ಆಲಮಟ್ಟಿ ಪ್ರವಾಸೋದ್ಯಮಕ್ಕೆ ನೀಡಲಿ ಒತ್ತು | ಇನ್ನಷ್ಟ ಆಕರ್ಷಣೆಗೆ ಸಿಗಲಿ ಆದ್ಯತೆ
ಪ್ರವಾಸಿ ತಾಣಕ್ಕೆ ಬೇಕಿದೆ ಬೂಸ್ಟ್
ಮಹೇಶ ಅಡಾಳಿ ಆಲಮಟ್ಟಿ
ಞahಛಿsh.ada್ಝಜಿಃಜಞaಜ್ಝಿ.್ಚಟಞ
ಉತ್ತರ ಕರ್ನಾಟಕದ ಜೀವನಾಡಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ, ನಾನಾ ಉದ್ಯಾನಗಳಿಂದ ಖ್ಯಾತಿ ಪಡೆದಿರುವ ಆಲಮಟ್ಟಿ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿದ್ದು, ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಲು ರಾಜ್ಯ ಸರಕಾರ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಬೇಕಿದೆ.
ಆಲಮಟ್ಟಿ ಸದ್ಯ ಎಲ್ಲೆಲ್ಲೂಹಸಿರು ಹೊದ್ದುಕೊಂಡು ಮಲೆನಾಡು ಮೀರುಸುವಂಥ ವಾತಾವರಣ ಹೊಂದಿರುವುದರಿಂದ ಪ್ರತಿ ವರ್ಷ ರಾಜ್ಯ ಹಾಗೂ ದೇಶದ ಮೂಲೆ ಮೂಲೆಯಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಅಂದಾಜು 6 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುವ ಆಲಮಟ್ಟಿಗೆ ಈಚೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ. ಯಾವುದೇ ಹೊಸತನ ಇಲ್ಲದಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಬೇಕಿದೆ ವಿಶೇಷ ಅನುದಾನ
ವಸತಿ ಸೇರಿದಂತೆ ಕೆಲ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಆಲಮಟ್ಟಿಗೆ ಬಜೆಟ್ ನಲ್ಲಿವಿಶೇಷ ಅನುದಾನ ಮೀಸಲಿಟ್ಟು ಅಭಿವೃದ್ಧಿಗೆ ನೀಲನಕ್ಷೆ ನಿರ್ಮಿಸಬೇಕು ಎಂಬುದು ಇಲ್ಲಿಗೆ ಬರುವ ಪ್ರವಾಸಿಗರ ನಿರೀಕ್ಷೆಯಾಗಿದೆ.
ಕಳೆದೆರಡು ವರ್ಷಗಳ ಹಿಂದೆಯೇ ಪೂರ್ಣಗೊಂಡಿರುವ ವಾಟರ್ ಅಮ್ಯೂಸ್ ಮೆಂಟ್ ಪಾರ್ಕ್ ಇನ್ನೂ ಉದ್ಘಾಟನೆಗೊಂಡಿಲ್ಲ. ಇನ್ನೇನು ಬೇಸಿಗೆ ಆರಂಭವಾಗುತ್ತಿದೆ. ವಾಟರ್ ಪಾರ್ಕ್ ಆರಂಭಿಸಿದರೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.
ವೇಗ ಸಿಗಲಿ:
2024-25ನೇ ಸಾಲಿನ ಬಜೆಟ್ ನಲ್ಲಿಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಜಲಾಶಯಗಳ ಹಿನ್ನೀರು ಮತ್ತು ಕಡಲ ತೀರಗಳಲ್ಲಿಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ(ಪಿಪಿಪಿ)ದಲ್ಲಿಜಲಕ್ರೀಡೆಗಳು ಮತ್ತು ಜಲಸಾಹಸ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಘೋಷಣೆ ಮಾಡಿದ್ದರು. ಈ ಕುರಿತು ಪ್ರವಾಸೋದ್ಯಮ ಇಲಾಖೆ ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿಸ್ಥಳ ಗುರುತಿಸಿದೆ. ಆದರೆ ಈ ಯೋಜನೆ ಇನ್ನೂ ನಿವೇಶನ ಪಡೆಯುವ ಹಂತದಲ್ಲೇ ಉಳಿದುಕೊಂಡಿದೆ.
ಕಾಮಗಾರಿ ಶುರುವಾಗಲಿ
ಆಲಮಟ್ಟಿಯಲ್ಲಿಮೀನು ಮರಿ ಉತ್ಪಾದನೆ ಕೇಂದ್ರ ಸ್ಥಾಪಿಸಲು 2023ರ ಮಾ.8ರಂದು ಹಿಂದಿನ ಸರಕಾರದ ಸಚಿವ ಸಂಪುಟ ಸಭೆ 13.04 ಕೋಟಿ ರೂ. ವೆಚ್ಚದಲ್ಲಿಆಡಳಿತಾತ್ಮಕ ಅನುಮೋದನೆ ನೀಡಿತ್ತು. ಕೇಂದ್ರ ಸ್ಥಾಪನೆಗೆ ಆಲಮಟ್ಟಿ ಡ್ಯಾಂ ಮುಂಭಾಗದ ಎಡಬದಿಯಲ್ಲಿಕೆಬಿಜೆಎನ್ ಎಲ್ 25 ಎಕರೆ ಜಾಗೆ ನೀಡಿದ್ದು, ಈಚೆಗೆ ನಿಗದಿತ ಸ್ಥಳವನ್ನು ಸ್ವಚ್ಛಗೊಳಿಸಲಾಗಿದ್ದು ಕಾಮಗಾರಿ ಕೈಗೊಳ್ಳಬೇಕಿದೆ.
ಇನ್ನೂ ಒಳನಾಡು ಮೀನಗಾರಿಕೆ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ 2024ರ ಫೆ.16ರ ಬಜೆಟ್ ನಲ್ಲಿಘೋಷಿಸಿದ್ದು, ಅದಕ್ಕಾಗಿ ಅಗತ್ಯವಾದ 10 ಎಕರೆ ಪ್ರದೇಶ ಇನ್ನೂ ಇಲಾಖೆಗೆ ಹಸ್ತಾಂತರಗೊಂಡಿಲ್ಲ.
ಸದ್ಬಳಕೆ ಆಗಲಿ
ಜಲಾಶಯದ ಹಿನ್ನೀರು ಪ್ರದೇಶದಲ್ಲಿಸಾಕಷ್ಟು ದ್ವೀಪ ಪ್ರದೇಶಗಳಿದ್ದು, ಪಿಪಿಪಿ ಮಾದರಿಯಲ್ಲಿರೇಸಾರ್ಟ್ , ಜಲಾಶಯದ ಒಂದು ಬದಿಯಿಂದ ಇನ್ನೊಂದಿಗೆ ಬದಿವರೆಗೆ ರೂಪ್ ವೇ, ಜಲಸಾರಿಗೆ ಸೇರಿದಂತೆ ನಾನಾ ಯೋಜನೆಗಳನ್ನು ಕೈಗೊಳ್ಳಲು ಸಾಕಷ್ಟು ನೈಸರ್ಗಿಕ ಸಂಪನ್ಮೂಲವಿದೆ. ಸರಕಾರ ಅಗತ್ಯ ಅನುದಾನ ನೀಡಿ ಅನುಷ್ಠಾನಗೊಳಿಸಿದರೆ ಆಲಮಟ್ಟಿ ಖಂಡಿತ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ ಎನ್ನುತ್ತಾರೆ ಪ್ರವಾಸಿಗರು.
---
ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ ಮಕ್ಕಳು ಸೇರಿದಂತೆ ಲಕ್ಷಾಂತರ ಪ್ರವಾಸಿಗರು ಆಲಮಟ್ಟಿಗೆ ಭೇಟಿ ನೀಡುತ್ತಾರೆ. ಹೀಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸದ ಅಗತ್ಯವಿದೆ. ಹೀಗಾಗಿ ಯಾತ್ರಿ ನಿವಾಸ ಸೇರಿದಂತೆ ನಾನಾ ಸೌಲಭ್ಯಗಳನ್ನು ಕಲ್ಪಿಸಬೇಕಿದೆ.
-ಬಿ.ಟಿ.ಗೌಡರ, ಅಧ್ಯಕ್ಷ, ಸರಕಾರಿ ನೌಕರರ ಸಂಘ ತಾಲೂಕು ಘಟಕ ನಿಡಗುಂದಿ
ಧಿ
ಗಂಗಾ ಆರತಿಯಂತೆ ಆಲಮಟ್ಟಿಯಲ್ಲಿಕೃಷ್ಣಾ ಆರತಿ ಕಾರ್ಯಕ್ರಮ, ಮಕರ ಸಂಕ್ರಮಣ ಅಥವಾ ಬಾಗಿನ ಅರ್ಪಣೆ ಸಂದರ್ಭದಲ್ಲಿಆಲಮಟ್ಟಿ ಉತ್ಸವ ಹೀಗೆ ನಾನಾ ಕಾರ್ಯಕ್ರಮ ಆಯೋಜಿಸಬೇಕು. ಆ ಮೂಲಕ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.
-ಸಂಗಮೇಶ ಕೆಂಭಾವಿ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ , ನಿಡಗುಂದಿ.
8ಎಎಂಟಿ1ಎ.ಬಿ.ಸಿ.ಡಿ

