ವಿಕ ಸುದ್ದಿಲೋಕ ಮೈಸೂರು ಬಂಡೀಪುರ ಉದ್ಯಾನದಲ್ಲಿ2ನೇ ದಿನ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಮರಿಯೊಂದಿಗೆ ಹುಲಿ ಹಾಗೂ ಎರಡು ಚಿರತೆಗಳು ಕಾಣಿಸಿಕೊಂಡಿದೆ. ಹೀಗಾಗಿ ಅರಣ್ಯ ವೀಕ್ಷಣೆಗೆ ತೆರಳಿದ್ದ ಪರಿಸರ ಪ್ರೇಮಿಗಳು ಖುಷಿಪಟ್ಟಿದ್ದಾರೆ. ವಾರಾಂತ್ಯ ದಿನವಾದ ಭಾನುವಾರ ಮೊದಲ ದಿನವೇ ಆರು ಬಸ್ , ಎರಡು ಕ್ಯಾಂಪರ್ ನಲ್ಲಿಜನ ಸಫಾರಿಗೆ ತೆರಳಿದ್ದರು. ಸೋಮವಾರ ರಜೆ ಇಲ್ಲದ ಕಾರಣಕ್ಕೆ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಬಂದ ಎಲ್ಲರಿಗೂ ಅವಕಾಶ ಮಾಡಿಕೊಡಲಾಗಿದೆ. ಆದರೆ ವೀಕ್ಷಣೆ ವೇಳೆ ಮರಿಯೊಂದಿಗೆ ಹುಲಿ ಹಾಗೂ ಎರಡು ಚಿರತೆಗಳು ಕಾಣಿಸಿಕೊಂಡಿರುವುದು ಪ್ರವಾಸಿಗರಿಗೆ ಸಂತೋಷ ತಂದಿದೆ ಎಂದು ಬಂಡೀಪುರ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಪ್ರಭಾಕರನ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು. ಹೊಸ ನಿಯಮಾನುಸಾರ ಬಂಡೀಪುರ ಸಫಾರಿಗೆ ಜೆಎಲ್ ಆರ್ ಒಟ್ಟು ಟ್ರಿಪ್ ಗಳಿದ್ದವು. ಈಗ ಅದನ್ನು 31 ಟ್ರಿಪ್ ಗೆ ಇಳಿಸಿರುವುದರಿಂದ ಈ ವಾಹನಗಳ ಕಾರ್ಯಾಚರಣೆ ವೇಳೆ ಬದಲಾಗಿದೆ. ಇದೆಲ್ಲವನ್ನೂ ಸಾಫ್ಟ್ ವೇರ್ ನಲ್ಲಿಬದಲಿಸಬೇಕಿದೆ. ಹಾಗಾಗಿ ಸೋಮವಾರವೂ ಆನ್ ಲೈನ್ ಸೇವೆ ನೀಡಲು ಸಾಧ್ಯವಾಗಿಲ್ಲ. ನೇರವಾಗಿ ಬಂದವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

