ಹೊಸದಿಲ್ಲಿ: ಭಾರತೀಯ ವಾಯು ಪಡೆಯ ತೇಜಸ್ ಲಘು ಯುದ್ಧವಿಮಾನ ಅಪಘಾತಕ್ಕೀಡಾಗಿದೆ. ನಿಯಮಿತ ಹಾರಾಟದ ನಂತರ ಲ್ಯಾಂಡಿಂಗ್ ಸಮಯದಲ್ಲಿಪತನಗೊಂಡಿದೆ. ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದು, ಫೆಬ್ರವರಿ 7ರಂದು ಲ್ಯಾಂಡಿಂಗ್ ಸಮಯದಲ್ಲಿನಡೆದಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ, ವ್ಯಾಪಕ ತಾಂತ್ರಿಕ ತಪಾಸಣೆ ನಡೆಸಲು ಮತ್ತು ಕಾರ್ಯಾಚರಣೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಐಎಎಫ್ ಸುಮಾರು 30 ಸಿಂಗಲ…-ಸೀಟ್ ತೇಜಸ್ ವಿಮಾನಗಳ ಹಾರಾಟವನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಿದೆ. ಮೊದಲ ಬಾರಿಗೆ 2024ರ ಮಾರ್ಚ್ನಲ್ಲಿರಾಜಸ್ಥಾನದ ಜೈಸಲ್ಮೇರ್ ಬಳಿಯಲ್ಲಿತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಯಿತು. ಎರಡನೆಯ ಬಾರಿಗೆ 2025ರ ನವೆಂಬರ್ ನಲ್ಲಿದುಬೈ ಏರ್ ಶೋನಲ್ಲಿಪ್ರದರ್ಶನದ ಸಮಯದಲ್ಲಿತೇಜಸ್ ವಿಮಾನದ ಪತನ ಸಂಭವಿಸಿತು. ತೇಜಸ್ ವಿಮಾನ ತಯಾರಿಕ ಸಂಸ್ಥೆ ಎಚ್ ಎಎಲ್ ನಿಂದ ಭಾರತೀಯ ವಾಯುಪಡೆಗೆ ನವೀಕರಿ ಸಿದ ತೇಜಸ್ ಎಂಕೆ-1ಎ ರೂಪಾಂತರ ವನ್ನು ತಲುಪಿಸುವಲ್ಲಿವಿಳಂಬವನ್ನು ಎದುರಿಸುತ್ತಿರುವ ಸಮಯದಲ್ಲೇ ವಿಮಾನ ಪತನದ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿರಕ್ಷಣಾ ಸಚಿವಾಲಯವು 97 ತೇಜಸ್ ಎಂಕೆ-1ಎ ಲಘು ಯುದ್ಧವಿಮಾನಗಳ ಖರೀದಿಗೆ ಎಚ್ ಎಎಲ್ ಜತೆಗೆ ಒಟ್ಟಾರೆ 62,370 ಕೋಟಿ ರೂ. ಮೊತ್ತದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

