‘ ಶ್ರಮದಾನ ಜನತೆಗೆ ಸ್ಪೂರ್ತಿ ತುಂಬಲಿ’
ವಿಕ ಸುದ್ದಿಲೋಕ ಹೊನ್ನಾಳಿ
ಶ್ರಮದಾನ ವಿದ್ಯಾರ್ಥಿಗಳ ಅವಿಭಾಜ್ಯ ಅಂಗವಾಗಬೇಕು, ನಾವು ಮಾಡುವ ಶ್ರಮದಾನ ಗ್ರಾಮದ ಜನತೆಗೆ ಸ್ಪೂರ್ತಿ ತುಂಬುವಂತಿರಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಎಚ್ .ಗೋಪಗೊಂಡನಹಳ್ಳಿಯಲ್ಲಿಹಿರೇಕಲ್ಮಠದ ಎಸ್ ಎಂಎಸ್ ಎಫ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಎನ್ ಎಸ್ ಎಸ್ ಶಿಬಿರದಲ್ಲಿಮಾತನಾಡಿದರು.
ಗ್ರಾಮಸ್ಥರು ತಮ್ಮ ಗ್ರಾಮದ ಸ್ವಚ್ಛತೆಗೆ ಜನಪ್ರತಿನಿಧಿಗಳನ್ನು ಅವಲಂಬಿಸಬಾರದು ಬದಲಾಗಿ ನಾವೇ ಸ್ವಚ್ಛತೆಗೆ ಮುಂದಾಗಬೇಕು. ಆಗ ಮಾತ್ರ ಗ್ರಾಮಗಳ ಸೌಂದರ್ಯ ಹೆಚ್ಚುತ್ತದೆ ಎಂದರು.
ಒಡೆಯರ ಹತ್ತೂರು ಗ್ರಾಮದ ಸರಕಾರಿ ವೈದ್ಯ ಡಾ.ಮಲ್ಲಿಕಾರ್ಜುನ ಮಾತನಾಡಿ, ಖಾಯಿಲೆ ಬರೋದಕ್ಕಿಂತ ಮುಂಚಿತವಾಗಿಯೇ ಅದು ಬರದಂತೆ ನೋಡಿಕೊಳ್ಳುವುದೇ ಜಾಣತನ. ನಮ್ಮ ಮನೆ, ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಮ್ಮ ಆಹಾರ ಪದ್ಧತಿ, ಜೀವನ ಶೈಲಿ ಬದಲಾಗಬೇಕು, ಆಹಾರ ಔಷಧಿಯಾಗಬೇಕೇ ಹೊರತು, ಔಷಧಿಯೇ ಆಹಾರವಾಗಬಾರದು ಎಂದು ಹೇಳಿದರು.
ಪಿಎಸ್ ಐ ಕುಮಾರ್ ಮಾತನಾಡಿ, ಇತ್ತೀಚೆಗೆ ನಿಮ್ಮ ಗ್ರಾಮಗಳ ಸುತ್ತ ಮುತ್ತ ಟ್ರ್ಯಾಕ್ಟರ್ ಗಳಲ್ಲಿನ ಬ್ಯಾಟರಿಗಳ ಕಳ್ಳತನ ಹೆಚ್ಚಾಗುತ್ತಿದೆ. ಈ ಬಗ್ಗೆ ಮಾಲೀಕರು ಐಪಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ನೀವು ದೂರದಲ್ಲೆಲ್ಲೋ ಇದ್ದರೂ ಅದನ್ನು ಕ್ಯಾಮೆರಾದಲ್ಲಿನೋಡಬಹುದು. ಮನೆಗಳಿಗೆ ಮತ್ತು ನೂರಾರು ಜನ ಸೇರುವ ಜಾಗದಲ್ಲಿಸಿಸಿ ಕ್ಯಾಮೆರಾ ಅಳವಡಿಸಿಕೊಂಡರೆ ಕ್ರೈಂಗಳು ಕಡಿಮೆಯಾಗುತ್ತವೆ ಎಂದರು.
ಹಿರೇಕೇರೂರು ತಾಲೂಕು ಅಣಜಿ ಗ್ರಾಮದ ಮಾರುತಿ ಪಪೂ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ , ಗ್ರಾಮದ ನಿವೃತ್ತ ಶಿಕ್ಷಕ ಕೆ. ಮಹೇಶ್ವರಪ್ಪ, ಕಾಲೇಜಿನ ಪ್ರಾಂಶುಪಾಲ ಕೆ.ನಾಗೇಶಪ್ಪ, ಶಿಬಿರಾಧಿಕಾರಿ ಡಾ.ವಿ. ಬಸವರಾಜಪ್ಪ, ಸತೀಶ ಎ.ಕತ್ತಿಗೆ, ಎಂ.ಮಂಜಪ್ಪ, ಪಿ.ಬಸವರಾಜಪ್ಪ, ಎಂ.ನಾಗಪ್ಪ, ಪರಮೇಶ್ವರಪ್ಪ ಇತರಿದ್ದರು.
-----
24ಎಚ್ ಎನ್ ಎಲ್ 1
ಹೊನ್ನಾಳಿ ತಾಲೂಕು ಎಚ್ . ಗೋಪಗೊಂಡನಹಳ್ಳಿ ಗ್ರಾಮದಲ್ಲಿಸೋಮವಾರ ಹಮ್ಮಿಕೊಂಡಿದ್ದ ಎನ್ ಎಸ್ ಎಸ್ ಶಿಬಿರದಲ್ಲಿಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.

