ದರ್ಶನ್ ಶಸ್ತಾ್ರಸ್ತ್ರ ಪರವಾನಧಿಗಿ ಅಮಾನತು ಕ›ಮಕ್ಕೆ ತಡೆ

Contributed byPunith AR|Vijaya Karnataka

The Karnataka High Court has put a temporary halt to the police's decision to suspend actor Darshan's arms license. This action comes after Darshan sought bail in the Renuka Swamy murder case. The court has issued notices to the state government and the DCP. The next hearing is scheduled for March 6. The license was initially obtained in 2008.

renukaswamy murder case high court stays suspension of actor darshans arms licence

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರಿಗೆ ಮಂಜೂರಾಗಿದ್ದ ಶಸ್ತಾ್ರಸ್ತ್ರ ಪರವಾನಗಿ ಅಮಾನತಿನಲ್ಲಿಟ್ಟಿರುಧಿವ ಪೊಲೀಸ್ ಇಲಾಖೆ ಕ್ರಮಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ. ಅಲ್ಲದೆ, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರ ಮತ್ತು ಆಡಳಿತ ವಿಭಾಗದ ಡಿಸಿಪಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಅರ್ಜಿದಾರರು ಶಸ್ತಾ್ರಸ್ತ್ರ ಕಾಯಿದೆಯಡಿ 2008ರಲ್ಲಿಪಿಸ್ತೂಲ್ ಹೊಂದಲು ಪರವಾಧಿನಧಿಗಿ ಪಡೆದು ಕೊಂಡಿ ದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜಾಮೀನು ಪಡೆದ ಸಂದರ್ಭದಲ್ಲಿಪರವಾನಧಿಗಿ ಅಮಾನತು ಮಾಡಲಾಗಿದೆ ಎಂಬುದಾಗಿ ಅರ್ಜಿ ದಾರರ ಪರ ವಕೀಲರು ತಿಳಿಸಿದ್ದಾರೆ. ಮುಂದಿನ ವಿಚಾರಣೆ ವರೆಗೂ ಆಡಳಿತ ವಿಭಾಗದ ಡಿಸಿಪಿ ಆದೇಶಕ್ಕೆ ತಡೆ ನೀಡಲಾಗುತ್ತಿದೆ ಎಂದು ತಿಳಿಸಿದ ಪೀಠ, ವಿಚಾರಣೆ ಮಾರ್ಚ್ 6ಕ್ಕೆ ಮುಂದೂಡಿದೆ.