ಕೋಲ್ಕೊತಾ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರಾಜಕಾರಣಿ ಮತ್ತು ಕೇಂದ್ರದ ಮಾಜಿ ಸಚಿವ ಮುಕುಲ್ ರಾಯ್ (71) ಸೋಮವಾರ ಮುಂಜಾನೆ ನಗರದ ಖಾಸಗಿ ಆಸ್ಪತ್ರೆ ಯಲ್ಲಿನಿಧನರಾದರು. ತೃಣಮೂಲ ಕಾಂಗ್ರೆಸ್ ನ ಆರಂಭಿಕ ವರ್ಷಗಳಲ್ಲಿಪಕ್ಷದ ಎರಡನೇ ಕಮಾಂಡರ್ ಆಗಿದ್ದ ರಾಯ್ ಅವರು, ಪಕ್ಷದ ಸಂಸ್ಥಾಪಕರಲ್ಲಿಪ್ರಮುಖರು. 2011ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿಪಕ್ಷದ ಬಹುದೊಡ್ಡ ಗೆಲುವಿಗೆ ಅವರ ಪಾತ್ರ, ಕಾರ್ಯತಂತ್ರ ಪ್ರಮುಖವಾಗಿತ್ತು. ಇದು ಮಮತಾ ಬ್ಯಾನರ್ಜಿ ಅವರನ್ನು
ಅಧಿಕಾರಕ್ಕೆ ತಂದಿತು. ರಾಜ್ಯದಲ್ಲಿಎಡರಂಗದ
34 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು. ಕೇಂದ್ರದಲ್ಲಿರಾಯ್ ಅವರು 2009ರಲ್ಲಿಹಡಗು ಖಾತೆ ಸಹಾಯಕ ಸಚಿವರಾಗಿದ್ದರು. ನಂತರ 2011- 12ರಲ್ಲಿರೈಲ್ವೆ ಖಾತೆಯನ್ನು ಹೊಂದಿದ್ದರು ಮತ್ತು ನಗರಾಭಿವೃದ್ಧಿ ಖಾತೆ ಸಹಾಯಕ ಸಚಿವರಾಗಿಯೂ ಸೇವೆ ಸಲ್ಲಿಸಿದರು. 2017ರಲ್ಲಿರಾಜಕೀಯ ನಾಯಕರು ಹಣ ಸ್ವೀಕರಿಸುತ್ತಿರುವುದು ಕ್ಯಾಮೆರಾದಲ್ಲಿಸೆರೆಯಾದ ‘ನಾರದ ಸ್ಟಿಂಗ್ ’ ವಿವಾದದ ನಂತರ ರಾಯ್ ಅವರನ್ನು ತೃಣಮೂಲ ಕಾಂಗ್ರೆಸ್ ನಿಂದ ಹೊರಹಾಕಲಾಯಿತು. ನಂತರ 2017ರ ನವೆಂಬರ್ ನಲ್ಲಿಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ, ಕೆಲ ತಿಂಗಳಲ್ಲೇ ಟಿಎಂಸಿಗೆ ಮರಳಿದ್ದರು. ರಾಯ್ 2021ರಿಂದ ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿಸಕ್ರಿಯರಾಗಿರಲಿಲ್ಲ.

