ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವೆ ಏರ್ಪಟ್ಟಿರುವ ಮಧ್ಯಂತರ ವ್ಯಾಪಾರ ಒಪ್ಪಂದದ ಕರಡು ಅಂತಿಮ ಗೊಳಿಸಲು ನಿಗದಿಯಾಗಿದ್ದ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಫೆ.23ರಿಂದ ಫೆ.26ರ ತನಕ ಸಭೆ ನಿಗದಿಯಾಗಿತ್ತು. ಸಭೆ ಮುಂದೂಡಿಕೆ ಯಾಗಿರುವುದನ್ನು ಕೇಂದ್ರ ಸರಕಾರ ಮತ್ತು ಅಮೆರಿಕದ ಶ್ವೇತಭವನಗಳು ಖಚಿತಪಡಿಸಿವೆ. ಇತ್ತೀಚಿನ ಬೆಳವಣಿಗೆಗಳು ಮತ್ತು ಅವುಗಳ ಪರಿಣಾಮಗಳನ್ನು ಮೌಲ್ಯ ಮಾಪನ ಮಾಡಿದ ನಂತರ ಮಾತುಕತೆಯನ್ನು ನಿಗದಿಪಡಿಸಬೇಕು ಎಂಬುದು ಉಭಯ ದೇಶಗಳ ನಿಲುವು. ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ದರ್ಪಣ್ ಜೈನ್ ಮುಖ್ಯ ಸಂಧಾನಕಾರರಾಗಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್ ಡೊನಾಲ್ಡ್ ಟ್ರಂಪ್ ಅವರ ಪ್ರತಿಸುಂಕ ಆದೇಶವನ್ನು ರದ್ದುಗೊಳಿಸಿದೆ. ಇದರ ಬೆನ್ನಲ್ಲೇ ಫೆ.24ರಿಂದ ಜಾರಿಗೆ ಬರುವಂತೆ ಎಲ್ಲದೇಶಗಳ ಮೇಲೆ ಟ್ರಂಪ್ ಶೇ. 10ರಷ್ಟು ಸುಂಕ ವಿಧಿಸಿದರು. ಶನಿವಾರ
ತಮ್ಮ ಆದೇಶವನ್ನು ಬದಲಿಸಿ ಶೇ.10ರಷ್ಟಿದ್ದ ಸುಂಕವನ್ನು ಶೇ.15ಕ್ಕೆ ಏರಿಸಿದರು. ‘‘ಭಾರತದೊಂದಿಗೆ ಮಧ್ಯಂತರ ವ್ಯಾಪಾರ ಒಪ್ಪಂದವಾಗಿದ್ದು ಇದರ ಪ್ರಕಾರ ಸುಂಕದ ಪ್ರಮಾಣದಲ್ಲಿಯಾವುದೇ ವ್ಯತ್ಯಾಸವಾಗು ವುದಿಲ್ಲ,’’ ಎಂದೂ ಘೋಷಿಸಿದ್ದರು. ಸುಂಕ ಹೇರಿಕೆಯ ಕುರಿತು ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದರ ಕುರಿತು ಸ್ವತಃ ಡೊನಾಲ್ಡ್ ಟ್ರಂಪ್ ಅವರಲ್ಲೇ ಗೊಂದಲ ಮನೆ ಮಾಡಿದೆ. ಇಂಥ ಸನ್ನಿವೇಶದಲ್ಲಿಭಾರತದೊಂದಿಗೆ ಈಗಾಗಲೇ ಮುಕ್ತಾಯದ ಘಟ್ಟದಲ್ಲಿರುವ ಸಂಧಾನದ ಕುರಿತು ಮಾತುಕತೆ ಆರಂಭಿಸಿದರೆ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲು ಹಲವು ತೊಡಕುಗಳಿವೆ. ಈ ಕಾರಣಕ್ಕೆ ಸಭೆಯನ್ನು ಮುಂದೂಡಲಾಗಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಕಾನೂನು ತಜ್ಞರೊಂದಿಗೆ ಸಮಾ ಲೋಚನೆ ತೀರ್ಪಿನ ಪರಿಣಾಮಗಳ ಬಗ್ಗೆ ಭಾರತವು ಕಾನೂನು ಅಭಿಪ್ರಾಯವನ್ನು ಪಡೆಯುವ ಸಾಧ್ಯತೆಯಿದೆ ಎಂದು
ಹಿರಿಯ ಸರಕಾರಿ ಅಧಿಕಾರಿಯೊಬ್ಬರು ‘ಎಕನಾಮಿಕ್ ಟೈಮ್ಸ…’ಗೆ ತಿಳಿಸಿದ್ದಾರೆ. ಪರಸ್ಪರ ಅನುಕೂಲಕರ ದಿನಾಂಕದಲ್ಲಿಸಭೆಯನ್ನು ಮರು ನಿಗದಿಪಡಿ ಸಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.

