ಕಪಲ್ ಗೋಲ್ (ಸ್ಲಗ್ )
ಸೋನಾಕ್ಷಿ-ಜಹೀರ್ ಪ್ರೇಮ ಪಯಣ
ಲವಲವಿಕೆ ಸುದ್ದಿಲೋಕ
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ದಂಪತಿ ಸೋಶಿಯಲ್ ಮೀಡಿಯಾದಲ್ಲಿಆಗಾಗ ತಮ್ಮ ದಾಂಪತ್ಯ ಬದುಕಿನ ಸಂಭ್ರಮವನ್ನು ಅನಾವರಣಗೊಳಿಸುತ್ತಿರುತ್ತಾರೆ. ಈಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಇವರಿಬ್ಬರು ಕಾರಿನಲ್ಲಿಡಾಸ್ಸ್ ಮಾಡುತ್ತಾ ಸಾಗುತ್ತಿರುವ ದೃಶ್ಯ ಅಭಿಮಾನಿಗಳ ಮನ ಗೆದ್ದಿದೆ. ಸೋನಾಕ್ಷಿ ಈ ವಿಡಿಯೊಗೆ ‘ನಮ್ಮ ರೈಡ್ , ನಮ್ಮ ರೂಲ್ಸ್ ’ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಪರಸ್ಪರ ಗೌರವ
ಕಾರಿನಲ್ಲಿಹಾಡಿಗೆ ಜತೆಯಾಗಿ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುತ್ತಿರುವ ಈ ವಿಡಿಯೊ ಈ ದಂಪತಿ ನಡುವಿನ ಒಡನಾಟ ಎಷ್ಟು ಸಹಜವಾಗಿದೆ ಎಂಬುದನ್ನು ತೋರಿಸುತ್ತದೆ. ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಜೋಡಿ ಸದ್ಯಕ್ಕೆ ಬಾಲಿವುಡ್ ನ ಪರ್ಫೆಕ್ಟ್ ಕಪಲ್ ಗೋಲ್ಸ್ ನೀಡುವಲ್ಲಿಮುಂಚೂಣಿಯಲ್ಲಿದೆ. ಅವರ ನಡುವಿನ ಕೆಮಿಸ್ಟ್ರಿ ಮತ್ತು ಪ್ರೀತಿ ಅಭಿಮಾನಿಗಳನ್ನು ಬಹಳ ಸೆಳೆದಿದೆ. ಜಹೀರ್ ಇಕ್ಬಾಲ್ ಇತ್ತೀಚೆಗೆ ಸೋನಾಕ್ಷಿ ಬಗ್ಗೆ ಮಾತನಾಡುತ್ತಾ, ‘ಸೋನಾಕ್ಷಿಯ ನಗು ನೋಡುವುದೇ ನನ್ನ ಜೀವನದ ಏಕೈಕ ಗುರಿ’ ಎಂದಿದ್ದಾರೆ. ಸಂಗಾತಿಯ ಸಣ್ಣ ಪುಟ್ಟ ಸಂತೋಷಕ್ಕೂ ಬೆಲೆ ಕೊಡುವುದೇ ಸಾಮರಸ್ಯದ ಬದುಕು. ಹೀಗೆ ಒಬ್ಬರಿಗೊಬ್ಬರು ಎಂದುಕೊಳ್ಳುವುದರ ಜತೆಗೆ ನಿತ್ಯದ ಚಟುವಟಿಕೆಗಳಲ್ಲಿಇಬ್ಬರೂ ಭಾಗಿಯಾಗುವ, ಪರಸ್ಪರ ಭಾವನೆಗಳನ್ನು ಬೆಂಬಲಿಸಿ ಗೌರವ ಕೊಡುವುದು ದಾಂಪತ್ಯದಲ್ಲಿಅಗತ್ಯ.
ಪ್ರಯಾಣದಲ್ಲಿಅರಿವು
ಸೋನಾಕ್ಷಿ ಮತ್ತು ಜಹೀರ್ ತಮಗಿಬ್ಬರಿಗಾಗಿ ಮೀಸಲಿಡುವ ಸಮಯ ಕೇವಲ ರೊಮ್ಯಾಂಟಿಕ್ ಆಗಿರುವುದಿಲ್ಲ. ಅವರು ವಿಭಿನ್ನ ಚಟುವಟಿಕೆಗಳ ಮೂಲಕ ಗುಣಮಟ್ಟದ ಸಮಯ ಕಳೆಯುತ್ತಾರೆ. ಕೆಲವು ಸಾಹಸಗಳಲ್ಲೂತೊಡಗುತ್ತಾರೆ. ಸದಾ ಪ್ರಯಾಣ ಮಾಡುತ್ತಾರೆ. ಈ ಪ್ರಯಾಣವು ಸಂಗಾತಿಗಳ ನಡುವೆ ಅನ್ಯೋನ್ಯತೆ ಹೆಚ್ಚಿಸುತ್ತದೆ. ಇವರು ಜೀವನದ ಸಣ್ಣ ಸಣ್ಣ ಕ್ಷಣಗಳನ್ನು ಆನಂದಿಸುತ್ತಾರೆ. ಪರಸ್ಪರ ಕಾಲೆಳೆಯುವುದು, ಒಟ್ಟಿಗೆ ರೀಲ್ಸ್ ಮಾಡುವುದು, ಪ್ರವಾಸಗಳನ್ನು ಕೈಗೊಳ್ಳುವ ಮೂಲಕ ತಮ್ಮ ಸಂಬಂಧದಲ್ಲಿನ ‘ಚೈಲ್ಡಿಶ್ ನೆಸ್ ’ ಅನ್ನು ಜೀವಂತವಾಗಿರಿಸಿದ್ದಾರೆ.
ಸ್ನೇಹವೇ ಅಡಿಪಾಯ
ಸೋನಾಕ್ಷಿ ಮತ್ತು ಜಹೀರ್ ನಡುವಿನ ಬಾಂಡ್ ಶುರುವಾಗಿದ್ದು ಸ್ನೇಹದಿಂದ. ಈ ಜೋಡಿ ಸುಮಾರು ಏಳು ವರ್ಷಗಳ ಕಾಲ ಪ್ರೀತಿಸುತ್ತಿದ್ದರೂ, ಅದನ್ನು ಎಲ್ಲೂಅತಿಯಾಗಿ ಪ್ರದರ್ಶಿಸಿರಲಿಲ್ಲ. ಪರಸ್ಪರರನ್ನು ಸರಿಯಾಗಿ ಅರ್ಥ ಮಾಡಿಕೊಂಡ ನಂತರವೇ ಜೀವನದ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಇಂದಿನ ತಲೆಮಾರಿಗೆ ಇವರು ಮಾದರಿ. ಇವರು ಭಿನ್ನ ಧರ್ಮ ಮತ್ತು ಹಿನ್ನೆಲೆಯಿಂದ ಬಂದರೂ ಇಬ್ಬರೂ ಪರಸ್ಪರರ ಸಂಸ್ಕೃತಿ ಗೌರವಿಸುವ ರೀತಿ ಅನನ್ಯ. ‘ಪ್ರೀತಿಗೆ ಯಾವುದೇ ಗಡಿಗಳಿಲ್ಲ’ ಎಂಬ ಸಂದೇಶವನ್ನು ಇವರು ಸಮಾಜಕ್ಕೆ ನೀಡಿದ್ದಾರೆ. ಟೀಕೆಗಳಿಗಿಂತ ತಮ್ಮ ಸಂತೋಷಕ್ಕೆ ಆದ್ಯತೆ ನೀಡುವ ಇವರ ಧೋರಣೆ ಕಪಲ್ ಗೋಲ್ಸ್ ಗೆ ದೊಡ್ಡ ಉದಾಹರಣೆ.

