ವಿಕ ಸುದ್ದಿಲೋಕ ಪಾಂಡವಪುರ ತಾಲೂಕಿನ ಬೇಬಿಬೆಟ್ಟದಲ್ಲಿ9 ದಿನಗಳಿಂದ ನಡೆದ ಭಾರಿ ದನಗಳ ಜಾತ್ರಾ ಮಹೋತ್ಸವದಲ್ಲಿಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ನೀಡುವ ಮೂಲಕ ಸೋಮವಾರ ಜಾತ್ರೆಗೆ ತೆರೆ ಎಳೆಯಲಾಯಿತು. ಬೇಬಿಬೆಟ್ಟದ ಜಾತ್ರಾ ಮೈದಾನದಲ್ಲಿನಡೆದ ಸಮಾರೋಪ ಸಮಾರಂಭದಲ್ಲಿಶಿವಬಸವ ಸ್ವಾಮೀಜಿ, ಸುನೀತಾ ಪುಟ್ಟಣ್ಣಯ್ಯ, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ವಿತರಿಸಲಾಯಿತು. ಜೋಡೆತ್ತು, ಹಸುಗಳು ಹಾಗೂ ಹೋರಿಗಳ ವಿಭಾಗ ಸೇರಿದಂತೆ ಒಟ್ಟಾರೆ 193.5 ಗ್ರಾಂ ಚಿನ್ನದ ನಾಣ್ಯವನ್ನು ರಾಸುಗಳ ಮಾಲೀಕರಿಗೆ ವಿತರಿಸಲಾಯಿತು. ಬಹುಮಾನಿತ 37 ಜೋಡೆತ್ತುಗಳಿಗೆ 3 ಗ್ರಾಂನಂತೆ 111ಗ್ರಾಂ, ಹಸುಗಳಿಗೆ ತಲಾ 2 ಗ್ರಾಂನಂತೆ 30 ರಾಸುಗಳಿಗೆ 60 ಗ್ರಾಂ, ಹೋರಿಗಳಿಗೆ ತಲಾ ಒಂದೂವರೆ ಗ್ರಾಂನಂತೆ 15ಕ್ಕೆ 22.5 ಗ್ರಾಂ ಚಿನ್ನವನ್ನು ಬಹುಮಾನವಾಗಿ ಜಾತ್ರಾ ಸಮಿತಿಯಿಂದ ನೀಡಲಾಗಿದೆ. ಹಾಲು ಹಲ್ಲಿನ ಹೋರಿ, ಎರಡು ಹಲ್ಲಿನ ಹೋರಿಗಳು, ನಾಲ್ಕು , ಆರು ಹಲ್ಲಿನ ಹೋರಿ, ಬಾಯಿಗೂಡಿದ ಹೋರಿ, ಜೋಡಿ ಕಡಸುಗಳ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿಸ್ಪರ್ಧೆ ನಡೆಯಿತು. ಇದರಲ್ಲಿರಾಮನಗರ, ಕುಣಿಗಲ್ , ಚನ್ನಪಟ್ಟಣ, ಮಂಡ್ಯ, ಮಳವಳ್ಳಿ, ಕೆ.ಆರ್ .ಪೇಟೆ, ಶ್ರೀರಂಗಪಟ್ಟಣ, ಪಾಂಡವಪುರ, ಮೈಸೂರು, ಪಿರಿಯಾಪಟ್ಟಣ, ತಿ.ನರಸೀಪುರ, ಹುಣಸೂರು, ಸಾಲಿಗ್ರಾಮದ ಜಾನುವಾರುಗಳು ಬಹುಮಾನ ಗಳಿಸುವಲ್ಲಿಸಿಂಹಪಾಲು ಹೊಂದಿದವು.

