ನಿತ್ಯದರ್ಶಿ 24 ಫೆಬ್ರವರಿ 2026

Contributed bynetravati.krishnamurthy@timesgroup.com|Vijaya Karnataka

ಕೆ.ಸುಬ್ರಹ್ಮಣ್ಯ ಆಚಾರ್ಯ ಅವರು 2026 ಫೆಬ್ರವರಿ 24 ರ ನಿತ್ಯದರ್ಶಿ ರಾಶಿ ಭವಿಷ್ಯವನ್ನು ನೀಡಿದ್ದಾರೆ. ಮೇಷ ರಾಶಿಯವರಿಗೆ ಲಾಭದ ಜೊತೆಗೆ ನಷ್ಟದ ಸಾಧ್ಯತೆ ಇದೆ. ವೃಷಭ ರಾಶಿಯವರು ದುಬಾರಿ ವಸ್ತುಗಳ ಖರೀದಿಯಿಂದ ಆರ್ಥಿಕ ನಷ್ಟ ಎದುರಿಸಬಹುದು. ಮಿಥುನ ರಾಶಿಯವರಿಗೆ ಆರೋಗ್ಯ ಸಮಸ್ಯೆ ಪರಿಹಾರ ಸಿಗಲಿದೆ. ಕರ್ಕಾಟಕ ರಾಶಿಯವರಿಗೆ ಮಾನಸಿಕ ಒತ್ತಡ ಹೆಚ್ಚಾಗಬಹುದು. ಸಿಂಹ ರಾಶಿಯ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು. ಕನ್ಯಾ ರಾಶಿಯವರಿಗೆ ವಿದೇಶ ಪ್ರಯಾಣ ಯೋಗವಿದೆ. ತುಲಾ ರಾಶಿಯವರಿಗೆ ಹಲವು ಅವಕಾಶಗಳು ಬರಲಿವೆ. ವೃಶ್ಚಿಕ ರಾಶಿಯವರು ಜಾಗ್ರತೆ ವಹಿಸಬೇಕು. ಧನು ರಾಶಿಯವರಿಗೆ ಆದಾಯ ಹೆಚ್ಚಲಿದೆ.

daily horoscope predictions for february 2026

ನಿತ್ಯದರ್ಶಿ 24 ಫೆಬ್ರವರಿ 2026

ಕೆ.ಸುಬ್ರಹ್ಮಣ್ಯ ಆಚಾರ್ಯ, ಹಿರಿಯಂಗಡಿ, ಕಾರ್ಕಳ

-----------------

ಮೇಷ: ಲಾಭ ಕ್ಷೇತ್ರದಲ್ಲಿನಾಲ್ಕು ಗ್ರಹರ ಯೋಗವಿದೆ. ಇದು ಭಾದಕ ಕ್ಷೇತ್ರವೂ ಆಗಿರುವುದರಿಂದ ಎಚ್ಚರ ಇರಲಿ. ಆದಾಯ ಎಷ್ಟೇ ಬಂದರೂ ನಷ್ಟವೂ ಸಮನಾಗಿರುತ್ತದೆ. ಮಗುವಿನ ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಅದೃಷ್ಟ ಸಂಖ್ಯೆ :07

---------

ವೃಷಭ: ಅಪೂರ್ಣವಾಗಿರುವ ಕೆಲಸಗಳನ್ನು ಪೂರ್ಣ ಮಾಡುವ ಯೋಗವಿದೆ. ಒಂದೇ ವಿಚಾರದ ಬಗ್ಗೆ ಹೆಚ್ಚು ಚಿಂತನೆ ಮಾಡಿದರೆ ಮನಸ್ಸು ಹಾಳಾಗಲಿದೆ. ದುಬಾರಿ ವಸ್ತುಗಳ ಖರೀದಿಯಿಂದ ಆರ್ಥಿಕ ನಷ್ಟವಾಗಲಿದೆ. ಆರೋಗ್ಯದ ಬಗ್ಗೆ ಗಮನಕೊಡಿ.

ಅದೃಷ್ಟ ಸಂಖ್ಯೆ :05 .

----

ಮಿಥುನ: ನಿಮ್ಮ ಆರೋಗ್ಯದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಿದೆ. ನಿಮ್ಮ ಅತಿಯಾದ ಲೆಕ್ಕಾಚಾರ ಕೆಲವು ಸಂಬಂಧಗಳನ್ನು ಹಾಳು ಮಾಡಬಹುದು. ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಆಸೆ ನೆರವೇರುವ ಸಮಯ.

ಅದೃಷ್ಟ ಸಂಖ್ಯೆ :03

-------

ಕರ್ಕಾಟಕ: ಕ್ಷಣಕ್ಷಣದ ಚಿತ್ತ ಚಾಂಚಲ್ಯಕ್ಕೆ ಧ್ಯಾನವೊಂದೇ ಪರಿಹಾರ. ಮಾನಸಿಕ ಒತ್ತಡ ಅಧಿಧಿಕವಾಗಬಹುದು. ಅಗತ್ಯವೆನಿಸಿದರೆ ಮಾನಸಿಕ ವೈದ್ಯರ ಬಳಿಗೆ ತೆರಳಬೇಕಾಗಬಹುದು. ಹಿರಿಯರೊಂದಿಗೆ ತಾಳ್ಮೆಯಿಂದ ವರ್ತಿಸಿ.

ಅದೃಷ್ಟ ಸಂಖ್ಯೆ : 01

-------

ಸಿಂಹ: ವಿದ್ಯಾರ್ಥಿಗಳು ಪ್ರೀತಿ ಪ್ರೇಮದಲ್ಲಿ, ಹನೀ ಟ್ರಾಪ್ ಗೆ ಒಳಗಾಗುವ ಸಾಧ್ಯತೆ ಇದೆ. ದಾಂಪತ್ಯದಲ್ಲಿಮೂರು ತಿಂಗಳುಗಳ ಕಾಲ ಸಂಗಾತಿಯೊಂದಿಗೆ ಹೊಂದಿಕೊಂಡು ಹೋಗುವುದು ಅಗತ್ಯ. ಲಲಿತಾ ಸಹಸ್ರನಾಮ ಪಾರಾಯಣ ಮಾಡಿ.

ಅದೃಷ್ಟ ಸಂಖ್ಯೆ : 05

-------

ಕನ್ಯಾ: ನಿಮ್ಮ ಶಿಸ್ತು ಬದ್ಧ ಜೀವನದಲ್ಲಿಜವಾಬ್ದಾರಿಗಳು ಹೆಚ್ಚಲಿವೆ. ಸರಕಾರದ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯಲಿವೆ. ಉದ್ಯೋಗ ಕ್ಷೇತ್ರದಲ್ಲಿಹಿನ್ನೆಡೆ ಆಗದಂತೆ ಎಚ್ಚರವಹಿಸಿ. ವಿದೇಶ ಪ್ರಯಾಣ ಯೋಗವಿದೆ.

ಅದೃಷ್ಟ ಸಂಖ್ಯೆ : 08

--------

ತುಲಾ: ಗುರು ಬಲ ಉತ್ತಮವಾಗಿರುವ ಈ ಸಮಯದಲ್ಲಿಹಲವಾರು ಅವಕಾಶಗಳು ನಿಮ್ಮೆದುರು ಬರಲಿವೆ. ಮಕ್ಕಳ ಬಗ್ಗೆ ತಾಳ್ಮೆ ಅತಿ ಅಗತ್ಯ. ಗರ್ಭಿಣಿಯರು ಎಚ್ಚರ ವಹಿಸಿ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ.

ಅದೃಷ್ಟ ಸಂಖ್ಯೆ : 06

--------

ವೃಶ್ಚಿಕ: ನವಗ್ರಹರು ನಿಮ್ಮ ಆರೋಗ್ಯ ಮತ್ತು ಮನಸ್ಸನ್ನು ದುರ್ಬಲಗೊಳಿಸಲು ಹಠಮಾಡಿದಂತಿದೆ. ಸುಖ ಸ್ಥಾನದಲ್ಲಿನಾಲ್ಕು ಗ್ರಹರು ಜೊತೆಯಾಗಿದ್ದಾರೆ. ಮೌನವಾಗಿರುವುದೇ ಇದಕ್ಕೆ ಪರಿಹಾರವಾಗಿದೆ. ಮೂರು ತಿಂಗಳ ಕಾಲ ಜಾಗ್ರತೆವಹಿಸಿ.

ಅದೃಷ್ಟ ಸಂಖ್ಯೆ : 03

---------

ಧನು: ಕುಟುಂಬದಲ್ಲಿದ್ದ ಮನಸ್ತಾಪಗಳು ನಿವಾರಣೆಯಾಗಿ ಹಲವಾರು ರೀತಿಯಿಂದ ಆದಾಯ ಬರಲಿದೆ. ಭಾವನಾತ್ಮಕ ಸಂಬಂಧಗಳಿಗೆ ಹೆಚ್ಚಿನ ಬೆಲೆ ಕೊಡಿ. ಸಹೋದರ ವರ್ಗದವರ ಸಹಕಾರ ಸಿಗಲಿದೆ. ವೃತ್ತಿ ಕ್ಷೇತ್ರದಲ್ಲಿಪರಿವರ್ತನೆ ಕಂಡು ಬರಲಿದೆ.

ಅದೃಷ್ಟ ಸಂಖ್ಯೆ :01

-------

ಮಕರ: ದೈವಾನುಗ್ರಹ ಇಲ್ಲದಿರುವುದರಿಂದ ಆರ್ಥಿಕವಾಗಿ ಲಾಭದಾಯಕ ಸಮಯವಾದರೂ ಖರ್ಚಿನ ಬಗ್ಗೆ ನಿಯಂತ್ರಣವಿರಲಿ. ಸುಲಭದಿಂದ ಆಗುವ ಕೆಲಸಗಳಿಗೂ ಅತಿಯಾದ ಪರಿಶ್ರಮ ಪಡಬೇಕಾಗುತ್ತದೆ.

ಅದೃಷ್ಟ ಸಂಖ್ಯೆ :04

--------

ಕುಂಭ: ವ್ಯವಹಾರ ಕ್ಷೇತ್ರ, ಉದ್ಯೋಗರಂಗದಲ್ಲಿಅದೃಷ್ಟದ ದಿನಗಳಾಗಿವೆ. ಜನ್ಮ ರಾಶಿಯಲ್ಲಿಬಂದಿರುವ ನಾಲ್ಕು ಗ್ರಹರು, ನಿಮ್ಮವರೇ ಶತ್ರುಗಳಾಗಿ ವರ್ತಿಸುವಂತೆ ಮಾಡಲಿದ್ದಾರೆ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ.

ಅದೃಷ್ಟ ಸಂಖ್ಯೆ: 02

----------

ಮೀನ: ಮಕ್ಕಳ ಶಿಕ್ಷಣದ ಬಗ್ಗೆ ಸರಿಯಾದ ಮಾರ್ಗದರ್ಶನ ಅಗತ್ಯವಿದೆ. ವ್ಯಯದಲ್ಲಿನಾಲ್ಕು ಗ್ರಹರು ಬಂದಿರುವುದರಿಂದ ಮೌನ , ತಾಳ್ಮೆ, ಸಂಯಮ ನಿಮ್ಮ ಮಂತ್ರವಾಗಿರಲಿ. ಮನೆಯೆನ್ನುವುದು ಕಾರಾಗೃಹದಂತೆ ಭಾಸವಾಗಲಿದೆ.

ಅದೃಷ್ಟ ಸಂಖ್ಯೆ : 09