ಚಂದ್ರಶೇಖರ ಸ್ವಾಮೀಜಿ ಪುಣ್ಯಸ್ಮರಣೆ

Contributed bydhanumani86@gmail.com|Vijaya Karnataka

A first-year punya smarane for Sri Chandrashekhara Shivacharya Swamiji was held at the Jangama Math in Karpuravalli village. MLA D. Ravishankar praised the swamiji's selfless service to society. He assured support for the math's development, including compound construction. Other religious leaders and dignitaries attended the event.

first death anniversary of sri chandrashekhara shivacharya swamiji at karpuravalli jangama matha mla d ravishankars assurance and new commitment for matha development

ಚಂದ್ರಶೇಖರ ಸ್ವಾಮೀಜಿ ಪುಣ್ಯಸ್ಮರಣೆ

ವಿಕ ಸುದ್ದಿಲೋಕ ಚುಂಚನಕಟ್ಟೆ

ಸನ್ಯಾಸತ್ವದ ಬದುಕಲ್ಲಿಯಾವುದೇ ತಾರತಮ್ಯವಿಲ್ಲದೇ ಸಮಾಜದ ಒಳಿತಿಗೆ ದುಡಿದ ಕರ್ಪೂರಹಳ್ಳಿ ಜಂಗಮ ಮಠದ ಶ್ರೀಗಳ ಬದುಕು ನಮಗೆಲ್ಲಆದರ್ಶವಾಗಿ ಉಳಿದಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮದ ಜಂಗಮ ಮಠದಲ್ಲಿಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿಮಾತನಾಡಿದರು.

‘‘ಮಠದ ಬೆಳೆವಣಿಗೆಗಾಗಿ ಹಗಲಿರುಳು ಶ್ರಮಿಸಿ ಮಠದ ಉತ್ತರಾಧಿಕಾರಿ ನೇಮಿಸಬೇಕು ಎನ್ನುವಷ್ಟರಲ್ಲಿಅವರು ನಮ್ಮನ್ನು ಅಗಲಿದ್ದು, ಅವರ ಉತ್ತರಾಧಿಕಾರಿಯಾಗಿರುವ ಅಭಿನವ ಚಂದ್ರಶೇಖರ ಶಿವಾಚಾರ್ಯರು ಮಠವನ್ನು ಇನ್ನಷ್ಟು ಮುನ್ನಲೆಗೆ ತಂದು ಎತ್ತರಕ್ಕೆ ಏರಿಸಲಿ,’’ ಎಂದು ಆಶಿಸಿದರು.

‘‘ಮಠಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಲು ನಾವು ಕಂಕಣಬದ್ಧ್ದರಾಗಿದ್ದು, ಮುಂದಿನ ದಿನಗಳಲ್ಲಿಮಠದ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗುವುದು. ಜತೆಗೆ ಮಠದ ಆಸ್ತಿ ಮತ್ತು ದಾಖಲೆಗಳನ್ನು ನೂತನ ಶ್ರೀಗಳ ಹೆಸರಿಗೆ ಹಸ್ತಾಂತರಿಸಲು ಕ್ರಮವಹಿಸಲಾಗುವುದು,’’ ಎಂದು ತಿಳಿಸಿದರು.

ಯಡಿಯೂರು ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘‘ಸಮಾಜ ಮತ್ತು ಮಾನವನ ಅಭಿವೃದ್ಧಿ ಎರಡರ ಓಟವನ್ನು ಒಟ್ಟಿಗೆ ಕೊಂಡೊಯ್ಯಬೇಕಾದ ಜವಬ್ದಾರಿ ಮಠಮಾನ್ಯಗಳದ್ದು. ಕರ್ಪೂರವಳ್ಳಿ ಮಠ ಆ ದಿಕ್ಕಿನಲ್ಲಿಕ್ರಮಿಸಲಿ. ಲಿಂಗೈಕ್ಯ ಶ್ರೀಗಳ ಆಶೀರ್ವಾದ ಎಲ್ಲರ ಮೇಲೆ ಇರಲಿ,’’ ಎಂದು ತಿಳಿಸಿದರು.

ನೂತನ ಕೆಪಿಸಿಸಿ ಸದಸ್ಯ ಸಿ.ಪಿ. ರಮೇಶ್ , ಸಮಾಜದ ಯುವ ನಾಯಕ ಹಾಡ್ಯ ಮಹದೇವಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ಅಂಕನಹಳ್ಳಿ ಮಠದ ವಿಜಯಕುಮಾರ ಸ್ವಾಮೀಜಿ, ಮೃತ್ಯುಂಜಯ ಸ್ವಾಮೀಜಿ, ಜಯದೇವ ತಾಯಿ, ಬಸವರಾಜೇಂದ್ರ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಶಂಕರ್ , ನಗರ ಅಧ್ಯಕ್ಷ ಪ್ರಭಾಕರ, ಕೆಡಗ ನಟರಾಜ್ , ರಾಜಶೇಖರ, ಗಾಯನಹಳ್ಳಿ ಕುಮಾರಸ್ವಾಮಿ, ನಟರಾಜ, ಲಿಂಗಪ್ಪ ಶ್ರೀನಿವಾಸ್ , ಲೋಕೇಶ, ಸಿದ್ದೇಶ್ , ಜಬೀರ್ , ಸಿದ್ದೇಶ್ , ನಂದಿಶ್ , ಸಿದ್ದು ಇತರರಿದ್ದರು.

ಶೀರ್ಷಿಕೆ

ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮದ ಜಂಗಮ ಮಠದಲ್ಲಿಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿಶಾಸಕ ಡಿ.ರವಿಶಂಕರ್ ಮಾತನಾಡಿದರು.