ಮಸ್ಕರಾ ಜಾದು
ವಿದ್ಯಾ ನವೀನ್
ಮಸ್ಕರಾವು ಕಣ್ಣುಗಳನ್ನು ತಕ್ಷಣ ಸುಂದರವಾಗಿ ತೋರಿಸುವ ಮೇಕಪ್ ಉತ್ಪನ್ನ. ಸರಿಯಾಗಿ ಹಚ್ಚಿದರೆ ಕಣ್ಣುಗಳು ದೊಡ್ಡ ಮತ್ತು ಆಕರ್ಷಕವಾಗಿ ಕಾಣುತ್ತವೆ. ಮೊದಲು ಐಲ್ಯಾಶ್ ಕರ್ಲರ್ ಬಳಸಿ ಲ್ಯಾಶ್ ಗಳನ್ನು ಸ್ವಲ್ಪ ಕ ಲ್ ರ್ ಮಾಡಿ. ನಂತರ ಮಸ್ಕರಾ ಬ್ರಷ್ ಅನ್ನು ಲ್ಯಾಶ್ ಗಳ ಬೇಸ್ ಬಳಿ ಇಟ್ಟು, ನಿಧಾನವಾಗಿ ಮೇಲಕ್ಕೆ ಎಳೆಯಿರಿ. ಹಚ್ಚುವಾಗ ಸ್ವಲ್ಪ ಎಡಬಲವಾಗಿ ಚಲಿಸಿದರೆ ಲ್ಯಾಶ್ ಗಳಿಗೆ ಸಮವಾಗಿ ಹಚ್ಚುತ್ತದೆ.
ಕಣ್ಣುಗಳು ಅಗಲವಾಗಿ ಕಾಣಲು ಹೊರಭಾಗದ ಲ್ಯಾಶ್ ಗಳಿಗೆ ಸ್ವಲ್ಪ ಹೆಚ್ಚು ಮಸ್ಕಾರ ಹಚ್ಚಿ. ಸಹಜ ಲುಕ್ ಗೆ ಒಂದು ಕೋಟ್ ಸಾಕು. ಹೆಚ್ಚು ವಾಲ್ಯೂಮ್ ಬೇಕಾದರೆ ಎರಡು ಅಥವಾ ಮೂರು ಕೋಟ್ ಹಾಕಬಹುದು. ಪ್ರತಿ ಕೋಟ್ ನಡುವೆ ಸ್ವಲ್ಪ ಸಮಯ ಬಿಡಿ. ಕೆಳಗಿನ ಲ್ಯಾಶ್ ಗಳಿಗೂ ಸೌಮ್ಯವಾಗಿ ಹಚ್ಚಿದರೆ ಲುಕ್ ಇನ್ನೂ ಚೆನ್ನಾಗಿರುತ್ತದೆ.

