ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿಕಾರ್ಪೊರೇಟ್ ವಲಯವು ಉದ್ಯೋಗಿಗಳಿಗೆ ಸರಾಸರಿ ಶೇ.9.1ರಷ್ಟು ವೇತನ ಹೆಚ್ಚಳ ಮಾಡುವ ನಿರೀಕ್ಷೆ ಇದೆ ಎಂದು ಇವೈ ಫ್ಯೂಚರ್ ಆಫ್ ಪೇ ವರದಿ ಮಾಡಿದೆ. ‘‘ಭಾರತದ ಕಾರ್ಪೊರೇಟ್ ವಲಯ ರೂಪಾಂತರ ಗೊಳ್ಳುತ್ತಿದೆ. ಇಂತಹ ಸನ್ನಿವೇಶದಲ್ಲಿ2026ರಲ್ಲಿಒಟ್ಟಾರೆ ವೇತನ ಗಮನಾರ್ಹ ಪ್ರಮಾಣದಲ್ಲಿಸುಧಾರಿಸಲಿದೆ. ಆದರೆ 2025ರಲ್ಲಿಸರಾಸರಿ ಶೇ.9.3ರಷ್ಟು ವೇತನವನ್ನು ಹೆಚ್ಚಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಕಡಿಮೆಯಾಗಲಿದೆ,’’ ಎಂದಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳು(ಜಿಸಿಸಿ)2026 ರಲ್ಲಿಶೇ. 10.4ರಷ್ಟು ಏರಿಕೆಯೊಂದಿಗೆ ವೇತನ ಬೆಳವಣಿಗೆಗೆ ಕಾರಣ ವಾಗಲಿವೆ. ಇದು ವಿಶೇಷ ಡಿಜಿಟಲ್ ಸಾಮರ್ಥ್ಯ ಗಳಲ್ಲಿನಿರಂತರ ಜಾಗತಿಕ ಬೇಡಿಕೆ ಮತ್ತು ಹೂಡಿಕೆಯನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ವೇತನ ಹೆಚ್ಚಳಕ್ಕೆ ಒತ್ತಾಸೆ ಸಿಗುತ್ತದೆ. ನಿರಂತರ ಜಾಗತಿಕ ಬೇಡಿಕೆಯ ನಡುವೆ ಕೌಶಲ ವೃದ್ಧಿಗೆ ವೇತನ ಹೆಚ್ಚಳ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವರದಿ ವಿಶ್ಲೇಷಿಸಿದೆ.

