ಎಚ್ ಡಿಕೆ, ಗೃಹಸಚಿವರ ಭೇಟಿಗೆ ಅರ್ಥ ಕಲ್ಪಿಸಬೇಡಿ
ವಿಕ ಸುದ್ದಿಲೋಕ ಮಾಗಡಿ
ಕೇಂದ್ರ ಸಚಿವ ಎಚ್ .ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿಭೇಟಿಯಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಹೋಗುವ ಸಂದರ್ಭದಲ್ಲಿಸಿಕ್ಕಿರಬಹುದು. ಇದಕ್ಕೆ ಮಹತ್ವ ಕೊಡುವುದು ಬೇಡ ಎಂದು ಸುದ್ದಿಗಾರರ ಪ್ರಶ್ನೆಗೆ ಬಾಲಕೃಷ್ಣ ಉತ್ತರಿಸಿದರು.
ಚಕ್ರಬಾವಿ ಗ್ರಾಮದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಮುಂದಿನ ತಿಂಗಳು ಮಾ. 4ರಂದು ಚಕ್ರಬಾವಿ ಗ್ರಾಮದಲ್ಲಿವೈಜಿ ಗುಡ್ಡ ಜಲಾಶಯದಿಂದ ಕೆರೆಗಳನ್ನು ತುಂಬಿಸುವ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ ಚಕ್ರಬಾವಿ, ಅಗಲಕೋಟೆ, ಮತ್ತಿಕೆರೆ ನನ್ನ ತವರು ಗ್ರಾಮಗಳಾಗಿದ್ದು, ಈ ಭಾಗದ ಕೆರೆಗಳಿಗೆ ನೀರು ತುಂಬಿಸಿದರೆ ರೈತರು ತರಕಾರಿ ಅಡಕೆ ಗಿಡಗಳನ್ನು ಬೆಳೆದುಕೊಂಡು ಜೀವನ ಸಾಗಿಸಲು ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟ ಹೆಚ್ಚಾಗುವುದರಿಂದ ಕೃಷಿ ಚಟುವಟಿಕೆಗೂ ಹೆಚ್ಚಾಗುತ್ತದೆ. ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರ ಶ್ರಮದಿಂದ ಈ ಭಾಗದ ಹಲವು ಕೆರೆಗಳಿಗೆ ನೀರು ತುಂಬಿಸುವ ನೂರು ಕೋಟಿ ಯೋಜನೆಗೆ ಚಾಲನೆ ಕೊಡಲಾಗುತ್ತದೆ. ಡಿ.ಕೆ.ಶಿವಕುಮಾರ್ ಅವರು ಫೆ. 26ರಂದು ದಿಲ್ಲಿಗೆ ಹೋಗಬೇಕಾಗಿದ್ದರಿಂದ ಫೆ. 25ರಂದು ನಡೆಯಬೇಕಿದ್ದ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಬಾಲಕೃಷ್ಣ ತಿಳಿಸಿದರು.
ಜನಗಳ ತೀರ್ಪಿಗೆ ಸ್ವಾಗತಿಸುತ್ತೇನೆ: 30 ವರ್ಷಗಳ ನಂತರ ಚಕ್ರಬಾವಿ ವಿಎಸ್ ಎಸ್ ಎನ್ ಚುನಾವಣೆ ನಡೆಯುತ್ತಿದ್ದು, ಅಣ್ಣ-ತಮ್ಮಂದಿರಂತೆ ಸೊಸೈಟಿಯನ್ನು ನಡೆಸಿಕೊಂಡು ಬರುತ್ತಿದ್ದು, ಮಾಜಿ ಶಾಸಕರು ಈ ಬಾರಿ ಚುನಾವಣೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಹಲವು ವರ್ಷಗಳ ನಂತರ ಚುನಾವಣೆ ನಡೆದಿದ್ದು ಜನಗಳು ನೀಡುವ ತೀರ್ಪನ್ನು ಸ್ವಾಗತಿಸುತ್ತೇವೆ. ನಮ್ಮ ಕುಟುಂಬಸ್ಥರು ಈ ಸಹಕಾರಿ ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಬಂದಿದ್ದು, ಈಗ ನನ್ನ ಸಹೋದರ ಎಚ್ .ಎನ್ . ಅಶೋಕ್ ಅವರು ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿದ್ದಾರೆ. ಎಲ್ಲಾ12 ಸದಸ್ಯರು ಗೆಲುವು ಸಾಧಿಸಿದ್ದು, ರೈತರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗುತ್ತದೆ. ಜನಗಳು ನಮ್ಮ ಪರವಾಗಿ ಇದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಬಾಲಕೃಷ್ಣ ಹರ್ಷ ವ್ಯಕ್ತಪಡಿಸಿದರು.
24ಮಾಗಡಿ2

