ಬೇಸಿಗೆ ಮದುಮಗಳ ಅಲಂಕಾರ

Contributed byshubha.hegde@timesgroup.com|Vijaya Karnataka

Brides in 2026 will embrace natural beauty for summer weddings. The focus is on glowing skin and pastel shades for makeup. Hairstyles will be relaxed and adorned with flowers. Light fabrics like organza and tissue silk will be popular for attire. Jewelry will be minimalist, featuring single strands and subtle embellishments. Comfort and simplicity define the summer bridal look.

2026 summer bridal makeup trends natural look pastel sarees and simple jewellery

ಲವಲvk ಸುದ್ದಿ ಲೋಕ ್ಛಛಿಛಿdಚಿa್ಚk್ಝvkಃvಜ್ಜಿayka್ಟ್ಞaಠಿaka.್ಚಟಞ ಈ ವರ್ಷದ ಬೇಸಿಗೆಯ ಮದುಮಗಳ ಅಲಂಕಾರದಲ್ಲಿಒಂದಷ್ಟು ಹೊಸತು ಗಳು ಬಂದಿದ್ದು, ಸರಳ ಅಲಂಕಾರವೇ ಪ್ರಮುಖವಾಗಿ ಸೆಳೆದಿದೆ. 2026ರ ಬೇಸಿಗೆಯ ವಿವಾಹ ಮಹೋತ್ಸವಗಳಿಗೆ ಮದುಮಗಳ ಅಲಂಕಾರವು ನೈಸರ್ಗಿಕ ಸೌಂದರ್ಯ ಮತ್ತು ಸರಳತೆ ಸುತ್ತ ಸಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಬಾರಿ ಅತಿ ಹೆಚ್ಚು ಮೇಕಪ್ ಗಿಂತ, ಚರ್ಮದ ಕಾಂತಿ ಎದ್ದು ಕಾಣುವಂತಹ ಶೈಲಿಗಳು ಹೆಚ್ಚು ಜನಪ್ರಿಯವಾಗಿವೆ. ಈ ನಿಟ್ಟಿನಲ್ಲಿಒಂದಷ್ಟು ಬದಲಾವಣೆಗಳನ್ನು ಗಮನಿಸಬಹುದು ಎಂಬುದು ತಜ್ಞರ ಅಭಿಪ್ರಾಯ. ಬೇಸಿಗೆ ಅಂದರೆ ಕಿರಿಕಿರಿ ಆಗುವ ಸಮಯ. ಹೀಗಾಗಿ ವಾತಾವರಣಕ್ಕೆ ಪೂರಕವಾಗಿ ಮೇಕಪ್ ನಿಂದ ದಿರಸಿನವರೆಗೆ ಎಲ್ಲವೂ ಸೀಸನ್ ಫ್ರೆಂಡ್ಲಿಆಗಿವೆ. ಮೇಕಪ್ ಟ್ರೆಂಡ್ : ಗ್ಲಾಸಿ ಸ್ಕಿನ್ ಮತ್ತು ಪಾಸ್ಟಲ್ ವರ್ಣಗಳು ಹೆಚ್ಚು ಚಾಲ್ತಿಯಲ್ಲಿವೆ. ಡ್ಯೂಯಿ ಫಿನಿಶ್ ಮುಖ್ಯವಾಗಿದ್ದು, ಮುಖವು ಜಿಡ್ಡಾಗಿ ಕಾಣದೆ, ನೈಸರ್ಗಿಕವಾಗಿ ಹೊಳೆಯುವಂತೆ ಮಾಡುವ ಗ್ಲಾಸಿ ಸ್ಕಿನ್ ಲುಕ್ ಈಗಿನ ಹಾಟ್ ಫೇವರಿಟ್ . ಮೃದು ವರ್ಣದ ಐಶ್ಯಾಡೋಗಳಲ್ಲಿ ಗುಲಾಬಿ, ಪೀಚ್ ಅಥವಾ ತಿಳಿ ನೇರಳೆ ಬಣ್ಣದ ಕಣ್ಣಿನ ಮೇಕಪ್ ಬೇಸಿಗೆಯ ಮಧ್ಯಾಹ್ನದ ಮದುವೆಗಳಿಗೆ ಸೂಕ್ತ. ಬೆವರಿನಿಂದ ಮೇಕಪ್ ಹಾಳಾಗದಂತೆ ದೀರ್ಘಕಾಲ ಬಾಳಿಕೆ ಬರುವ ಮ್ಯಾಟ್ ಶೇಡ್ ಗಳು, ಅದರಲ್ಲೂವಿಶೇಷವಾಗಿ ನ್ಯೂಡ್ ಮತ್ತು ಸಾಫ್ಟ್ ಪಿಂಕ್ ಬಣ್ಣಗಳು ಟ್ರೆಂಡ್ ನಲ್ಲಿವೆ. ಹೇರ್ ಸ್ಟೈಲ್ : ಬೇಸಿಗೆ ಮದುವೆಯಲ್ಲಿಕೇಶ ವಿನ್ಯಾಸ ವಿಶೇಷ ಮಹತ್ವ ಪಡೆದಿದೆ. ಈ ನಿಟ್ಟಿನಲ್ಲಿ ಬಿಗಿಯಾದ ಜುಟ್ಟಿನ ಬದಲು ಸ್ವಲ್ಪ ಸಡಿಲವಾದ ಮತ್ತು ಕಲಾತ್ಮಕವಾದ ಬನ್ ಶೈಲಿ ಜನಪ್ರಿಯವಾಗಿದೆ. ಇದಕ್ಕೆ ಸಣ್ಣ ಸಣ್ಣ ಬಿಳಿ ಹೂವುಗಳು ಅಥವಾ ಮಲ್ಲಿಗೆಯನ್ನು ಸುತ್ತುವುದು ಈಗಿನ ಫ್ಯಾಷನ್ . ಉದ್ದನೆಯ ಜಡೆಗೆ ನೈಸರ್ಗಿಕ ಹೂವುಗಳನ್ನು ವಿಭಿನ್ನವಾಗಿ ಪೋಣಿಸುವುದು 2026ರ ವಿಶೇಷ. ಉಡುಗೆ: ಹೂವಿನ ವಿನ್ಯಾಸದ ಲೆಹೆಂಗಾ, ತಿಳಿ ಬಣ್ಣದ ಸೀರೆಗಳು ಅಂದರೆ ಸಾಂಪ್ರದಾಯಿಕ ಕೆಂಪು ಅಥವಾ ಮರೂನ್ ಬಣ್ಣದ ಬದಲು ಪೌಡರ್ ಬ್ಲೂ, ಮಿಂಟ್ ಗ್ರೀನ್ ಮತ್ತು ಲ್ಯಾವೆಂಡರ್ ಬಣ್ಣದ ಕಾಂಜೀವರಂ ಸೀರೆಗಳಿಗೆ ಬೇಡಿಕೆ ಹೆಚ್ಚಿದೆ. ಬೇಸಿಗೆಯ ಸೆಕೆಯನ್ನು ತಡೆಯಲು ಹಗುರವಾದ ಆರ್ಗನ್ಜಾ ರೇಷ್ಮೆ ಅಥವಾ ಟಿಶ್ಯೂ ಸಿಲ್ಕ… ಸೀರೆಗಳು ಮದುಮಗಳಿಗೆ ಆರಾಮದಾಯಕ ಮತ್ತು ರಾಯಲ್ ಲುಕ್ ನೀಡುತ್ತವೆ. ಆಭರಣ: ಲೇಯರ್ ಆಭರಣಗಳಿಗಿಂತ ಸರಳ ಒಂದೆಳೆಯ ಸರ ಬೇಸಿಗೆಗೆ ಸೂಕ್ತ. ಈ ನಿಟ್ಟಿನಲ್ಲಿಆಭರಣಗಳ ಸೊಬಗು ಹೆಚ್ಚಿಸುವ ಕೆಂಪು ಹರಳು ಮತ್ತು ಮುತ್ತುಗಳು ಟ್ರೆಂಡಿಂಗ್ ನಲ್ಲಿದ್ದು, ಈ ಬಾರಿ ದೊಡ್ಡ ಹಾರಗಳ ಬದಲು ಸರಳ ಸರಗಳು ಗಮನ ಸೆಳೆದಿವೆ. ಚಿನ್ನದ ಒಡವೆಗಳಲ್ಲಿಹಸಿರು ಅಥವಾ ಕೆಂಪು ಹರಳುಗಳ ಬಳಕೆ ಮದುಮಗಳ ಮೆರುಗನ್ನು ಹೆಚ್ಚಿಸುತ್ತವೆ. ಇನ್ ವಿಸಿಬಲ್ ನೆಕ್ಲೇಸ್ ಗಳು ಸರಳವಾಗಿ ಮುದ ನೀಡುತ್ತವೆ. ಇವು ಸಿಂಪಲ್ ಲುಕ್ ನೀಡುತ್ತವೆ, ಇವುಗಳಲ್ಲಿಅಡಕವಾದ ಪೆಂಡೆಂಟ್ ಮ್ಯಾಚಿಂಗ್ ಉದ್ದೇಶವನ್ನು ಈಡೇರಿಸುತ್ತದೆ. ಒಟ್ಟಾರೆ ಬೇಸಿಗೆ ಮದುವೆಯಲ್ಲಿಸರಳ ಹಾಗೂ ಆರಾಮದಾಯಕವಾಗಿರುವುದೇ ಹೈಲೈಟ್ .