ಮುಂಬಯಿ ಷೇರುಪೇಟೆ ಬಲವರ್ಧನೆ

Contributed byVenkat K|Vijaya Karnataka

Mumbai's stock market saw a significant surge on Monday. The Sensex and Nifty indices climbed higher, driven by strong performance in public sector banks, auto, and finance stocks. This rise was partly fueled by the US Supreme Court's decision to cancel a retaliatory tariff, easing export hurdles for India.

mumbai stock market sensex nifty rally trump tariff reversal gives new boost to exports and investments

ಮುಂಬಯಿ: ಸರಕಾರಿ ಸ್ವಾಮ್ಯದ ಬ್ಯಾಂಕ್ , ಆಟೊ, ಹಣಕಾಸು ಷೇರುಗಳ ಏರಿಕೆಯಿಂದ ಸೋಮವಾರ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡವು. ಮುಂಬಯಿ ಷೇರುಪೇಟೆ ಸೂಚ್ಯಂಕ ‘ ಸೆನ್ಸೆಕ್ಸ್ ’ 479.95 ಅಂಕ ಜಿಗಿದು 83,294.66 ರಲ್ಲಿವಹಿವಾಟು ಮುಗಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ‘ನಿಫಿ’್ಟ 141.75 ಅಂಕ ಜಂಪ್ ಆಗಿ 25,713ರಲ್ಲಿವಹಿವಾಟು ಕೊನೆಗೊಂಡಿತು. ದೇಶೀಯ ಸಾಂಸ್ಥಿಕ ಹೂಡಿಕೆದಾರರು 2,637.15 ಕೋಟಿ ರೂ. ಮೌಲ್ಯದ ಈಕ್ವಿಟಿ ಗಳನ್ನು ಖರೀದಿಸಿದರು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು 934.61 ಕೋಟಿ ರೂ. ಮೌಲ್ಯದ ಈಕ್ವಿಟಿಗಳನ್ನು ಮಾರಾಟ ಮಾಡಿದರು. ‘‘ಟ್ರಂಪ್ ಹೇರಿದ್ದ ಪ್ರತಿಸುಂಕವನ್ನು ಅಮೆರಿಕದ ಸುಪ್ರೀಂಕೋರ್ಟ್ ರದ್ದುಪಡಿಸಿದ್ದನ್ನು ಮುಂಬಯಿ ಷೇರುಪೇಟೆ ಸ್ವಾಗತಿಸಿದೆ. ಇದರಿಂದ ಭಾರತದ ರಫ್ತಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿವೆ. ರಪ್ತು ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ಹೊಸ ಹಾದಿ ಸಿಕ್ಕಿದೆ. ಇದು ಹೂಡಿಕೆದಾರರಿಗೆ ಹೊಸ ಬಲ ತಂದಿದೆ,’’ ಎಂದು ಹೂಡಿಕೆ ತಜ್ಞರು ವಿಶ್ಲೇಷಿಸಿದ್ದಾರೆ. ಎಐ ಪ್ರಭಾವದಿಂದ ಐಟಿ ವಲಯ ಕೊಂಚ ಎಚ್ಚರಿಕೆಯ ನಡೆ ಇರಿಸಿದೆ. ಹೀಗಾಗಿ ಈ ವಲಯದ ಷೇರುಗಳು ಚೇತರಿಕೆ ಕಂಡಿಲ್ಲ. ಏಷ್ಯಾದ ಮಾರುಕಟ್ಟೆಗಳ ಪೈಕಿ ಹಾಂಕಾಂಗ್ ನ ಹ್ಯಾಂಗ್ ಸೆಂಗ್ ಶೇ. 2.53ರಷ್ಟು ಜಂಪ್ ಆದರೆ ದಕ್ಷಿಣ ಕೊರಿಯಾದ ಕೊಸ್ಪಿ ಶೇ.1ರಷ್ಟು ಜಿಗತ ಕಂಡಿತು. ಐರೋಪ್ಯ ಮಾರುಕಟ್ಟೆಯಲ್ಲಿಮಿಶ್ರ ಪ್ರತಿಕ್ರಿಯೆ ಇತ್ತು. ಜರ್ಮನಿ, ಪ್ಯಾರಿಸ್ ಮತ್ತು ಲಂಡನ್ ಮಾರುಕಟ್ಟೆಗಳು ಇಳಿಕೆ ಕಂಡವು.