ಜೈವಿಕ ಆರ್ಥಿಕತೆಯಲ್ಲಿಕರ್ನಾಟಕದ ಭಧಿವಿಷ್ಯ ಉಜ್ವಲ

Contributed byVenkat K|Vijaya Karnataka

Karnataka's bioeconomy is set for significant growth, reaching Rs 3,25,360 crore by 2025. This expansion covers research, manufacturing, and services. Bengaluru leads with a 54% share, followed by Mysuru, Belagavi, and Dakshina Kannada. North Karnataka districts are emerging as agri-biotech hubs. This sector is poised to be a major economic driver.

karnataka emerges as a global leader in bioeconomy states bio economy crosses 325 lakh crore by 2025

ಬೆಂಗಳೂರು: ರಾಜ್ಯದ ಜೈವಿಕ ಆರ್ಥಿಕತೆಯು (ಬಯೋ ಎಕಾನಮಿ) 2025ರಲ್ಲಿ 3,25,360 ಕೋಟಿ ರೂ.ಗೆ (39.2 ಶತಕೋಟಿ ಡಾಲರ್ ) ತಲುಪಿದೆ. ಇದು ಸಂಶೋಧನೆ ಜೊತೆಗೆ ತಯಾರಿಕೆ, ವಿತರಣೆ, ಸೇವೆಗಳವರೆಗೆ ಚಾಚಿಕೊಂಡಿದೆ. ಸಂಪೂರ್ಣ ಮೌಲ್ಯ ಸರಪಳಿ ಒಳಗೊಂಡಿರುವ, ತಯಾರಿಕೆ ಕೇಂದ್ರಿತ ಜೈವಿಕ ಆರ್ಥಿಕತೆಯು ರಾಜ್ಯದಲ್ಲಿಗಮನಾರ್ಹವಾಗಿ ವಿಸ್ತರಣೆಯಾಗುತ್ತಿದೆ. ಎಲೆಕ್ಟ್ರಾನಿಕ್ಸ್ , ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿಕಾರ್ಯನಿರ್ವಹಿಸು ತ್ತಿರುವ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯು (ಕೆಐಟಿಎಸ್ ), ಜೈವಿಕ ತಂತ್ರಜ್ಞಾನ ಉದ್ಯಮಗಳ ಸಂಘದ (ಎಬಿಎಲ…ಇ) ಸಹಯೋಗದಲ್ಲಿಸಿದ್ಧಪಡಿಸಿರುವ ರಾಜ್ಯದ ಜೈವಿಕ ಆರ್ಥಿಕತೆಯ ವರದಿ 2025ಯಲ್ಲಿಈ ಸಂಗತಿ ಉಲ್ಲೇಖವಾಗಿದೆ. ವರದಿ ಬಿಡುಗಡೆ ಮಾಡಿದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ‘‘ಈ ವರದಿಯು ರಾಜ್ಯದ ಸಮಗ್ರ ಆರ್ಥಿಕ ವ್ಯವಸ್ಥೆಯಲ್ಲಿಜೈವಿಕ ಆರ್ಥಿಕತೆಯು ಗಮನಾರ್ಹ ಪಾಲು ಹೊಂದಿರುವುದನ್ನೂ ಸೂಚಿಸುತ್ತದೆ. ಜೈವಿಕ ತಂತ್ರಜ್ಞಾನವು ಇನ್ನು ಮುಂದೆ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಿರದೆ, ಆರ್ಥಿಕ ಬೆಳವಣಿಗೆಗೆ ಚಾಧಿಲಕ ಶಧಿಕ್ತಿಧಿಯಾಧಿಗಿಧಿದೆ’’ ಎಂದರು. ಜಿಲ್ಲೆಗಳ ಪಾಲು: ರಾಜ್ಯದ ಜೈವಿಕ ಆರ್ಥಿಕತೆಯ ಬೆಳವಣಿಗೆಯು ವಿಕೇಂದ್ರಿಕರಣ ಆಗುತ್ತಿದೆ. ಬೆಂಗಳೂರು ನಗರ ಶೇ. 54ರಷ್ಟು ರಷ್ಟು ಪಾಲು ಹೊಂದಿದೆ. ಮೈಸೂರು ಶೇ. 8.7ರಷ್ಟು ಕೊಡುಗೆ ನೀಡುತ್ತಿದೆ. ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಒಟ್ಟಾಗಿ ಶೇಕಡ 9 ಕ್ಕಿಂತ ಹೆಚ್ಚು ಪಾಲು ಹೊಂದಿವೆ. ಉತ್ತರ ಕರ್ನಾಟಕದ ಜಿಲ್ಲೆಗಳು ಕೃಷಿ-ಜೈವಿಕ ತಂತ್ರಜ್ಞಾನ ವಲಯಗಳಾಗಿ ಗಮನ ಸೆಳೆಯುತ್ತಿವೆ.