ಮಕ್ಕಳಿಗೆ ಆಚಾರ, ಸಂಸ್ಕಾರ ಕಲಿಸಿ

Contributed byrudreshs2009@gmail.com|Vijaya Karnataka

Rishikeshananda Maharaj emphasized teaching children good conduct and values. He stated India is a global teacher. Western nations are drawn to Hindu culture. He urged imparting respect for elders and culture to children. Shivapatra Shri spoke about liberation from worldly bonds. The event included various dignitaries. The program was held at Siddharoodha Math.

let us teach children values and culture message of rishikeshananda maharaj at itagi shivanama saptaha

ಋುಷಿಕೇಶಾನಂದ ಮಹಾರಾಜರ ಸಲಹೆ | ಶಿವನಾಮ ಸಪ್ತಾಹ, ವೇದಾಂತ ಪರಿಷತ್

ವಿಕ ಸುದ್ದಿಲೋಕ ಇಟಗಿ

ಭಾರತ ಜಗತ್ತಿಗೆ ವಿಶ್ವಗುರುವಾಗಿದೆ ಎಂದು ಮಹಾರಾಷ್ಟ್ರದ ದತ್ತವಾಡದ ಬಾಬಾ ಮಹಾರಾಜ ಆಶ್ರಮದ ಋುಷಿಕೇಶಾನಂದ ಮಹಾರಾಜರು ಹೇಳಿದರು.

ಸ್ಥಳೀಯ ಸಿದ್ಧಾರೂಢ ಮಠದಲ್ಲಿನಡೆದ 110ನೇ ಶಿವನಾಮ ಸಪ್ತಾಹ ಹಾಗೂ ಅಖಿಲ ಕರ್ನಾಟಕ ವೇದಾಂತ ಪರಿಷತ್ ಕಾರ್ಯಕ್ರಮದಲ್ಲಿಆಶೀರ್ವಚನ ನೀಡಿದರು.

‘‘ಸಾಧು-ಸತ್ಪುರುಷರು ಜನ್ಮ ತಾಳಿ ಈ ಧರೆ ಪಾವನಗೊಳಿಸಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳು ಹಿಂದೂ ಸಂಸ್ಕೃತಿಗಳಿಗೆ ಮಾರು ಹೋಗುತ್ತಿದ್ದಾರೆ. ಹಾಗಾಗಿ, ನಮ್ಮ ಮಕ್ಕಳಿಗೆ ಉತ್ತಮ ಆಚಾರ, ವಿಚಾರ, ಸಂಸ್ಕೃತಿ, ಗುರು-ಹಿರಿಯರನ್ನು ಗೌರವಿಸುವುದನ್ನು ಕಲಿಸಬೇಕು,’’ಎಂದರು.

ಚಿಕ್ಕಮುನವಳ್ಳಿ ಶಿವಪತ್ರ ಶ್ರೀಗಳು ಮಾತನಾಡಿ, ‘‘ಭವ ಬಂಧನದಿಂದ ಮುಕ್ತರಾಗಲು ಶಾಸ್ತ್ರ, ಪುರಾಣ, ಅನನ್ಯ ಭಕ್ತಿ ಮತ್ತು ಗುರುವಿನ ಕೃಪೆ ಬೇಕು,’’ಎಂದರು.

ಹುಲಿಕಟ್ಟಿಯ ಲಿಂಗಾನಂದ ಪ್ರಭು ಸ್ವಾಮೀಜಿ, ಕುರಣಿಯ ಶಂಕರಾನಂದ ಶಾಸ್ತ್ರಿಗಳು, ಗ್ರಾಪಂ ಮಾಜಿ ಸದಸ್ಯ ಬಸವರಾಜ ತುರಮರಿ, ಕಾಂಗ್ರೆಸ್ ಮುಖಂಡ ಕಲ್ಲಪ್ಪ ತೋರೋಜಿ, ಕಲ್ಲಪ್ಪ ಜಾಧವ, ಬಾಬು ತುರಮರಿ ಇತರರು ಉಪಸ್ಥಿತರಿದ್ದರು.

ಈರಣ್ಣ ಕಾದ್ರೋಳ್ಳಿ ನಿರೂಪಿಸಿದರು. ವಿಠ್ಠಲ ಪದ್ಮಪ್ಪನವರ ಸ್ವಾಗತಿಸಿದರು. ಸಂಜು ದೇವಣ್ಣನವರ ವಂದಿಸಿದರು.

ಫೋಟೊ24ಇಟಗಿ1: ಇಟಗಿಯಲ್ಲಿನಡೆದಶಿವನಾಮ ಸಪ್ತಾಹದಲ್ಲಿಋುಷಿಕೇಶಾನಂದ ಮಹಾರಾಜರು ಆಶೀರ್ವಚನ ನೀಡಿದರು.