ಅಶಾಂತಿ ಸೃಷ್ಟಿಗೆ ಯೂನಸ್ ಯತ್ನ: ಬಾಂಗ್ಲಾದೇಶ ಅಧ್ಯಕ್ಷರ ಆರೋಪ

Contributed byBeeralinge gowda|Vijaya Karnataka

Bangladesh President Mohammed Shahabuddin has leveled serious accusations against Nobel laureate Mohammed Yunus. He stated that Yunus acted unconstitutionally and plotted to remove him from the presidency. The President further alleged that Yunus attempted to destabilize Bangladesh and create a constitutional crisis during his tenure.

plot to destabilize bangladesh president shahabuddin levels serious allegations against nobel laureate muhammad yunus

ಢಾಕಾ: ‘‘ಬಾಂಗ್ಲಾದೇಶದಲ್ಲಿ18 ತಿಂಗಳ ಕಾಲ ಮಧ್ಯಂತರ ಸರಕಾರದ ಮುನ್ನಡೆಸಿದ್ದ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಸಂವಿಧಾನಬಾಹಿರವಾಗಿ ವರ್ತಿಸಿದ್ದರು. ಪಿತೂರಿ ಮೂಲಕ ನನ್ನನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಸಲು ಪ್ರಯತ್ನಿಸಿದ್ದರು,’’ ಎಂದು ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಆರೋಪಿಸಿದ್ದಾರೆ. ಬಂಗಾಳಿ ದಿನಪತ್ರಿಕೆಗೆ ಸಂದರ್ಶನ ನೀಡಿರುವ ಮೊಹಮ್ಮದ್ ಶಹಾಬುದ್ದೀನ್ , ‘‘ಯೂನಸ್ ಆಡಳಿತ ಅವಧಿಯಲ್ಲಿಬಾಂಗ್ಲಾದೇಶದವನ್ನು ಅಸ್ಥಿರಗೊಳಿಸುವ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಲು ಪ್ರಯತ್ನ ನಡೆದಿತ್ತು,’’ ಎಂದು ಆರೋಪ ಮಾಡಿದ್ದಾರೆ. ಸೇನೆಯಲ್ಲಿಬದಲಾವಣೆ: ಪ್ರಧಾನಿ ತಾರೀಖ್ ರೆಹಮಾನ್ ಅವರು ಬಾಂಗ್ಲಾದ ಚೀಫ್ ಜನರಲ್ ಸ್ಟಾಫ್ (ಸಿಜಿಎಸ್ ) ಹುದ್ದೆಗೆ ಲೆಫ್ಟಿನೆಂಟ್ ಜನರಲ್ ಎಂ.ಮುನೀರ್ ರೆಹಮಾನ್ ಅವರನ್ನು ನೇಮಿಸಿದ್ದಾರೆ. ಮೇಜರ್ ಜನರಲ್ ಕೈಸರ್ ರಶೀದ್ ಚೌಧರಿಯನ್ನು ಗುಪ್ತಚರ ಇಲಾಖೆ ಮುಖ್ಯಸ್ಥರಾಗಿ ನೇಮಕ ಮಾಡಿದ್ದಾರೆ. ಭಾರತದ ರಾಯಭಾರ ಕಚೇರಿಯಲ್ಲಿರಕ್ಷಣಾ ಸಲಹೆಗಾರರಾಗಿದ್ದ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಹಫೀಜುರ್ ರೆಹಮಾನ್ ಅವರನ್ನು ವಾಪಸ್ ಕರೆಸಿಕೊಂಡಿದ್ದಾರೆ.