ಜರ್ಮನ್ ಓಪನ್ ಸೂಪರ್ ಬ್ಯಾಡ್ಮಿಂಟನ್

Contributed bymanjunath.gowda@timesgroup.com|Vijaya Karnataka

Indian badminton stars Kidambi Srikanth and Tanvi Sharma are set to lead the national team at the German Open Super 300 tournament. Srikanth, a former World Championship silver medalist, aims to end his title drought. He will face a qualifier in his opening match. Youngster Tanvi Sharma will compete against Malaysia's Wang Ling Ching in the women's singles.

german open super 300 badminton kidambi srikanth and 16 year old tanvi sharma to lead the indian team

ಮುಲ್ಹೀಮ್ ಆನ್ ಡೆರ್ ರುಹ್ ್ರ: ಹಿರಿಯ ಆಟಗಾರ ಕಿಡಂಬಿ ಶ್ರೀಕಾಂತ್ ಮತ್ತು ವಿಶ್ವ ಜೂನಿಯರ್ ಚಾಂಪಿಯನ್ ಷಿಪ್ ನ ಬೆಳ್ಳಿ ಪದಕ ವಿಜೇತೆ ತನ್ವಿ ಶರ್ಮಾ ಅವರು ಮಂಗಳವಾರ ಆರಂಭ ವಾಗಲಿರುವ ಜರ್ಮನ್ ಓಪನ್ ಸೂಪರ್ 300 ಟೂರ್ನಿ

ಯಲ್ಲಿಭಾರತ ತಂಡದ ಸಾರಥ್ಯ ವಹಿಸಲಿದ್ದಾರೆ. 2021ರಲ್ಲಿವಿಶ್ವ ಚಾಂಪಿಯನ್ ಷಿಪ್ ನಲ್ಲಿಬೆಳ್ಳಿ ಪದಕ ಗೆದ್ದಿರುವ ಶ್ರೀಕಾಂತ್ , ಪ್ರಶಸ್ತಿ ಬರ ನೀಗಿಸಿ ಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಶ್ರೇಯಾಂಕದಲ್ಲಿ82ನೇ ಸ್ಥಾನಕ್ಕೆ ಕುಸಿದಿದ್ದ 31 ವರ್ಷ ಶ್ರೀಕಾಂತ್ , ಸದ್ಯ 32ನೇ ಸ್ಥಾನಕ್ಕೆ ಏರಿದ್ದಾರೆ. ಉನ್ನತ ಟೂರ್ನಿಗಳಿಗೆ ನೇರ ಅರ್ಹತೆ ಪಡೆಯಲು ರಾರ ಯಂಕಿಂಗ್ ಸುಧಾರಿಸಿ ಕೊಳ್ಳಲು ಎದುರು ನೋಡುತ್ತಿರುವ ಶ್ರೀಕಾಂತ್ , ಪುರುಷರ ಸಿಂಗಲ್ಸ್ ನ ಆರಂಭಿಕ ಪಂದ್ಯದಲ್ಲಿಅರ್ಹತಾ ಸುತ್ತಿನ ವಿಜೇತನನ್ನು ಎದುರಿಸಲಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ16 ವರ್ಷದ ತನ್ವಿ, ಆರಂಭಿಕ ಪಂದ್ಯದಲ್ಲಿಮಲೇಷ್ಯಾದ ವಾಂಗ್ ಲಿಂಗ್ ಚಿಂಗ್ ಎದುರು ಕಣಕ್ಕಿಳಿಯಲಿದ್ದಾರೆ.