ಕಿಚನ್ ಟಿಫ್ಸ್

Contributed bybabitha.salian@timesgroup.com|Vijaya Karnataka

ಚಹಾ ಎಲೆಗಳಲ್ಲಿ ಕಲಬೆರಕೆ ಆಗಿದೆಯೇ ಎಂದು ಸುಲಭವಾಗಿ ಪರೀಕ್ಷಿಸಬಹುದು. ಆಯಸ್ಕಾಂತ ಬಳಸಿ ಲೋಹೀಯ ವಸ್ತುಗಳನ್ನು ಪತ್ತೆಹಚ್ಚಬಹುದು. ನೀರಿನಲ್ಲಿ ಕೃತಕ ಬಣ್ಣ ಬೆರೆಸಲಾಗಿದೆಯೇ ಎಂಬುದನ್ನು ತಿಳಿಯಬಹುದು. ಪರಿಮಳ ಮತ್ತು ತಾಜಾತನ ಮುಖ್ಯ. ಸೀಲ್ ಆದ ಪ್ಯಾಕ್ ನಲ್ಲಿರುವ ಚಹಾ ಖರೀದಿಸಿ.

methods to test the purity of tea leaves

ಚಹಾ ಎಲೆಯ ಶುದ್ಧತೆ ಪರೀಕ್ಷಿಸಿ

ಕಂದು ಮಿಶ್ರಿತ ಹಸಿರು ಬಣ್ಣದ ಚಹಾ ಎಲೆಯಲ್ಲಿಯೂ ಕಲಬೆರಕೆ ಆಗಿರುವ ಸಾಧ್ಯತೆ ಇರುತ್ತದೆ. ಕಳಪೆ ಗುಣಮಟ್ಟದ ಅಂದರೆ ಮಸುಕು ಬಣ್ಣ, ಪರಿಮಳರಹಿತ ಅಥವಾ ಹಗುರವಾಗಿರುವ ಚಹಾ ಎಲೆಗಳಲ್ಲಿಬರಿಗಣ್ಣಿಗೆ ಕಾಣದ ಕಲಬೆರಕೆ ವಸ್ತುಗಳಿರುತ್ತವೆ. ಇದಕ್ಕೆ ಕೃತಕ ಬಣ್ಣ, ಕಬ್ಬಿಣ ಮುಂತಾದ ಲೋಹೀಯ ವಸ್ತುಗಳನ್ನು ಬೆರೆಸಿರಲಾಗಿರುತ್ತದೆ. ಇದನ್ನು ಪರೀಕ್ಷಿಸಲು ಸುಲಭ ವಿಧಾನಗಳಿವೆ.

-ಒಂದು ಪ್ಲೇಟ್ ಅಥವಾ ಶೀಟ್ ಮೇಲೆ ಒಣ ಚಹಾ ಎಲೆಗಳನ್ನು ಹರಡಿಸಿ. ಒಂದು ಆಯಸ್ಕಾಂತವನ್ನು ಎಲೆಗಳ ಮೇಲೆ ನಿಧಾನವಾಗಿ ಚಲಿಸುತ್ತಿರಿ. ಎಲೆಗಳ ಮೇಲೆ ಅದನ್ನು ಒತ್ತಬೇಡಿ. ಚಹಾ ಎಲೆಗಳಲ್ಲಿಲೋಹೀಯ ವಸ್ತುಗಳಿದ್ದರೆ ಈ ಚುಂಬಕಕ್ಕೆ ಅಂಟಿಕೊಳ್ಳುತ್ತವೆ.

-ಫಿಲ್ಟರ್ ಪೇಪರ್ ಅಥವಾ ಬ್ಲೋಟಿಂಗ್ ಪೇಪರ್ ಅಥವಾ ಪ್ಲೈನ್ ಟಿಶ್ಯೂ ಮೇಲೆ ಸ್ವಲ್ಪ ಒಣ ಚಹಾ ಎಲೆಗಳನ್ನು ಹಾಕಿ. ಇದರ ಮೇಲೆ ಕೆಲವು ಹನಿ ನೀರು ಹಾಕಿ. 30 ಸೆಕೆಂಡುಗಳ ಬಳಿಕ ಇದರಲ್ಲಿಆಗುವ ಬದಲಾವಣೆಗಳನ್ನು ಗಮನಿಸಿ. ನೈಸರ್ಗಿಕ ಚಹಾ ಎಲೆ ನಿಧಾನಕ್ಕೆ ತನ್ನ ಬಣ್ಣ ಬಿಡುತ್ತದೆ ಮತ್ತು ಇದಕ್ಕೆ ಬಿಸಿ ನೀರಿನ ಅಗತ್ಯವಿರುತ್ತದೆ. ಪೇಪರ್ ನಲ್ಲಿತಕ್ಷಣಕ್ಕೆ ಕಡು ಕಂದು ಅಥವಾ ಕಪ್ಪು ಕಲೆಗಳು ಹರಡಿಕೊಂಡರೆ ಇದಕ್ಕೆ ಕೃತಕ ಬಣ್ಣ ಬೆರೆಸಲಾಗಿದೆ ಎಂದು ಅರ್ಥ.

-ಚಹಾ ಹುಡಿ ಅಥವಾ ಎಲೆ ಖರೀದಿಸುವಾಗ ಅದರ ಪರಿಮಳ ಮತ್ತು ತಾಜಾತನ ಮುಖ್ಯವಾಗುತ್ತದೆ. ಆದ್ದರಿಂದ ಸೀಲ್ ಆಗಿರುವ ಪ್ಯಾಕ್ ನಲ್ಲಿರುವ, ಅಧಿಕೃತ ಲೇಬಲ್ ಇರುವ ಚಹಾ ಪುಡಿ ಪೊಟ್ಟಣವನ್ನೇ ಖರೀದಿಸಿ.