ಮೆಕ್ಸಿಕೊ ನಗರ: ಡ್ರಗ್ಸ್ ಸಾಮ್ರಾಜ್ಯದ ಚಕ್ರವರ್ತಿ ನೆಮಿಸಿಯೊ ಒಸೆಗುರಾ ಅಲಿಯಾಸ್ ಎಲ್ ಮೆಂಚೊ ಹತ್ಯೆ ಮೆಕ್ಸಿಕೊದಲ್ಲಿಭಾರಿ ಹಿಂಸಾಚಾರಕ್ಕೆ ದಾರಿ ಮಾಡಿಕೊಟ್ಟಿದೆ. ಮಾದಕ ದ್ರವ್ಯ ಸಾಗಣೆ ದಂಧೆ ಮೂಲಕ ಪರ್ಯಾಯ ಸರಕಾರ ಮುನ್ನಡೆಸುತ್ತಿದ್ದ ಡ್ರಗ್ಸ್ ದೊರೆಯ ಹತ್ಯೆ ಬಳಿಕ ಮೆಕ್ಸಿಕೊದ ಡ್ರಗ್ ದಂಧೆಕೋರರು ಬೀದಿಗಿಳಿದಿದ್ದಾರೆ. ದೇಶದ ಪಶ್ಚಿಮ ಭಾಗದಲ್ಲಿಹಿಂಸಾಚಾರ ಭುಗಿಲೆದ್ದಿದ್ದು, 20 ವರ್ಷಗಳ ಹಿಂದಿನ ಲಕ್ಷಾಂತರ ಜನರ ಮಾರಣಹೋಮವನ್ನು ನೆನಪಿಸುತ್ತಿದೆ. ಮೆಕ್ಸಿಕೊದಲ್ಲಿಡ್ರಗ್ಸ್ ಸಾಮ್ರಾಜ್ಯ ಕಟ್ಟಿದ್ದ ಎಲ್ ಚಾಪೊ ಗುಜ್ಮನ್ ಅಲಿಯಾಸ್ ಶಾರ್ಟಿ ಜಗತ್ತಿಗೆ ಮಾದಕ ದ್ರವ್ಯದ ಕಳ್ಳಸಾಗಣೆ ಮಾಡುವ ಮೂಲಕ ಶತಕೋಟಿ ಡಾಲರ್ ವ್ಯವಹಾರ ನಡೆಸಿದ್ದ. ಒಮ್ಮೆ ಫೋರ್ಬ್ ನಿಯತಕಾಲಿಕೆ ಪ್ರಕಟಿಸಿದ ವಿಶ್ವದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿಗಳ ಪಟ್ಟಿಯಲ್ಲಿಸ್ಥಾನ ಪಡೆದಿದ್ದ ಎಂದರೆ ಆತನ ಪ್ರಭಾವ ಎಷ್ಟಿತ್ತು ಎಂಬುದನ್ನು ಅಂದಾಜಿಸಬಹುದು. ಮೆಕ್ಸಿಕೊದಲ್ಲಿತಲೆ ಎತ್ತಿದ ಡ್ರಗ್ ದಂಧೆ ಕಾಲ ಬದಲಾದಂತೆ ಚೀನಾದ ಸಂಪರ್ಕದೊಂದಿಗೆ ಜಾಗತಿಕವಾಗಿ ವಿಸ್ತಾರವಾಯಿತು. ಮೆಕ್ಸಿಕೊ ಮಾದಕ ದ್ರವ್ಯ ಕಳ್ಳ ಸಾಗಣೆಯ ಸಾಮ್ರಾಜ್ಯವಾಯಿತು. ಚೀನಾದ ಅಫೀಮ್ , ಗಸಗಸೆ ಬೀಜ ಉತ್ತರ ಅಮೆರಿಕ ದೇಶಗಳಿಗೆ ರಫ್ತಾದ ಬಳಿಕ ಡ್ರಗ್ ಉತ್ಪಾದನೆ ಮತ್ತಷ್ಟು ಹೆಚ್ಚಾಗಿತ್ತು.

