ಹಾಸನ: ಜೀವನದಲ್ಲಿಜುಗುಪ್ಸೆಗೊಂಡ ಸೋಮವಾರಪೇಟೆ ಮೂಲದ ವೃದ್ಧ ದಂಪತಿ ಜತೆಯಲ್ಲೇ ಕೈ ಹಿಡಿದುಕೊಂಡು ನಗರದಲ್ಲಿಗೂಡ್ಸ್ ರೈಲಿಗೆ ಅಡ್ಡ ನಿಂತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಡ್ಯಾನಿಯಲ್ (85), ಪತ್ನಿ ಮೇರಿ ಡ್ಯಾನಿಯಲ್ (84) ಮೃತರು. ಸೋಮವಾರಪೇಟೆ ತಾಲೂಕು ಚೌಡೇನಹಳ್ಳಿಯ ಇವರು ಶನಿವಾರ ರಾತ್ರಿ ನಗರದ ಬಸ್ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಸಮೀಪದ ರೈಲ್ವೆ ಮಾರ್ಗಕ್ಕೆ ಬಂದು ಚಲಿಸುತ್ತಿದ್ದ ರೈಲಿಗೆ ಅಡ್ಡ ನಿಂತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ‘‘ವಿಲ್ಸನ್ ಹಾಗೂ ಡೇವಿಡ್ ಎಂಬ ಇಬ್ಬರು ಗಂಡು ಮಕ್ಕಳಿದ್ದರೂ, ಕೌಟುಂಬಿಕ ಬೇಸರ ಹಾಗೂ ಅನಾರೋಗ್ಯ ಹಿನ್ನೆಲೆಯಲ್ಲಿಕೆಲಕಾಲ ವಿರಾಜಪೇಟೆಯ ವೃದ್ಧಾಶ್ರಮದಲ್ಲಿನೆಲೆಸಿದ್ದರು. ಅಲ್ಲಿಂದ ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಿ ಎಂದು ಸಂಬಂಧಿಕರು ಹೇಳಿದ್ದರಂತೆ. ಬಳಿಕ ಹಾಸನಕ್ಕೆ ಬಂದಿದ್ದ ಅವರು ಜುಗುಪ್ಸೆಗೊಂಡು ಹಾಸನ-ಮಂಗಳೂರು ಮಾರ್ಗದಲ್ಲಿಗೂಡ್ಸ್ ರೈಲು ಬರುತ್ತಿರುವುದನ್ನು ಕಂಡು ರಾತ್ರಿ 9.30ಕ್ಕೆ ಏಕಾಏಕಿ ಅಡ್ಡಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,’’ ಎಂದು ಪೊಲೀಸರು ತಿಳಿಸಿದ್ದಾರೆ. ಲೋಕೋಪೈಲೆಟ್ ದೂರು ನೀಡಿದ ಹಿನ್ನೆಲೆಯಲ್ಲಿಹಾಸನ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

