ವಿಕ ಸುದ್ದಿಲೋಕ ಕೆ.ಆರ್ .ಪೇಟೆ
ಕೃಷ್ಣರಾಜಪೇಟೆ ತಾಲೂಕಿನ ಹೊಸಹೊಳಲು ಗ್ರಾಮದ ಆರಾಧ್ಯ ದೈವ ಶ್ರೀ ಲಕ್ಷಿ ್ಮನಾರಾಯಣಸ್ವಾಮಿ ಅವರ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಜಯಘೋಷÜಗಳ ನಡುವೆ ಸಂಭ್ರಮದಿಂದ ನಡೆಯಿತು.
ಶಾಸಕ ಎಚ್ .ಟಿ.ಮಂಜು ಶ್ರೀ ಲಕ್ಷಿ ್ಮೕನಾರಾಯಣ ಸ್ವಾಮಿ ಅವರ ಉತ್ಸವ ಮೂರ್ತಿಗೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಶಾಸಕ ಎಚ್ .ಟಿ.ಮಂಜು ಮಾತನಾಡಿ, ‘‘ಹೊಸಹೊಳಲು ಗ್ರಾಮವು ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದೆ. ಬೇಲೂರು-ಹಳೆಬೀಡು ಹೇಗೆ ವಿಶ್ವ ಪರಂಪರೆಯಲ್ಲಿತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿವೆಯೋ ಅದೇ ರೀತಿಯಾಗಿ ಹೊಸಹೊಳಲು ಹೆಚ್ಚಿನ ಮಹತ್ವವನ್ನು ಪಡೆಯಬೇಕೆಂಬ ಅಭಿಲಾಷೆಯಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ಕುಮಾರಸ್ವಾಮಿ ಅರನ್ನು ಭೇಟಿ ಮಾಡಿ ಮನವಿ ನೀಡಿದ್ದೇನೆ. ಜಾಗದ ಅಭಾವದಿಂದ ದನಗಳ ಜಾತ್ರೆಯನ್ನು ನಡೆಸಲು ಕಷ್ಟವಾಗುತ್ತಿದೆ. ಇನ್ನುಳಿದಂತೆ ತಿರುಪತಿ ಮಾದರಿಯಲ್ಲಿಯೆ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ. ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಲಾಗುವುದು,’’ ಎಂದು ತಿಳಿಸಿದರು.
ಸಮಾಜ ಸೇವಕ ಆರ್ ಟಿಒ ಮಲ್ಲಿಕಾರ್ಜುನ ಮಾತನಾಡಿ, ‘‘ಹಬ್ಬ, ಜಾತ್ರೆ, ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ರಥೋತ್ಸವ ಸಂಭ್ರಮದಲ್ಲಿಎಲ್ಲಾಜಾತಿ ವರ್ಗಗಳ ಜನರು ಒಂದಾಗಿ ಭಗವಂತನ ನಾಮಸ್ಮರಣೆ ಮಾಡಿದಾಗ ಸಾಮಾಜಿಕ ಅಸಮಾನತೆ ದೂರಾಗಿ ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ, ಸೌಹಾರ್ದತೆ ಮೂಡಲಿದೆ. ಇಂದಿನ ರಥೋತ್ಸವ ಕಾರ್ಯಕ್ರಮದಲ್ಲಿಸಾವಿರಾರು ಭಕ್ತರು ಆಗಮಿಸಿ ಶ್ರೀ ರಥದ ಕಳಸಕ್ಕೆ ಹಣ್ಣು ದವನ ಸಮರ್ಪಿಸಿ ಧನ್ಯತಾ ಭಾವನೆಯನ್ನು ಮೆರೆದಿದ್ದಾರೆ,’’ ಎಂದು ಹೇಳಿದರು.
ಉದ್ಯಮಿ ಜಿ.ಸೋಮಶೇಖರ್ , ಗ್ರೇಡ್ -2 ತಹಸೀಲ್ದಾರ್ ಲೋಕೇಶ್ ಹಾಗೂ ದೇವಾಲಯದ ಧರ್ಮದರ್ಶಿಗಳಾದ ರಾಮಚಂದ್ರ, ಐಸಿಎಲ್ ಮಂಜುನಾಥ್ , ಎಚ್ .ಡಿ.ರಘು, ಎಚ್ .ಆರ್ .ನಂದಕುಮಾರ್ , ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್ .ಕೆ. ಅಶೋಕ್ , ಪುರಸಭಾ ಸದಸ್ಯರಾದ ಎಚ್ .ಆರ್ .ಲೋಕೇಶ್ , ಎಚ್ .ಎನ್ .ಪ್ರವೀಣ್ , ಎಚ್ .ಡಿ.ಅಶೋಕ್ , ಕಲ್ಪನಾ ದೇವರಾಜು, ಪುರಸಭೆ ಮುಖ್ಯಾಧಿಕಾರಿ ಅಶೋಕ್ , ಕುರುಹಿನ ಶೆಟ್ಟಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಕನ್ಯಾ ರಂಗನಾಥ್ , ಪ್ರತಿಭಾ ಮಹಿಳಾ ಮಂಡಳಿ ಅಧ್ಯಕ್ಷೆ ಕೆ.ಮಂಜುಳಾ ಚನ್ನಕೇಶವ, ಅರವಟ್ಟಿಗೆ ಸೇವಾರ್ಥದಾರರಾದ ರೇಷ್ಮೆ ಕೃಷಿ ವಿಜ್ಞಾನಿ ಡಾ.ಮಂಜುನಾಥ್ ಸೇರಿದಂತೆ ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿಭಾಗವಹಿಸಿ ರಥಕ್ಕೆ ಹಣ್ಣು ದವನವನ್ನು ಸಮರ್ಪಿಸಿದರು.
ರಥೋತ್ಸವದ ಸಂದರ್ಭದಲ್ಲಿಕುರುಹಿನಶೆಟ್ಟಿ ಸಮಾಜದ ಬಂಧುಗಳು ನೆರೆದಿದ್ದ ಸಾವಿರಾರು ಭಕ್ತಾದಿಗಳಿಗೆ ಮಜ್ಜಿಗೆ ಹಾಗೂ ಪಾನಕವನ್ನು ವಿತರಿಸಿ, ಬಿಸಿಲಿನ ಜಳದ ತೀವ್ರತೆಯಿಂದ ದಣಿವಾರಿಸಿಕೊಳ್ಳಲು ನೆರವಾದರು.
ಚಿತ್ರಶೀರ್ಷಿಕೆ:ಋಈ್ಗ24ಊಉಆಓ್ಕP1ಧಿ- ಕೆ.ಆರ್ .ಪೇಟೆ ಪಟ್ಟಣದ ಹೊಸಹೊಳಲು ಗ್ರಾಮದಲ್ಲಿಶ್ರೀ ಲಕ್ಷಿತ್ರ್ಮನಾರಾಯಣಸ್ವಾಮಿ ಅವರ ಭವ್ಯ ರಥೋತ್ಸವವು ಅದ್ದೂರಿಯಾಗಿ ನಡೆಯಿತು.

