ಮಕ್ಕಳಿಗೆ ನೀಡುವ ಆಹಾರದತ್ತ ಇರಲಿ ಎಚ್ಚರ
ಇಂಟ್ರೊ: ಪರೀಕ್ಷೆ ಸಮಯದಲ್ಲಿಮಕ್ಕಳ ಆಹಾರ ಪದ್ಧತಿಯತ್ತ ಗಮನ ನೀಡಿ.
ಇದು ಪರೀಕ್ಷೆಯ ಕಾಲ. ಈ ಹೊತ್ತಲ್ಲಿಮಕ್ಕಳು ಹೆಚ್ಚಿನ ಸಮಯ ಓದಲು ಮೀಸಲಿಡುವ, ನಿದ್ರೆಗೆಡುವ, ಆತಂಕಕ್ಕೆ ಒಳಗಾಗುವ ಕಾರಣ ಅವರ ಜೀವನಶೈಲಿಯಲ್ಲಿಏರುಪೇರಾಗುತ್ತದೆ. ಇದು ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಹೀಗಾಗಿ ಈ ಸಮಯದಲ್ಲಿಮಕ್ಕಳ ಆಹಾರ ಪದ್ಧತಿ ಬದಲಿಸುವುದು ಸೂಕ್ತ. ಮಕ್ಕಳ ವಯಸ್ಸು, ಆರೋಗ್ಯಕ್ಕೆ ಅನುಗುಣವಾಗಿ ಆಹಾರ ತಜ್ಞರ ಸಲಹೆ ಪಡೆದು ಮುಂದುವರಿಯಿರಿ. ಆದರೆ ಸಾಮಾನ್ಯವಾಗಿ ಪರೀಕ್ಷೆ ಕಾಲದಲ್ಲಿಹೆಚ್ಚು ಸೆಳೆಯುವ ಆಹಾರ ಪದ್ಧತಿ ಬಗ್ಗೆ ವಿವರ ಇಲ್ಲಿದೆ.
ಪೌಷ್ಟಿಕ ಆಹಾರ
ಈ ಸಮಯದಲ್ಲಿಮಕ್ಕಳ ಮಿದುಳು ಚುರುಕಾಗಿರಲು ಮತ್ತು ದೈಹಿಕವಾಗಿ ಅವರು ಸುಸ್ತಾಗದಿರಲು ಸರಿಯಾದ ಆಹಾರ ಪದ್ಧತಿ ಅನುಸರಿಸುವುದು ಮುಖ್ಯ. ಪೋಷಕರು ಮಕ್ಕಳಿಗೆ ಓದಿನ ಒತ್ತಡದ ನಡುವೆ ಜೀರ್ಣಕ್ರಿಯೆಗೆ ತೊಂದರೆಯಾಗದಂತೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು. ಹೊಟ್ಟೆ ತುಂಬಾ ಉಣ್ಣುವುದಕ್ಕಿಂತ, ಸ್ವಲ್ಪ ಸ್ವಲ್ಪವೇ ಹೆಚ್ಚು ಬಾರಿ ಪೌಷ್ಟಿಕ ಆಹಾರ ನೀಡುವುದು ಉತ್ತಮ.
ಮಿದುಳಿನ ಶಕ್ತಿ ಹೆಚ್ಚಿಸುವ ಆಹಾರಗಳು
ನೆನೆಸಿದ ಬಾದಾಮಿ ಮತ್ತು ಅಕ್ರೋಟ್ ನಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಇದ್ದು, ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿ. ಸೇಬು, ಬಾಳೆಹಣ್ಣು, ದಾಳಿಂಬೆ ಅಥವಾ ಬೆರ್ರಿ ಹಣ್ಣುಗಳನ್ನು ನೀಡಿ. ಇವು ತಕ್ಷಣದ ಶಕ್ತಿ ನೀಡುತ್ತವೆ. ಸೊಪ್ಪು ತರಕಾರಿಗಳು ಮತ್ತು ಕ್ಯಾರೆಟ್ ಮಿದುಳಿನ ಆರೋಗ್ಯಕ್ಕೆ ಉತ್ತಮ.
ಲಘು ಉಪಾಹಾರ
ಪರೀಕ್ಷೆಯ ದಿನ ಒತ್ತಡದಲ್ಲಿಇರುವ ಮಕ್ಕಳು ತಿನ್ನಲು ಹಿಂದೇಟು ಹಾಕುತ್ತಾರೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿಪರೀಕ್ಷೆಗೆ ಕಳುಹಿಸಬೇಡಿ. ಇಡ್ಲಿ, ದೋಸೆ ಅಥವಾ ಉಪ್ಪಿಟ್ಟು ಸುಲಭವಾಗಿ ಜೀರ್ಣವಾಗುತ್ತವೆ. ಹೆಚ್ಚು ಎಣ್ಣೆ ಅಥವಾ ಮಸಾಲೆಯುಕ್ತ ಆಹಾರಗಳನ್ನು ಉದಾಹರಣೆಗೆ ಪೂರಿ ಅಥವಾ ವಡೆ ತಪ್ಪಿಸಿ. ಏಕೆಂದರೆ ಇವು ಆಲಸ್ಯ ಉಂಟುಮಾಡಬಹುದು. ಮಧ್ಯಾಹ್ನ ಸೊಪ್ಪು, ತರಕಾರಿ, ಬೇಳೆ ಒಳಗೊಂಡ ಊಟ, ರಾತ್ರಿ ಊಟ ಹಗುರವಾಗಿರಲಿ ಗಂಜಿ ಅಥವಾ ಚಪಾತಿ ನೀಡಿ.
ಬಾಕ್ಸ್
ನಿರ್ಜಲೀಕರಣ ತಪ್ಪಿಸಿ
ಮಕ್ಕಳು ಓದಿನ ಭರದಲ್ಲಿನೀರು ಕುಡಿಯುವುದನ್ನು ಮರೆಯುತ್ತಾರೆ. ನಿರ್ಜಲೀಕರಣದಿಂದ ತಲೆನೋವು ಅಥವಾ ಸುಸ್ತು ಬರಬಹುದು. ಎಳನೀರು, ಮಜ್ಜಿಗೆ ಅಥವಾ ತಾಜಾ ಹಣ್ಣಿನ ರಸಗಳು ದೇಹವನ್ನು ತಂಪಾಗಿರಿಸುತ್ತವೆ. ಸಕ್ಕರೆ ಅಂಶ ಹೆಚ್ಚಿರುವ ಸಾ´್ಟ… ಡ್ರಿಂP್ಸ… ಬೇಡ. ಓದುವಾಗ ಹಸಿವಾದರೆ ಜಂಕ್ ಫುಡ್ ಅಂದರೆ ಚಿಫ್ಸ್ , ಬಿಸ್ಕೆಟ್ ಬದಲು ಹುರಿದ ಕಡಲೆಕಾಯಿ, ಪಾಪ್ ಕಾರ್ನ್ ಅಥವಾ ಒಣ ಹಣ್ಣುಗಳನ್ನು ನೀಡಿ. ಡಾರ್ಕ್ ಚಾಕೊಲೆಟ್ ಸ್ವಲ್ಪ ಪ್ರಮಾಣದಲ್ಲಿನೀಡಬಹುದು.ಇದು ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಹೋಟೆಲ್ ಫುಡ್ ನಿಂದ ದೂರ ಇರಿ.
ಬಾಕ್ಸ್
ನಿದ್ರೆಯೇ ಮುಖ್ಯ
ಸಾಮಾನ್ಯವಾಗಿ ಮಕ್ಕಳು ಹಿಂದೆಂದಿಗಿಂತ ಪರೀಕ್ಷೆ ಸಮಯದಲ್ಲಿಹೆಚ್ಚು ನಿದ್ರೆಗೆಡುತ್ತಾರೆ. ಇದು ಮನೋದೈಹಿಕವಾಗಿ ಏರುಪೇರು ಉಂಟು ಮಾಡಬಹುದು. ಹೀಗಾಗಿ ಹಗಲಿನ ವೇಳೆಯೇ ಹೆಚ್ಚು ಓದಿ. ರಾತ್ರಿ ನಿದ್ರೆಗೆ ಸಮಯ ಮೀಸಲಿಡುವುದು ಸೂಕ್ತ. ಮಕ್ಕಳು ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡುವಂತೆ ನೋಡಿಕೊಳ್ಳಿ. ನಿದ್ರೆ ಕಡಿಮೆಯಾದರೆ ಪರೀಕ್ಷೆಯಲ್ಲಿನೆನಪಿನ ಶಕ್ತಿ ಕುಂದಬಹುದು.

