ಬುರುಡೆ ಇಟ್ಟುಕೊಳ್ಳುತ್ತಿದ್ದ ನಿಯಾಂಡರ್ ಥಲ್ ಗಳು
ಸ್ಪೇನ್ ನ ಗುಹೆಯಲ್ಲಿ35 ಪ್ರಾಣಿಗಳ ಅವಶೇಷಗಳು ಪತ್ತೆ
ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಚರ್ಮ, ಮೂಳೆ, ಬುರುಡೆಗಳನ್ನು ಅಲಂಕಾರಿಕವಾಗಿ ಬಳಸುವ ಪ್ರವೃತ್ತಿ ಬಹುಕಾಲದಿಂದಲೂ ಇದೆ. ನಮ್ಮ ದೇಶದಲ್ಲಿಇದು ಕಾನೂನಿನ ಪ್ರಕಾರ ದಂಡನೀಯ ಅಪರಾಧ. ಆದರೆ, ಕೆಲವು ದೇಶಗಳಲ್ಲಿಬೇಟೆಗೆ ಕಾನೂನಿನ ಮಾನ್ಯತೆಯೂ ಇದೆ. ಇಂತಹ ಪ್ರದೇಶಗಳಲ್ಲಿಪ್ರಾಣಿಗಳ ಅವಶೇಷಗಳನ್ನು ಪ್ರದರ್ಶನದ ಸರಕಾರಿ ಬಳಸಲಾಗುತ್ತದೆ.
ಹೀಗೆ, ಸತ್ತ ಪ್ರಾಣಿಗಳ ಬುರುಡೆ, ಮೂಳೆಗಳನ್ನು ತೆಗೆದಿಟ್ಟುಕೊಳ್ಳುವುದು ಹೊಸ ವಿಚಾರವೇನಲ್ಲ. ಇಂತಹ ಪ್ರವೃತ್ತಿಗೆ ಸಾವಿರಾರು ಮಾತ್ರವಲದಲ್ಲ, ಲಕ್ಷಾಂತರ ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ ವಿಜ್ಞಾನಿಗಳು. ಸ್ಪೇನ್ ನ ಗುಹೆಯಲ್ಲಿಸಿಕ್ಕ ಬುರುಡೆಗಳನ್ನು ಅಧ್ಯಯನ ಮಾಡಿದ ವಿಜ್ಞಾನಿಗಳು ಈ ವಿಚಾರ ಬಹಿರಂಗ ಪಡಿಸಿದ್ದಾರೆ.
ಸ್ಪೇನ್ ನ ಡೆಸ್ -ಕ್ಯೂಬಿಯರ್ಟಾ ಗುಹೆಯಲ್ಲಿ2009ರಲ್ಲಿಉತ್ಖನನ ಆರಂಭವಾಗಿತ್ತು. ಕಾಲಕೋಶದ ಹಲವು ಅಚ್ಚರಿಗಳು ಈ ಗುಹೆಯಲ್ಲಿಬಯಲಾಗಿದ್ದವು. ಇಲ್ಲಿಉತ್ಖನನ ಮಾಡುವಾಗ ಒಂದು ಕಡೆ ವ್ಯವಸ್ಥಿತವಾಗಿ ಜೋಡಿಸಿದ್ದ ತಲೆಬುರುಡೆಗಳು ಸಿಕ್ಕಿದ್ದವು. ಇದರಲ್ಲಿ28 ಕಾಡು ಕೋಣಗಳು, ಐದು ಜಿಂಕೆಗಳು ಹಾಘೂ ಎರಡು ಖಡ್ಗಮೃಗಗಳ ಸೇರಿದಂತೆ ಕನಿಷ್ಠ 35 ಪ್ರಾಣಿಗಳ ಅವಶೇಷಗಳಿದ್ದವು. ಆಶ್ಚರ್ಯಕರವಾಗಿ, ಈ ಪ್ರಾಣಿಗಳ ಕಾಲುಗಳು, ದವಡೆ ಮೂಳೆಗಳು ಮತ್ತು ಕೆನ್ನೆಯ ಮೂಳೆಗಳು ಸೇರಿದಂತೆ ದೇಹದ ಇತರ ಭಾಗಗಳು ಕಾಣೆಯಾಗಿದ್ದು, ತಲೆಬುರುಡೆಗಳ ಮೇಲಿನ ಭಾಗಗಳು ಮಾತ್ರ ಇದ್ದವು, ಅವುಗಳಲ್ಲಿಹೆಚ್ಚಿನವು ಇನ್ನೂ ಕೊಂಬುಗಳನ್ನು ಹೊಂದಿದ್ದವು. ನಿಯಾಂಡರ್ ಥಲ್ ಗಳು ಬೇಟೆಯಾಡಿ, ತಿಂದು ಉಳಿದ ಅವಶೇಷಗಳು ಇವು ಎಂದು ವಿಜ್ಞಾನಿಗಳು ಆರಂಭದಲ್ಲಿನಂಬಿದ್ದರು.
ಆದರೆ, ಸ್ಪೇನ್ ನ ಅಲ್ಕಾಲಾ ವಿಶ್ವವಿದ್ಯಾಲಯದ ಪುರಾತತ್ವಶಾಸ್ತ್ರಜ್ಞರಾದ ಲೂಸಿಯಾ ವಿಲ್ಲಾಸ್ಕುಸಾ ನೇತೃತ್ವದ ತಂಡವು ಮೂಳೆಗಳನ್ನು ಹೇಗೆ ಜೋಡಿಸಲಾಗಿದೆ, ಅವುಗಳನ್ನು ಎಷ್ಟು ಚೆನ್ನಾಗಿ ಸಂರಕ್ಷಿಸಲಾಗಿದೆ ಮತ್ತು ಕಾಲಾನಂತರದಲ್ಲಿಅವು ಹೇಗೆ ಮುರಿದುಹೋಗಿವೆ ಎಂಬುದನ್ನು ಅಧ್ಯಯನ ಮಾಡಿದಾಗ ಆ ಬುರುಡೆಗಳು ಗುಹೆಯಲ್ಲಿಆಕಸ್ಮಿಕವಾಗಿ ಉಳಿದಿಲ್ಲ, ಬದಲಾಗಿ ಉದ್ದೇಶವಪೂರ್ವಕವಾಗಿಯೇ ಉಳಿಸಲಾಗಿದೆ ಎನ್ನುವುದು ತಿಳಿದುಬಂದಿದೆ.
ಅಧ್ಯಯನ ಪ್ರಕಾರ ಈ ಬುರುಡೆಗಳನ್ನು ಒಂದೇ ಬಾರಿ ತಂದು ಇಡಲಾಗಿಲ್ಲ. ಕಾಲಾನುಕ್ರಮದಲ್ಲಿತಂದು ಜೋಡಿಸಲಾಗಿದೆ. ಆದರೆ, ನಿಯಾಂಡರ್ ಥಲ್ ಗಳ ಈ ವರ್ತನೆಗೆ ನಿಖರ ಕಾರಣ ಏನು ಅನ್ನುವುದು ಮಾತ್ರ ವಿಜ್ಞಾನಿಗಳಿಗೆ ತಿಳಿದಿಲ್ಲ.
ಬಾಕ್ಸ್
ನಿಯಾಂಡರ್ ಥಲ್ ಗಳು
ಸುಮಾರು 40 ಸಾವಿರ ವರ್ಷಗಳ ಹಿಂದೆ ಅಳಿದುಹೋದ ನಿಯಾಂಡರ್ ಥಲ್ ಗಳು ನಮ್ಮ ಪೂರ್ವಜರಾದ ಹೋಮೋಸೆಫಿಯನ್ ಗಳ ಜತೆ ಜತೆಗೆ ಹಲವು ಸಾವಿರ ವರ್ಷಗಳ ಕಾಲ ಯೂರೋಪ್ ಹಾಗೂ ಏಷ್ಯಾದ ಭಾಗಗಳಲ್ಲಿಬದುಕಿದ್ದರು. ಕಡಿಮೆ ಸಂಖ್ಯೆ, ಹವಾಮಾನ ಬದಲಾವಣೆ, ಸಂಪನ್ಮೂಲಗಳ ಬಳಕೆಗಾಗಿ ಪೈಪೋಟಿ ಅಥವಾ ರೋಗಗಳಿಂದಾಗಿ ಈ ಪ್ರಭೇದವು ನಾಶವಾಗಿರಬಹುದು ಎಂದು ಅಂದಾಜಿಸಲಾಗಿದೆ.

