ವಿಕ ಸುದ್ದಿಲೋಕ ಬೀದರ್ ಮಾರ್ಚ್ 28 ಮತ್ತು 29ರಂದು ಬೀದರ್ ನಲ್ಲಿನಡೆಯಲಿರುವ ಪತ್ರಕರ್ತರ 40ನೇ ರಾಜ್ಯ ಸಮ್ಮೇಳನದ ಕಚೇರಿಯನ್ನು ಸೋಮವಾರ ನಗರದ ಪತ್ರಿಕಾ ಭವನದಲ್ಲಿವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. ಸಮ್ಮೇಳನದ ಕಿರು ಹೊತ್ತಿಗೆಯನ್ನು ಜಿಲ್ಲಾಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಬಿಡುಗಡೆ ಮಾಡಿದರೆ, ಸಮ್ಮೇಳನದ ವೆಬ್ ಸೈಟ್ ನ್ನು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅನಾವರಣಗೊಳಿಸಿದರು. ಸಮ್ಮೇಳನವನ್ನು ಕಾಟಾಚಾರಕ್ಕೆ ನಡೆಸುವುದು ಬೇಡ. ಅರ್ಥಪೂರ್ಣವಾಗಿ ನಡೆಯಲಿ. ಇಂದಿನ ಅಗತ್ಯವೇ ಆಗಿರುವ ನೈತಿಕ ಸವಾಲುಗಳು ಹಾಗೂ ಮಾಧ್ಯಮದಲ್ಲಿತಾಂತ್ರಿಕತೆಯ ಅಳವಡಿಕೆ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆಯಲಿ. ಅಭಿವೃದ್ಧಿ ಪತ್ರಿಕೋದ್ಯಮ ಪಕ್ಕಕ್ಕೆ ಸರಿದು, ಸ್ಟೇಟ್ ಮೆಂಟ್ ಆಧಾರಿತ ಪತ್ರಿಕೋದ್ಯಮ ನಡೆಯುತ್ತಿದ್ದು, ಮಾಧ್ಯಮ ಜಗತ್ತಿನ ಮಂಥನ ನಡೆಯಲಿ ಎಂದು ಗಣ್ಯರು ಹೇಳಿದರು. ಎಐ ಕಾಲವಿದು. ಪತ್ರಕರ್ತರು ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕಿದೆ. ಪತ್ರಿಕೋದ್ಯಮದ ಆದ್ಯತೆಗಳನ್ನೂ ಮರು ಪರಿಶೀಲನೆಗೆ, ಚರ್ಚೆಗೆ ಒಳಪಡಿಸಬೇಕಿದೆ. ಆಗುತ್ತಿರುವ ತೀವ್ರ ಬೆಳವಣಿಗೆಯಲ್ಲಿಎಲ್ಲವನ್ನೂ ಅರಿಯುವ ಮತ್ತು ಅಪಾಯಗಳನ್ನು ತಡೆಯುವ ಕಾರ್ಯಾಗಾರವಾಗಿ ಈ ಬಾರಿಯ ಸಮ್ಮೇಳನ ಯಶಸ್ವಿಯಾಗಲಿ ಎಂದರು. ಸಚಿವ ರಹಿಂಖಾನ್ , ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು.

