ಹಾಕಿ: ಭಾರತಕ್ಕೆ ಪುಟಿದೇಳುವ ವಿಶ್ವಾಸ

Contributed bymanjunath.gowda@timesgroup.com|Vijaya Karnataka

The Indian hockey team seeks a strong comeback against Spain in their upcoming FIH Pro League match. After a mixed performance in Hobart, India aims to secure a victory. The team, a blend of youth and experience, is looking to capitalize on penalty corner opportunities.

indian hockey team ready to bounce back against spain in fih pro league

ಹೋಬರ್ಟ್ : ಎಫ್ ಐಎಚ್ ಪ್ರೊ ಲೀಗ್ ನ ಹಾಲಿ ಚರಣದಲ್ಲಿನೀರಸ ಪ್ರದರ್ಶನ ನೀಡಿರುವ ಭಾರತ ತಂಡ ಮಂಗಳವಾರ ನಡೆಯಲಿರುವ ರಿವರ್ಸ್ ಪಂದ್ಯದಲ್ಲಿಸ್ಪೇನ್ ವಿರುದ್ಧ ಪುಟಿದೇಳುವ ನಿರೀಕ್ಷೆಯಲ್ಲಿದೆ. ಹೋಬರ್ಟ್ ಚರಣದ ಆಸ್ಪ್ರೇಲಿಯಾ ವಿರುದ್ಧ ಚೇತೋಹಾರಿ ಪ್ರದರ್ಶನ ನೀಡಿದ್ದ ಭಾರತ, ಶೂಟೌಟ್ ನಲ್ಲಿ4-5ರಲ್ಲಿಪರಾಭವಗೊಂಡಿತು. ಹೋಬರ್ಟ್ ಲೆಗ್ ನ ಮೊದಲ ಪಂದ್ಯದಲ್ಲಿ

ಸ್ಪೇನ್ ಗೆ ಮಣಿದಿದ್ದ ಭಾರತೀಯರು, ರಿವರ್ಸ್ ಪಂದ್ಯದಲ್ಲಿತಿರುಗೇಟು ನೀಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಪೆನಾಲ್ಟಿ ಕಾರ್ನರ್ ಅವಕಾಶ

ಗಳನ್ನು ಸಮರ್ಥವಾಗಿ ಬಳಸಿಕೊಳ್ಳದಿರುವುದು ತಂಡದ ದೊಡ್ಡ ಸಮಸ್ಯೆಯಾಗಿದೆ. ಯುವ

ಮತ್ತು ಅನುಭವಿಗಳನ್ನು ಹೊಂದಿರುವ

ಭಾರತ, ಇದುವರೆಗೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಕೂಕುಬರೂಸ್ ಎದುರು ದಿಟ್ಟ

ಆಟ ಪ್ರದರ್ಶಿಸಿರುವುದು ತಂಡದಲ್ಲಿಹೊಸ ಹುರುಪು ನೀಡಿದೆ. ಹೀಗಾಗಿ ಭಾರತ ಲಯ ಕಂಡುಕೊಳ್ಳುವ ಸಾಧ್ಯತೆ ಇದೆ.