ರಸ್ಟ್ ಉಪಾಧ್ಯಕ್ಷ ಬಿ.ಎಸ್ .ವಿಶ್ವನಾಥಪ್ಪ ಪಟೇಲ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಫೋಟೊ/ಮಾವಿನಹಳ್ಳಿ ಬಸವೇಶ್ವರ

=====