ವಡೋದರಾ: ಫೆಬ್ರವರಿ 24ರಿಂದ 27ರವರೆಗೆ ಇಲ್ಲಿನ ಸಮಾ ಒಳಾಂಗಣ ಕಾಂಪ್ಲೆಕ್ಸ್ ನಲ್ಲಿನಡೆಯಲಿರುವ 72ನೇ ಹಿರಿಯರ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕ ಸೇರಿದಂತೆ ಸುಮಾರು 400 ಆಟಗಾರರನ್ನು ಒಳಗೊಂಡ ದೇಶದ 31 ತಂಡಗಳು ಸ್ಪರ್ಧಿಸಲಿವೆ. ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿಆಯೋಜಿಸಲಾಗಿರುವ ಈ ಪಂದ್ಯಾವಳಿ ಯಲ್ಲಿಅನುಭವಿಗಳು ಮತ್ತು ಉದಯೋನ್ಮುಖ ತಾರೆಯರು ಭಾಗವಹಿಸಲಿದ್ದಾರೆ. ಪ್ರೊ ಕಬಡ್ಡಿ ಲೀಗ್ (ಪಿಕೆಎಲ…) ಸೀಸನ್ 12ರಲ್ಲಿಅಸಾಧಾರಣ ಪ್ರದರ್ಶನ ನೀಡಿದ ಆಟಗಾರರು ಸಹ ಆಡಲಿದ್ದಾರೆ. ಪಿಕೆಎಲ್ ಸೀಸನ್ 12ರ ಟಾಪ್ ಮೂವರು ರೈಡರ್ ಗಳಾದ ಅಯಾನ್ ಲೋಹ್ಚಾಬ್ (ಹರಿಯಾಣ), ದೇವಾಂಕ್ ದಲಾಲ್ ಮತ್ತು ಭರತ್ ಹೂಡಾ (ಸವೀರ್ ಸಸ್ ) ಚಾಂಪಿಯನ್ ಷಿಪ್ ನಲ್ಲಿರುವ ಪ್ರಮುಖರಲ್ಲಿಸೇರಿದ್ದಾರೆ.

