ನಿಧನ ಮಹಾಬಲ ರೈ

Contributed bybkyashas2010@gmail.com|Vijaya Karnataka

R. Mahabala Rai, a former revenue inspector, has passed away in Kinnigoli at the age of 74. Rai served the revenue department for 34 years, beginning his career as a village accountant. He also held positions as a Gram Panchayat secretary and revenue inspector in various locations. Rai was actively involved in several organizations including JCI, Lions, and Rotary Club.

retired revenue inspector r mahabala rai 74 passes away kadaba native and kinnigoli based social worker

ಕಡಬ: ತಾಲೂಕಿನ ಹಳೆನೇರೆಂಕಿ ಗ್ರಾಮದ ರಾಮಜಾಲು ನಿವಾಸಿ, ಪ್ರಸ್ತುತ ಮಂಗಳೂರು ಕಿನ್ನಿಗೋಳಿಯಲ್ಲಿವಾಸ್ತವ್ಯವಿದ್ದ ನಿವೃತ್ತ ಕಂದಾಯ ನಿರೀಕ್ಷಕ ಆರ್ . ಮಹಾಬಲ ರೈ (74) ಅಲ್ಪಕಾಲದ ಅಸೌಖ್ಯದಿಂದ ಕಿನ್ನಿಗೋಳಿಯಲ್ಲಿಸೋಮವಾರ ನಿಧನರಾದರು.ಅವರಿಗೆ ಪುತ್ರಿ ಇದ್ದಾರೆ.

ಅವರು ಬಂಟ್ವಾಳದಲ್ಲಿಗ್ರಾಮಕರಣಿಕರಾಗಿ ಸೇವೆ ಆರಂಭಿಸಿ ಬಳಿಕ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ ಬಡ್ತಿ ಪಡೆದು ಕಂದಾವರ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ ಕಂದಾಯ ನಿರೀಕ್ಷಕ ಹುದ್ದೆಗೆ ಬಡ್ತಿಗೊಂಡು ಮೂಲ್ಕಿಗೆ ವರ್ಗಾವಣೆಗೊಂಡಿದ್ದರು. ಇವರು ಒಟ್ಟು 34 ವರ್ಷ ಕಂದಾಯ ಇಲಾಖೆಯಲ್ಲಿಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಜೇಸಿಐ, ಲಯನ್ಸ್ , ರೋಟರಿ ಕ್ಲಬ್ , ಶ್ರೀ ರಾಮಕುಂಜೇಶ್ವರ ಕ್ರೀಡಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಹೀಗೆ ಹತ್ತು ಹಲವು ಸಂಸ್ಥೆಗಳಲ್ಲಿಸೇವೆ ಸಲ್ಲಿಸಿದ್ದರು.

(ಮಹಾಬಲ ರೈ ರಾಮಜಾಲು:ಫೋಟೋ ಫೈಲ್ ನೇಮ್ 24ಕೆಡಿಬಿ ಆರ್ ಎಮ್ )