ಮಾರ್ಚ್ 7ರಂದು ಪೋಷಕರು-ಶಿಕ್ಷಕರ ಸಭೆ

Contributed bydjtrupti@gmail.com|Vijaya Karnataka

The School Education Department has announced a change in the parent-teacher meeting schedule. The meeting, initially set for February 28, will now take place on March 7 across all government schools. This adjustment is due to a state-level educational conference requiring the participation of teachers and officials.

parents teachers meeting in karnataka government schools now on march 7 new date circular issued

ಬೆಂಗಳೂರು: ರಾಜ್ಯದ ಎಲ್ಲಾಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಗಳಲ್ಲಿಫೆ.28ಕ್ಕೆ ನಿಗದಿಪಡಿಸಿದ್ದ ಪೋಷಕರು-ಶಿಕ್ಷಕರ ಸಭೆಯನ್ನು ಮುಂದೂಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಫೆ.28ರ ಬದಲಾಗಿ ಮಾ. 7ರಂದು ಎಲ್ಲಾಶಾಲೆಗಳಲ್ಲಿನಿಯಮಾನುಸಾರ ಸಭೆ ನಡೆಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ. ಫೆ. 28ರಂದು ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿಎಲ್ಲಾಶಿಕ್ಷಕರು, ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ಭಾಗಿಯಾ ಗುವುದರಿಂದ ಸಭೆಯ ದಿನಾಂಕವನ್ನು ಮರು ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಸರಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ, ಸ್ಥಿತಿಗತಿ ತಿಳಿಯುವ ಜತೆಗೆ, ಪೋಷಕರು ಹಾಗೂ ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿಸರಕಾರ ಎಲ್ಲಾಶಾಲೆಗಳಲ್ಲೂಕಡ್ಡಾಯವಾಗಿ ಪೋಷಕರು-ಶಿಕ್ಷಕರ ಸಭೆ ನಡೆಸಲು ಸೂಚಿಸಿತ್ತು. ಈಗ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದ ಹಿನ್ನೆಲೆಯಧಿಲ್ಲಿಸಭೆಯ ದಿನಾಂಕ ಮರುನಿಗದಿಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ.