ನಿತ್ಯದರ್ಶಿ 25 ಫೆಬ್ರವರಿ 2026
ಕೆ.ಸುಬ್ರಹ್ಮಣ್ಯ ಆಚಾರ್ಯ ,ಹಿರಿಯಂಗಡಿ ,ಕಾರ್ಕಳ
----
ಮೇಷ : ನವಗ್ರಹರ ಪ್ರತಿಕೂಲ ಪರಿಸ್ಥಿತಿ ತಿಳಿಸುವಂತೆ ಆರ್ಥಿಕವಾಗಿ ಹಣಕಾಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಹಿರಿಯರ ಆರೋಗ್ಯದ ಬಗ್ಗೆ ಆಗಾಗ ತಪಾಸಣೆ ಅಗತ್ಯವಿದೆ. ವೃತ್ತಿರಂಗದಲ್ಲಿಹೊಂದಾಣಿಕೆ ಹಾಗೂ ಉತ್ತಮ ಚಿಂತನೆಗಳು ಅಗತ್ಯವಿದೆ.
ಅದೃಷ್ಟ ಸಂಖ್ಯೆ :09
---
ವೃಷಭ: ವೃತ್ತಿರಂಗದಲ್ಲಿಅಧಿಕಾರಿ ವರ್ಗದವರ ಸಹಕಾರ, ಹಿರಿಯರ ಆಶೀರ್ವಾದ, ದೈವಾನುಗ್ರಹ ಇರುವ ಸಮಯ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಉದ್ಯೋಗ ಪ್ರಾಪ್ತಿಯಾಗಲಿದೆ. ರಾಜಕೀಯದಲ್ಲಿರುವವರಿಗೆ ಉತ್ತಮ ಸಮಯ.
ಅದೃಷ್ಟ ಸಂಖ್ಯೆ :07
------
ಮಿಥುನ : ಕಾರ್ಯ ಸಾಧನೆಯಲ್ಲಿಹೆಚ್ಚಿನ ಯಶಸ್ಸು ತೋರಿಬಂದು ಮನೋಕಾಮನೆ ಪೂರ್ಣವಾಗಲಿದೆ. ನಿಮ್ಮ ತಾಳ್ಮೆ ಸಮಾಧಾನವೇ ಇದಕ್ಕೆ ಕಾರಣವಾಗಿದೆ. ಇಷ್ಟು ಸಮಯ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಹತೋಟಿಗೆ ಬರಲಿದೆ.
ಅದೃಷ್ಟ ಸಂಖ್ಯೆ : 05
-------
ಕರ್ಕಾಟಕ: ಗ್ರಹಗಳ ಪ್ರತಿಕೂಲ ಸ್ಥಿತಿಯಿಂದಾಗಿ ಹಿಡಿದ ಕಾರ್ಯಗಳೆಲ್ಲಾ ವೈಫಲ್ಯವನ್ನು ಕಂಡು ಸಣ್ಣ ಮಟ್ಟಿನ ಹಿಂಜರಿಕೆ ಬರಲಿದೆ. ಒಳ್ಳೆಯ ಕೆಲಸದಿಂದಲೂ ನಿಮಗೆ ಅವಮಾನ, ಕೆಟ್ಟ ಮಾತುಗಳು ತಪ್ಪದು. ದೇವಿ ಸಪ್ತಶತಿ ಪಾರಾಯಣ ಮಾಡಿ.
ಅದೃಷ್ಟ ಸಂಖ್ಯೆ : 03
-------
ಸಿಂಹ: ಹೊಸ ವ್ಯವಹಾರಗಳನ್ನು ಆರಂಭಿಸುವಾಗ ಅನುಭವಿಗಳಿಂದ ಮಾರ್ಗದರ್ಶನ ಪಡೆದು ಕೊಳ್ಳಿ. ತಾಳ್ಮೆ ಕಡಿಮೆಯಾದರೆ ಆತ್ಮೀಯರೊಂದಿಗೆ ಮುನಿಸು ಬರಬಹುದು. ಹಿರಿಯರ ಆಸ್ತಿಯಲ್ಲಿಬರುವ ವಿವಾದಗಳನ್ನು ಪರಿಹರಿಸಿ. ಆರ್ಥಿಕ ಪ್ರಗತಿ ಮನಸ್ಸಿಗೆ ನೆಮ್ಮದಿ ಕೊಡಲಿದೆ.
---
ಕನ್ಯಾ: ಹೊಸ ಮನೆ ಅಥವಾ ವಾಹನ ಖರೀದಿಯ ಯೋಗವಿದೆ. ಉದ್ಯೋಗ ಕ್ಷೇತ್ರದಲ್ಲಿಸಕಾರಾತ್ಮಕ ಬದಲಾವಣೆಯಾಗುತ್ತದೆ . ತಾಯಿಯವರ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಿ. ಸರಕಾರಿ ಅಧಿಕಾರಿಗಳಿಂದ ವಿಶೇಷ ಪ್ರಯೋಜನ ವಾಗಲಿದೆ.
ಅದೃಷ್ಟ ಸಂಖ್ಯೆ : 05
------
ತುಲಾ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ಶುಭ ಸುದ್ದಿ ಕೇಳಲಿದ್ದೀರಿ. ಚಂಚಲ ಮನಸ್ಸುಗಳು ಸಾಧನೆಗೆ ಅಡ್ಡಿ ಉಂಟು ಮಾಡಲಿದೆ. ಮಕ್ಕಳಿಗೆ ದುಶ್ಚಟ ಅಂತದಂತೆ ಜಾಗರೂಕರಾಗಿರಿ. ಹೊಸ ಮನೆ ಕಟ್ಟುವ ನಿಮ್ಮ ಕನಸು ನನಸಾಗಲಿದೆ.
ಅದೃಷ್ಟ ಸಂಖ್ಯೆ :08
-------
ವೃಶ್ಚಿಕ: ಕುಟುಂಬದೊಂದಿಗೆ ಸೌಹಾರ್ದತೆಯಿಂದ ಇದ್ದರೆ ಏಳಿಗೆ ಇದೆ. ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ದೂರದೂರಿಗೆ ಪ್ರಯಾಣ ಯೋಗವಿದೆ. ದೈವಿಕ ಕಾರ್ಯಗಳಿಗೆ ಖರ್ಚು ಮಾಡಲು ಹಿಂಜರಿಯಬೇಡಿ. ರಾಜಕೀಯ ಕ್ಷೇತ್ರದಲ್ಲಿಇರುವವರಿಗೆ ಯಶಸ್ಸಿದೆ.
ಅದೃಷ್ಟ ಸಂಖ್ಯೆ :06
-----------
ಧನು: ಜೀವನಕ್ಕೆ ಆಧಾರವಾಗಿರುವ ವ್ಯವಹಾರದಿಂದ ದೂರವಾಗಬೇಡಿ. ಉತ್ತಮ ಆಹಾರ ಸೇವನೆಯಿಂದ ಆರೋಗ್ಯ ಸ್ಥಿರವಾಗಿರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿವಿದ್ಯಾರ್ಥಿಗಳು ಉತ್ತಮ ಪ್ರಗತಿ ಸಾಧಿಸಲಿದ್ದಾರೆ. ತಾಯಿಯವರ ಆರೋಗ್ಯದ ಕಡೆಗೆ ಗಮನವಿರಲಿ.
ಅದೃಷ್ಟ ಸಂಖ್ಯೆ :03
----------
ಮಕರ : ದೈವಾನುಗ್ರಹ ಪ್ರಸ್ತುತ ಇರುವುದಿಲ್ಲ. ಯಂತ್ರೋಪಕರಣಗಳ ವ್ಯವಹಾರದಿಂದ ಲಾಭವಾಗಲಿದೆ. ದಾಂಪತ್ಯ ಜೀವನದಲ್ಲಿಆದಷ್ಟು ಹೊಂದಾಣಿಕೆಯಿಂದ ಇರುವುದು ಒಳ್ಳೆಯದು. ನೀವು ಮಾಡದ ತಪ್ಪನ್ನು ಒಪ್ಪಿಕೊಳ್ಳುವ ಸಂದರ್ಭ ಬರಬಹುದು.
ಅದೃಷ್ಟ ಸಂಖ್ಯೆ : 01
--------
ಕುಂಭ : ಆತ್ಮೀಯರೇ ಕೆಲವೊಮ್ಮೆ ಹಿತ ಶತ್ರುಗಳಾಗಲಿದ್ದಾರೆ. ಹಿರಿಯರ ಸಲಹೆ ಸ್ವೀಕರಿಸಿದರೆ ಒಳಿತಾಗಲಿದೆ. ಅನಗತ್ಯ ವಿಷಯಗಳಿಗೆ ಪ್ರವೇಶ ಮಾಡಬೇಡಿ. ಅನಿರೀಕ್ಷಿತ ಧನಲಾಭದಿಂದ ಅನೇಕ ಸಮಸ್ಯೆಗಳು ಪರಿಹಾರವಾಗಲಿದೆ.
ಅದೃಷ್ಟ ಸಂಖ್ಯೆ :04
---------
ಮೀನ: ಆಗಾಗ ಕಾರ್ಯ ಭಂಗ, ಅನಿರೀಕ್ಷಿತ ಖರ್ಚು ವೆಚ್ಚಗಳು ಅಧಿಕಗೊಂಡು ಕುಟುಂಬದಲ್ಲಿಸಣ್ಣ ಸಣ್ಣ ವಿಷಯಗಳು ಕಲಹಕ್ಕೆ ಕಾರಣವಾಗಲಿವೆ. ದೈವಾನುಗ್ರಹದ ಕೊರತೆ, ವ್ಯಯ ಭಾವದಲ್ಲಿಇರುವ ನಾಲ್ಕು ಗ್ರಹರ ಕಾರಣದಿಂದ ಹಿನ್ನೆಡೆ ಕಂಡು ಬರಲಿದೆ.
ಅದೃಷ್ಟ ಸಂಖ್ಯೆ : 02

