ತಮಿಳುನಾಡಲ್ಲಿ74 ಲಕ್ಷ ಮತದಾರರಿಗೆ ಕೊಕ್

Contributed byBeeralinge gowda|Vijaya Karnataka

Tamil Nadu's voter list has been finalized. The Election Commission removed 74 lakh names, bringing the total to 5.67 crore voters. Over 27 lakh new voters were added. The list includes 12.51 lakh young voters aged 18-19. Women voters outnumber men. Preparations for the upcoming assembly elections are underway.

74 lakh voters deleted in tamil nadu final electoral roll women lead and assembly election preparations

ಚೆನ್ನೈ: ತಮಿಳುನಾಡಿನ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣೆ

(ಎಸ್ ಐಆರ್ ) ಪೂರ್ಣಗೊಳಿಸಿರುವ ಕೇಂದ್ರ ಚುನಾವಣಾ ಆಯೋಗವು 74 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಒಟ್ಟು 5,67,07,380 ಮತದಾರರ ಹೆಸರು ಹೊಂದಿದ ಅಂತಿಮ ಮತಪಟ್ಟಿ ಯನ್ನು ಆಯೋಗ ಸೋಮವಾರ(ಫೆ.23) ಪ್ರಕಟಿಸಿದೆ. ಎಸ್ ಐಆರ್ ಪೂರ್ವದಲ್ಲಿತಮಿಳುನಾಡು ಮತದಾರ ಪಟ್ಟಿಯಲ್ಲಿ6.41 ಕೋಟಿ ಹೆಸರುಗಳಿದ್ದವು. ಪರಿಷ್ಕರಣೆ, ದಾಖಲೆಗಳ ಪರಿಶೀಲನೆ ಬಳಿಕ 5.67 ಕೋಟಿ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿಉಳಿದುಕೊಂಡಿವೆ. ಮೃತಪಟ್ಟವರು, ಶಾಶ್ವತ ವಾಗಿ ವಲಸೆ ಹೋದವರು, ಒಂದಕ್ಕಿಂತ ಹೆಚ್ಚು ಕಡೆ ಹೆಸರಿದ್ದವರು ಸೇರಿದಂತೆ ಒಟ್ಟು 74 ಲಕ್ಷ ಮತದಾರರ ಹೆಸರನ್ನು ಅಳಿಸಲಾಗಿದೆ. ಹೊಸದಾಗಿ 27.53 ಲಕ್ಷ ಮತದಾರರ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ. ಮತಪಟ್ಟಿಯಲ್ಲಿ18-19ರ ವಯೋ ಮಾನದ 12.51 ಲಕ್ಷ ಮಂದಿ ಮತದಾರರಿ ದ್ದಾರೆ. 4.63 ಲಕ್ಷ ವಿಕಲಚೇತನರು, 3.99 ಲಕ್ಷ 85 ವರ್ಷದ ದಾಟಿದ ಹಿರಿಯ ನಾಗರಿಕ ಮತದಾರರಿದ್ದಾರೆ. ಎಸ್ ಐಆರ್ ವೇಳೆ 4.23 ಲಕ್ಷ ಅನರ್ಹ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಆಯೋಗ ವಿವರಿಸಿದೆ. ಮಹಿಳಾ ಮತದಾರರೇ ಅಧಿಕ: ತಮಿಳು ನಾಡು ಮತಪಟ್ಟಿಯಲ್ಲಿಪುರುಷರಿಗಿಂತ ಮಹಿಳೆಯರ ಪ್ರಮಾಣವೇ ಹೆಚ್ಚಿದೆ. ಅಂತಿಮ ಮತಪಟ್ಟಿಯಲ್ಲಿ2.7 ಕೋಟಿ ಪುರುಷ ಮತದಾರರಿದ್ದು, 2.8 ಕೋಟಿ ಮಹಿಳಾ ಮತದಾರರಿದ್ದಾರೆ. ಪುರಷರಿಗಿಂತ ಸುಮಾರು 13 ಲಕ್ಷಕ್ಕೂ ಹೆಚ್ಚು ಮಹಿಳಾ ಮತದಾರರ ಸಂಖ್ಯೆಯಿದೆ. 7,617 ಮಂದಿ ತೃತೀಯ ಲಿಂಗಿಗಳು ಮತಪಟ್ಟಿ ಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಶೋಲಿಂಗನಲ್ಲೂರು ವಿಧಾನಸಭೆ ಕ್ಷೇತ್ರ ದಲ್ಲಿಅತ್ಯಧಿಕ 5.36 ಲಕ್ಷ ಮತದಾರರಿದ್ದಾರೆ. ಹಾರ್ಬರ್ ವಿಧಾಸಭಾ ಕ್ಷೇತ್ರದಲ್ಲಿಅತಿ ಕಡಿಮೆ 1.16 ಲಕ್ಷ ಮತದಾರರಿದ್ದಾರೆ. ಚೆನ್ನೈನ ಎಗ್ಮೋರ್ ಕ್ಷೇತ್ರದಲ್ಲಿ1.34 ಲಕ್ಷ ಮತದಾರರಿದ್ದಾರೆ. ಉಳಿದಂತೆ ಚೆನ್ನೈ, ಕೊಯಮತ್ತೂರು, ಸೇಲಂ, ತಿರುವಳ್ಳೂರು, ಚೆಂಗಲ್ಪಟ್ಟು ಜಿಲ್ಲೆಯ ಕೆಲವು ಕ್ಷೇತ್ರದಲ್ಲಿಅಧಿಕ ಮತದಾರರಿದ್ದಾರೆ. ಚುನಾವಣೆಗೆ ಸಿದ್ಧತೆ: ಎಸ್ ಐಆರ್ ಪೂರ್ಣಗೊಳಿಸಿರುವ ಚುನಾವಣಾ ಆಯೋಗ ವಿಧಾನಸಭೆ ಚುನಾವಣೆಗೆ ಪೂರ್ವಸಿದ್ಧತೆ ಕೈಗೊಂಡಿದೆ. ರಾಜ್ಯ ಚುನಾವಣಾ ಆಯುಕ್ತರ ಮೂಲಕ ಮತಗಟ್ಟೆ ರಚನೆ, ಚುನಾವಣಾ ಕರ್ತವ್ಯಕ್ಕೆ ಅಗತ್ಯವಿರುವ ಸಿಬ್ಬಂದಿ, ಭದ್ರತಾ ವ್ಯವಸ್ಥೆ, ಮತದಾನಕ್ಕೆ ಬೇಕಿರುವ ಮೂಲಸೌಲಭ್ಯ ವ್ಯವಸ್ಥೆ ಸೇರಿದಂತೆ ಅಗತ್ಯ ಪೂರಕ ಕ್ರಮ ತೆಗೆದುಕೊಳ್ಳುವಂತೆ ಮೌಖಿಕವಾಗಿ ಸೂಚಿಸಿದೆ. ಮಾರ್ಚ್ ಮಧ್ಯಭಾಗದಲ್ಲಿಚುನಾವಣೆ ಘೋಷಣೆಯಾಗುವ ಸಾಧ್ಯತೆ ಯಿದ್ದು, ಏಪ್ರಿಲ್ ಅಥವಾ ಮೇ ತಿಂಗಳಲ್ಲಿಚುನಾವಣೆ ನಡೆಯುವ ಸಾಧ್ಯತೆಗಳಿವೆ.