ವಿಕ ಸುದ್ದಿಲೋಕ ಸುಳ್ಯ
ಮನೆಯೊಳಗೆ ತೆಗೆದಿರಿಸಿದ್ದ ಚಿನ್ನದ ಬಳೆ ನಾಪತ್ತೆಯಾದ ಬಗ್ಗೆ ಕಲ್ಲುಗುಂಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಚೆಂಬು ಗ್ರಾಮದ ಕಾಚೇಲು ಪೊನ್ನಪ್ಪ ಗೌಡರ ಮನೆಯಲ್ಲಿಈ ಘಟನೆ ಸಂಭವಿಸಿದ್ದು, ಕಳ್ಳತನವಾಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.
ಫೆ. 21ರಂದು ಮನೆಯ ಪಕ್ಕದಲ್ಲಿಮೆಹಂದಿ ಕಾರ್ಯಕ್ರಮ ಮುಗಿಸಿ ಬಂದಿದ್ದ ಕಾಚೇಲು ಪೊನ್ನಪ್ಪ ಅವರ ಪತ್ನಿ ತಲಾ ಒಂದೂಕಾಲು ಪವನ್ ಅಂದಾಜಿನ 2 ಬಳೆಗಳನ್ನು ಕೈಯಿಂದ ತೆಗೆದು ತೊಳೆದು ಅಕ್ಕಿ ಅಳೆಯುವ ಸೇರಿನಲ್ಲಿಹಾಕಿ ಅಡುಗೆ ಮನೆಯಲ್ಲಿಟ್ಟಿದ್ದರು. ಮರುದಿನ ಬೆಳಗ್ಗೆ ಮದುವೆಗೆ ಹೊರಡುವ ವೇಳೆ ಬಳೆ ತೊಡುವುದಕ್ಕಾಗಿ ಸೇರು ತೆಗೆದು ನೋಡುವಾಗ ಬಳೆ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿತಿಳಿಸಿದ್ದಾರೆ.

