5 ತಿಂಗಳಿಂದ ವೇತನ ಇಲ್ಲದೆ ಪೌರಕಾರ್ಮಿಕರ ಪರದಾಟ
ವಿಕ ಸುದ್ದಿಲೋಕ ಹಾರೋಹಳ್ಳಿ : ಪಟ್ಟಣದ ಪುರಸಭೆಯಲ್ಲಿನೇರ ನೇಮಕಾತಿಗೊಂಡಿರುವ 11ಮಂದಿ
ಪೌರ ಕಾರ್ಮಿಕರು 5 ತಿಂಗಳಿಂದ ವೇತನ ಇಲ್ಲದೆ ಪರದಾಡುತ್ತಿದ್ದಾರೆ. ಪುರಸಭೆಗೆ ಪೌರ ಕಾರ್ಮಿಕರಿಗೆ ವೇತನ
ಪಾವತಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹಾರೋಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿಒಟ್ಟು 42 ಮಂದಿ ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು,
ಹೊರಗುತ್ತಿಗೆಯಲ್ಲಿ24 ಮಂದಿ, ಹಾರೋಹಳ್ಳಿ ಗ್ರಾಮ ಪಂಚಾಯಿತಿಯಿದ್ದಾಗ ನೇಮಕಗೊಂಡಿದ್ದ 4 ಮಂದಿ , ನೇಮಕಾತಿಯಾಗಿರುವವರು 14 ಮಂದಿ ಪುರಸಭೆ ವ್ಯಾಪ್ತಿಯಲ್ಲಿಕಾರ್ಯ ನಿರ್ವಹಿಸುತ್ತಿದ್ದಾರೆ. ನೇಮಕಾತಿಯಾಗಿರುವ 14 ಮಂದಿ ಪೈಕಿ 11ಮಂದಿಗೆ 5 ತಿಂಗಳಿಂದ ವೇತನ ಪಾವತಿಯಾಗಿಲ್ಲ.
ಪುರಸಭೆ ವ್ಯಾಪ್ತಿಯ 11ಮಂದಿ ನೇರ ನೇಮಕಾತಿ ಪೌರ ಕಾರ್ಮಿರಿಗೆ ಕಳೆದ ವರ್ಷ ಅಕ್ಟೋಬರ್ , ನವೆಂಬರ್ , ಡಿಸೆಂಬರ್ , ಈ ವರ್ಷದ ಜನವರಿ, ಫೆಬ್ರವರಿ ಒಟ್ಟು 5ತಿಂಗಳ ವೇತನ ಇದುವರೆಗೂ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ನೇಮಕಾತಿ ಪತ್ರ ಬರದ ಕಾರಣ ಈ ರೀತಿಯ ತೊಂದರೆಯುಂಟಾಗಿದೆ. ಇತ್ತ
ಪೌರ ಕಾರ್ಮಿಕರು 5ತಿಂಗಳಿಂದ ವೇತನ ಪಡೆಯದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಆರ್ಥಿಕ ಮುಗ್ಗಟ್ಟು: ಕಳೆದ ಬಾರಿ ಜಿಲ್ಲೆಯಲ್ಲೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ್ದೇವೆ ಎಂದು ಬೀಗುತ್ತಿದ್ದ ಇಲ್ಲಿನ ಅಧಿಕಾರಿಗಳಿಗೆ ಪೌರ ಕಾರ್ಮಿಕರ ಕಷ್ಟ ಕಾಣದಂತಾಗಿದೆ. ಪೌರ ಕಾರ್ಮಿಕರಿಗೆ ವೇತನ ಪಾವತಿಗೂ ಪುರಸಭೆ ಪರದಾಡುತ್ತಿದೆ. ಕರ ಸಂಗ್ರಹಣೆಯಲ್ಲಿನಿರೀಕ್ಷಿತ ಪ್ರಗತಿ ಕಂಡರೂ ಈ ರೀತಿಯ ಪರಿಸ್ಥಿತಿಯೇ ತೆರಿಗೆ ಸಂಗ್ರಹಿಸಿದ ಹಣ ಎಲ್ಲಿಹೋಯಿತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿಕೇಳಿ ಬಂದಿದೆ.
ಪೌರ ಕಾರ್ಮಿಕರೋ, ಜೀತದಾಳುಗಳೋ ?: ಸಾಮಾನ್ಯವಾಗಿ ಎಲ್ಲರಿಗೂ ಸಂಬಳ ಬರುವುದು ಒಂದೆರಡು ದಿನ ತಡವಾದರೆ, ತಾಳಲಾರದ ಚಡಪಡಿಕೆ. ಮನೆ ಬಾಡಿಗೆ, ವಿದ್ಯುತ್ ಬಿಲ್ , ಏನೇನೋ ಚಿಂತೆ ಹೀಗಿರುವಾಗ ಪುರಸಭೆ ಪೌರ ಕಾರ್ಮಿಕರು 5ತಿಂಗಳಿಂದ ವೇತನವಿಲ್ಲದೇ ದುಡಿಯುತ್ತಿದ್ದಾರೆ ಇದನ್ನು ಜೀತವಲ್ಲದೇ ಇನ್ನೇನೆಂದು ಕೆರೆಯಬೇಕು. ಮೊದಲು ಪೌರ ಕಾರ್ಮಿಕರಿಗೆ ವೇತನ ನೀಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೋಟ್ 1; 5 ತಿಂಗಳಿಂದ ವೇತನವಾಗಿಲ್ಲ. ಮನೆ ನಡೆಸಲು ಕಷ್ಟವಾಗುತ್ತಿದೆ ಈ ಬಗ್ಗೆ ಸರಕಾರ ಗಮನಹರಿಸಿ ವೇತನ ಬಿಡುಗಡೆ ಮಾಡಬೇಕು. ನಮ್ಮ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದೇ ತಿಳಿಯುತ್ತಿಲ್ಲ.
ಹೆಸರೇಳಲಿಚ್ಛಿಸದ ಪೌರ ಕಾರ್ಮಿಕ.
ಕೋಟ್ 2; ಈ ವಿಷಯ ನನ್ನ ಗಮನದಲ್ಲಿರಲಿಲ್ಲಮಾಹಿತಿ ಪಡೆದು ಸಮಸ್ಯೆ ಬಗೆ ಹರಿಸುವಲ್ಲಿಕ್ರಮ ಕೈಗೊಳ್ಳುವ
ಕೆಲಸ ಮಾಡಲಾಗುವುದು.
ಶೇಖರ್ . ಯೋಜನಾ ನಿರ್ದೇಶಕ. ರಾಮನಗರ.
23ಹಾರೋಹಳ್ಳಿ2 ಹಾರೋಹಳ್ಳಿ ಪುರಸಭೆ ಕಚೇರಿ.

