ಉತ್ತಮ ಶಿಕ್ಷಕ, ಸಮಾಜ ಸೇವಾ ಪ್ರಶಸ್ತಿ ಪ್ರದಾನ

Contributed byMruthyunjayar77@gmail.com|Vijaya Karnataka

The Karnataka Gnana Vignana Samithi held a state-level award ceremony. The event honored teachers and social workers. A.R. Shashikala and K.M. Chikkareddappa received the Best Teacher Award. G. Annamma was presented with the Social Service Award. The ceremony took place in Bengaluru. Several dignitaries attended the event.

karnataka jnana vijnana samiti state level best teacher and social service awards honour for chikkaballapur teachers and social workers

ಚಿಕ್ಕಬಳ್ಳಾಪುರ : ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿಅನಿತಾ ಕೌಲ್ ಸ್ಮರಣಾರ್ಥ 2025-26ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಸಮಾಜ ಸೇವಾ ಪ್ರಶಸ್ತಿ ವಿತರಣೆ ಸಮಾರಂಭ ಆಯೋಜಿಸಲಾಗಿತ್ತು.

ತಾಲೂಕಿನ ಗೊಳ್ಳುಚಿನ್ನಪ್ಪನಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕಿ ಎ.ಆರ್ . ಶಶಿಕಲಾ ಹಾಗೂ ನಂದಿ ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಂ.ಚಿಕ್ಕರೆಡ್ಡಪ್ಪ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು. ಸ್ವಾತಂತ್ರ್ಯ ಹೋರಾಟಗಾರ ಲಿಂ.ಗಂಗಪ್ಪ ಹೊಳೆಪ್ಪಬಾಡಗಿ ಮುಧೋಳ ಅವರ ಸ್ಮರಣಾರ್ಥ ನೀಡುವ ಸಮಾಜ ಸೇವಾ ಪ್ರಶಸ್ತಿಗೆ ನಗರಸಭೆ ಮಾಜಿ ಸದಸ್ಯೆ ಜಿ.ಅಣ್ಣಮ್ಮ ಭಾಜನರಾದರು.

ಕಾರ್ಯಕ್ರಮದಲ್ಲಿಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ .ಎನ್ . ಮುಕುಂದರಾಜ್ , ಹಿರಿಯ ಐಎಎಸ್ ಅಧಿಕಾರಿ ಎಲ್ .ಕೆ. ಅತೀಕ್ , ಕಾರ್ಯಾಧ್ಯಕ್ಷ ರಾಜನಾಯಕ್ , ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಬಸವರಾಜು, ಸಹ ಕಾರ್ಯಾದರ್ಶಿಗಳಾದ ಮಹಾದೇವಪ್ಪ, ಡಾ. ಸಿದ್ದಣ್ಣ ಬ್ಯಾಡಗಿ, ಉಪಾಧ್ಯಕ್ಷರಾದ ಡಾ. ಕೆ.ಎಸ್ . ಸ್ವಾಮಿ, ಶ್ರೀಧರ್ , ಶ್ರೀನಿವಾಸ್ , ಸಹ ಕಾರ್ಯದರ್ಶಿಗಳಾದ ಸಿದ್ದರಾಮಯ್ಯರೆಡ್ಡಿ, ಇಟಗಿ ಮುಗಳಿಕಟ್ಟೆ, ಲೋಕೇಶ್ , ಕೆ.ವಿ.ಜಗನ್ನಾಥ್ , ಜಿಲ್ಲಾಧ್ಯಕ್ಷ ಕೆ.ಎಂ. ರೆಡ್ಡಪ್ಪ ಹಾಗೂ ಜ್ಞಾನ-ವಿಜ್ಞಾನ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

24 ಸಿಬಿಪಿಪೋಟೋ 2

ಕೆವಿಸ ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಹಾಗೂ ಸಮಾಜ ಸೇವಾ ಪ್ರಶಸ್ತಿ ಕಾರ್ಯಕ್ರಮ ನಡೆಯಿತು.