ಜಾಹೀರಾತುದಾರರ ಸುದ್ದಿ ಇಂದೇ ಬರಲಿ

Contributed bylingrajvc@gmail.com|Vijaya Karnataka

Former MLA M.K. Pattanshetti inaugurated the annual day celebration of the Veerashaiva Progressive Association School. He emphasized that providing quality education is their primary goal, fulfilling his father's dream. The institution has started schools and colleges from primary to degree level. More courses will be introduced soon. The event was attended by various dignitaries and staff members.

new momentum for quality education in badami mk pattashettys assurance at veerashaiva progressive sangha school annual day

ಗುಣಮಟ್ಟ ಶಿಕ್ಷಣ ನಮ್ಮ ಆದ್ಯತೆ

ಬಾದಾಮಿ: ‘‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭಿಸಬೇಕೆನ್ನುವುದು ನಮ್ಮ ತಂದೆ ಕನಸಾಗಿತ್ತು. ಅವರ ಕನಸು ನನಸು ಮಾಡಲು ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಗುರಿ ಎಂದು ವೀರಶೈವ ಪ್ರಗತಿಶೀಲ ಸಂಘ, ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ, ಮಾಜಿ ಶಾಸಕ ಎಂ.ಕೆ.ಪಟ್ಟಶೆಟ್ಟಿ ಹೇಳಿದರು.

ಪಟ್ಟಣದ ವೀರಶೈವ ಪ್ರಗತಿಶೀಲ ಸಂಘದ ಶಾಲೆಯಲ್ಲಿಹಮ್ಮಿಕೊಂಡ ಶಾಲಾ ವಾರ್ಷಿಕೋತ್ಸವ-2026 ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘‘ಗುಣಮಟ್ಟ ಶಿಕ್ಷಣ ಒದಗಿಸುವ ಧ್ಯೇಯದೊಂದಿಗೆ ಒಂದರಿಂದ ಪದವಿ ಕಾಲೇಜಿನವರೆಗೆ ಶಾಲೆ, ಕಾಲೇಜು ಪ್ರಾರಂಭಿಸಲಾಗಿದೆ. ಇನ್ನೂ ಬೇರೆ ಬೇರೆ ಕೋರ್ಸ್ ಗಳನ್ನು ಪ್ರಾರಂಭಿಸಲಾಗುವುದು,’’ ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷೆ ಶಾಂತಾದೇವಿ ಪಟ್ಟಣಶೆಟ್ಟಿ, ಸಂಸ್ಥೆ ನಿರ್ದೇಶಕ ಕಲ್ಲಪ್ಪ ಪಟ್ಟಣಶೆಟ್ಟಿ ಮಾತನಾಡಿದರು. ಪದವಿ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಪತ್ತಾರ, ಪ್ರೌಢಶಾಲೆಯ ಮುಖ್ಯಶಿಕ್ಷಕ ರಮೇಶ ಅರಕೇರಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಪಿ.ಎಚ್ .ಅಸೂಟಿ, ಆಂಗ್ಲಮಾಧ್ಯಮ ಶಾಲೆ ಮುಖ್ಯಶಿಕ್ಷಕ ಎಲ್ .ಎಚ್ .ಪಾಟೀಲ, ಸಹ ಶಿಕ್ಷಕರು, ಪ್ರಾಧ್ಯಾಪಕರು, ಸಿಬ್ಬಂದಿ ಇದ್ದರು.

ಚಿತ್ರ ಮಾಹಿತಿ;

ವೀರಶೈವ ಪ್ರಗತಿಶೀಲ ಸಂಘದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಉದ್ಘಾಟಿಸಿದರು.