ಡೋಕ್ಲಾ

Contributed bybabitha.salian@timesgroup.com|Vijaya Karnataka

Dhokla, a beloved Gujarati delicacy, offers a soft, spongy texture. This steamed breakfast item is best enjoyed with green chili chutney or tomato sauce. The recipe details ingredients like gram flour, yogurt, and spices. Preparation involves steaming the batter and then tempering it with mustard seeds, chilies, and a sweet and sour syrup.

super soft gujarati dhokla recipe how to make it easily at home

ಡೋಕ್ಲಾ

ಗುಜರಾತಿನ ಜನಪ್ರಿಯ ತಿನಿಸು ಡೋಕ್ಲಾಸ್ಪಾಂಜ್ ನಂತೆ ಮೃದು ಮೇಲ್ಮೈಯಿರುವ, ಹಬೆಯಲ್ಲಿತಯಾರಾಗುವ ಉಪಾಹಾರ. ಇದು ಹಸಿರು ಖಾರ ಚಟ್ನಿ , ಟೊಮೊಟೊ ಸಾಸ್ ಜೊತೆ ತಿನ್ನಲು ರುಚಿಯಾಗಿರುತ್ತದೆ.

ಸಾಮಗ್ರಿ: ಕಡಲೆ ಹಿಟ್ಟು-1 ಕಪ್ , ಹುಳಿ ಮೊಸರು-ಅರ್ಧ ಕಪ್ , ನಿಂಬೆ ರಸ-1 ಚಮಚ, ಸಕ್ಕರೆ-4 ಚಮಚ, ಉದ್ದಕ್ಕೆ ಸೀಳಿದ ಹಸಿ ಮೆಣಸಿನಕಾಯಿ-3, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು-ಸ್ವಲ್ಪ, ಅಡುಗೆ ಸೋಡಾ-ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಒಂದು ಪಾತ್ರೆಗೆ ಜರಡಿ ಹಿಡಿದ ಕಡಲೆ ಹಿಟ್ಟು ಹಾಕಿ. ಇದಕ್ಕೆ ಮೊಸರು, ಒಂದು ಚಮಚ ಸಕ್ಕರೆ, ಅರ್ಧ ಚಮಚ ಉಪ್ಪು, ಮುಕ್ಕಾಲು ಕಪ್ ನೀರು ಸೇರಿಸಿ ಗಂಟಿಲ್ಲದಂತೆ ಕಲಸಿ ಹತ್ತು ನಿಮಿಷ ಮುಚ್ಚಿಡಿ. ಒಲೆಯ ಮೇಲೆ ಇಡ್ಲಿಪಾತ್ರೆಗೆ ನೀರು ಹಾಕಿ ಅದರೊಳಗೆ ಸಣ್ಣ ಸ್ಟ್ಯಾಂಡ್ ಇಟ್ಟು, ಕಾಯಲು ಇಡಿ. ಕಲಸಿದ ಕಡಲೆ ಹಿಟ್ಟಿಗೆ ಅಡುಗೆ ಸೋಡಾ ಸೇರಿಸಿ ಮಿಶ್ರ ಮಾಡಿ ಜಿಡ್ಡು ಸವರಿದ ಕೇಕ್ ಪ್ಯಾನ್ ಗೆ ಹಾಕಿ. ನೀರು ಕುದಿ ಬರುತ್ತಲೇ ಸ್ಟ್ಯಾಂಡ್ ಮೇಲಿಟ್ಟು ಮುಚ್ಚಳ ಮುಚ್ಚಿ 20 ನಿಮಿಷ ಬೇಯಿಸಿ. ನಂತರ ಪ್ಯಾನ್ ಹೊರಗೆ ತೆಗೆದು ತಣಿಯಲು ಬಿಡಿ. ಬಾಣಲೆಯಲ್ಲಿಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹುರಿದು, ಒಂದೂವರೆ ಕಪ್ ನೀರು, ಸಕ್ಕರೆ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ ಆರಲು ಬಿಡಿ. ಬೆಂದಿರುವ ಡೋಕ್ಲಾತಣಿದ ನಂತರ ಒಂದು ತಟ್ಟೆಗೆ ವರ್ಗಾಯಿಸಿ ಬೇಕಾದ ಆಕಾರಕ್ಕೆ ಕತ್ತರಿಸಿ,. ಅಣಿಯಾದ ಒಗ್ಗರಣೆಯನ್ನು ಡೋಕ್ಲಾತುಂಡುಗಳ ಮೇಲೆ ಮೆಲ್ಲಗೆ ಸುರಿದು ಐದು ನಿಮಿಷದ ನಂತರ ಸೇವಿಸಿ.