ವೆಂಕಟೇಶ್ವರಸ್ವಾಮಿ ದೇಗುಲಕ್ಕೆ ದೇಣಿಗೆ
(ಅಯೋಧ್ಯೆ ಬಾಲ ರಾಮನ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ರಿಂದ ವೆಂಕಟೇಶ್ವರಸ್ವಾಮಿ ವಿಗ್ರಹ ಕೆತ್ತನೆ )
ವಿಕ ಸುದ್ದಿಲೋಕ ಹೊಸಕೋಟೆ
ನಗರದ ಮೇಲಿನಪೇಟೆಯಲ್ಲಿನಿರ್ಮಾಣವಾಗುತ್ತಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ವಹ್ನೀಕುಲ ತಿಗಳರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ಸಿ ಜಯರಾಜ್ 2 ಲಕ್ಷ ರೂಪಾಯಿ ನೀಡಿದರು.
ದೇವಾಲಯದ ಆಡಳಿತ ಮಂಡಳಿಯ ಸೋಲಪ್ಪ ಅವರ ಮಗ ಹಾಗೂ ವೈಷ್ಣವಿ ಫ್ಲವರ್ ಮಾಲೀಕರಾದ ಸುರೇಶ್ ಕುಮಾರ್ ನೇತೃತ್ವದಲ್ಲಿದೇವಾಲಯ ನಿರ್ಮಾಣಗೊಳ್ಳುತ್ತಿದೆ. ಅಯೋಧ್ಯೆಯ ಶ್ರೀಬಾಲ ರಾಮನ ವಿಗ್ರಹವನ್ನು ಕೆತ್ತನೆ ಮಾಡಿದ ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರಿಂದ ದೇವರ ವಿಗ್ರಹ ರೂಪಗೊಳ್ಳುತ್ತಿದೆ. ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ವಿಗ್ರಹ ಹಾಗೂ ಗರುಡಗಂಭ ನಿರ್ಮಾಣಗೊಳ್ಳುತ್ತಿದೆ.
ದೇಣಿಗೆ ನೀಡಿದ ಡಾ.ಸಿ.ಜಯರಾಜ್ ಮಾತನಾಡಿ, ಮಾಲೂರು ಭಾಗದಲ್ಲಿರುವ ಚಿಕ್ಕತಿರುಪತಿ ಮಾದರಿಯಲ್ಲಿದೇವಾಲಯ ನಿರ್ಮಾಣ ಮಾಡಲಾಗುತ್ತಿದೆ. ಈ ಭಾಗದ ಜನರಿಗೆ ದೇವರ ದರ್ಶನ ಭಾಗ್ಯ ಶೀಘ್ರದಲ್ಲಿದೊರೆಯಲಿದೆ ಎಂದರು.
ಮೇಲಿನ ಪೇಟೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಉಮೇಶ್ ಹಾಜರಿದ್ದರು.
ಚಿತ್ರ-23 ಸೂಲಿಬೆಲೆ 8
ಹೊಸಕೋಟೆಯ ಮೇಲಿನಪೇಟೆಯಲ್ಲಿ ನಿರ್ಮಾಣಗೊಳ್ಳುತಿರುವ ಶ್ರೀ ವೇಂಕಟೇಶ್ವರಸ್ವಾಮಿ ದೇವಾಲಯಕ್ಕೆ ವಹ್ನೀಕುಲ ಕ್ಷತ್ರಿಯ ತಿಗಳ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ಸಿ ಜಯರಾಜ್ ದೇವಾಲಯ ಆಡಳಿತ ಮಂಡಳಿಯ ಸುತೇಶ್ ಕುಮಾರ್ ಅವರಿಗೆ 2 ಲಕ್ಷ ರೂಪಾಯಿ ನೀಡಿದರು.

