ಯುವ ಜನ ಚಳವಳಿಯಾದ ಕ್ರೀಡಾ ಹಬ್ಬ

Contributed bymaheshbadiger05@gmail.com|Vijaya Karnataka

Bhumi Puja was performed for the final match arena of the Sansad Krida Mahotsav. The event will be held on February 26 and 27 at Karnataka College grounds in Dharwad. This sports festival aims to provide a platform for young athletes. It aligns with Prime Minister Narendra Modi's Khelo India initiative.

mp sports festival in dharwad grand sports fair becomes a youth movement foundation stone laid

(ನ್ಯೂ)

24ಮಹೇಶ4

ಸಂಸದರ ಕ್ರೀಡಾ ಮಹೋತ್ಸವದ ಅಂತಿಮ ಪಂದ್ಯಗಳ ಅಂಕಣಕ್ಕೆ ಭೂಮಿಪೂಜೆ

ಯುವ ಜನ ಚಳವಳಿಯಾದ ಕ್ರೀಡಾ ಹಬ್ಬ

ವಿಕ ಸುದ್ದಿಲೋಕ ಧಾರವಾಡ

ನಗರದ ಕರ್ನಾಟಕ ಕಾಲೇಜಿನ ಮೈದಾನದಲ್ಲಿಫೆ. 26, 27ರಂದು ನಡೆಯುವ ಸಂಸದರ ಕ್ರೀಡಾ ಮಹೋತ್ಸವದ ಅಂತಿಮ ಪಂದ್ಯಗಳ ಅಂಕಣಕ್ಕೆ ಮಂಗಳವಾರ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಖೇಲೋ ಇಂಡಿಯಾ ಆಶಯದಂತೆ, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈ ಕ್ರೀಡಾ ಹಬ್ಬ, ಇಂದು ಯುವ ಜನ ಚಳುವಳಿಯಾಗಿ ಮಾರ್ಪಟ್ಟಿದ್ದು, ನಮ್ಮ ಸಂಸದೀಯ ಕ್ಷೇತ್ರದ ಪ್ರತಿ ಕ್ರೀಡಾ ಪಟುಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಒಂದು ವೇದಿಕೆಯಾಗಿದೆ ಎಂದರು.

ನರೇಂದ್ರ ಮೋದಿಯವರಿಂದ ಆರಂಭಗೊಂಡ ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾ ಕಾರ್ಯಕ್ರಮಗಳು ದೇಶದಾದ್ಯಂತ ಜನರನ್ನು ಆಟ ಮತ್ತು ಆರೋಗ್ಯದ ಕಡೆಗೆ ಹೆಚ್ಚು ಜಾಗೃತರನ್ನಾಗಿಸಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿವಿಧಾನ ಪರಿಷತ್ ಸದಸ್ಯ ಎಸ್ .ವಿ.ಸಂಕನೂರ, ಹು-ಧಾ ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ, ಜಿಲ್ಲಾಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಶಂಕರ ಶೆಳಕೆ, ಸಂಜಯ ಕಪಟಕರ, ರಾಜೇಶ ಕೋಟೆಣ್ಣವರ, ಶಂಕರ ಕೊಟ್ರೆ, ಬಸವರಾಜ ಗರಗ, ಮಂಜುನಾಥ ಮಲ್ಲಿಗವಾಡ, ಮಹೇಂದ್ರ ಕೌತಾಳ, ಸುನೀಲ ಮೋರೆ, ಸುನಿತಾ ಮಾಳವದಕರ್ ಸೇರಿದಂತೆ ಇತರರು ಇದ್ದರು.

ಫೋಟೊ: 24ಮಹೇಶ4

ಧಾರವಾಡ ಕೆಸಿಡಿ ಮೈದಾನದಲ್ಲಿಫೆ.26, 27ರಂದು ನಡೆಯುವ ಸಂಸದರ ಕ್ರೀಡಾ ಮಹೋತ್ಸವದ ಅಂತಿಮ ಪಂದ್ಯಗಳ ಅಂಕಣಕ್ಕೆ ಮಂಗಳವಾರ ಛಲವಾದಿ ನಾರಾಯಣಸ್ವಾಮಿ ಭೂಮಿಪೂಜೆ ನೆರವೇರಿಸಿದರು.