ಮೈಸೂರು: ತಂಬಾಕು ಬೆಳೆಗಾರರ ಹಿತ ಕಾಪಾಡಲು ಅಗತ್ಯ ತುರ್ತು ಕ್ರಮ ವಹಿಸುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಜಿಲ್ಲಾಡಳಿತದ ಮೂಲಕ ಕೇಂದ್ರ ಸಚಿವ ಪಿಯುಷ್ ಗೋಯಲ್ ಅವರಿಗೆ ಮನವಿಪತ್ರ ಸಲ್ಲಿಸಿದ್ದಾರೆ. ‘‘ಜಿಲ್ಲೆಯ ರೈತರು ತಂಬಾಕು ದರ ಕುಸಿತದಿಂದ ಕಂಗಾಲಾಗಿ ಮಂಡಳಿಯ ಎದುರು ಹರಾಜು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರಕಾರ ಸೂಕ್ತ ಬೆಲೆ ನೀಡುವಲ್ಲಿವಿಫಲವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಿ, ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಹರಾಜು ನಡೆಯುವ ಸಂದರ್ಭದಲ್ಲಿಪಾರದರ್ಶಕತೆ ಇಲ್ಲ. ಕಂಪನಿಯೊಂದಿಗೆ ಶಾಮೀಲಾಗಿ ಅಧಿಕಾರಿಗಳು ರೈತರಿಗೆ ವಂಚನೆ ಮಾಡಿದ್ದಾರೆ,’’ ಎಂದು ದೂರಿದರು. ‘‘ಹರಾಜು ಪ್ರಕ್ರಿಯೆಯಲ್ಲಿಭಾಗವಹಿಸುವ ರೈತರ ರಹದಾರಿ ಪುಸ್ತಕವನ್ನು ಪ್ರತಿವರ್ಷ ನವೀಕರಿಸದೇ ಅಲೆದಾಡಿಸಲಾಗುತ್ತಿದೆ. ಕಡಿಮೆ ದರದಲ್ಲಿತಂಬಾಕು ಖರೀದಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿಕೇಂದ್ರ ಸರಕಾರ ಮಧ್ಯಪ್ರವೇಶಿಸಿ ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು,’’ ಎಂದು ಒತ್ತಾಯಿಸಿದರು. ಕೇಂದ್ರ ಸಚಿವರಿಗೆ ಮನವಿ ಪತ್ರವನ್ನು ಲಕ್ಷ್ಮಣ್ ಅವರು ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿದರು. ಈ ಸಂದರ್ಭದಲ್ಲಿಕಾಂಗ್ರೆಸ್ ಮುಖಂಡರಾದ ಬಿ.ಎಂ.ರಾಮು, ಮಹೇಶ್ ಇದ್ದರು.

