ಅನುಯಾಯಿಗಳಿಂದ ದೀರ್ಫಾಯುಷ್ಯಕ್ಕೆ ಪೂಜೆ
ವಿಕ ಸುದ್ದಿಲೋಕ ಮುಂಡಗೋಡ(ಉತ್ತರಕನ್ನಡ)
ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಲ್ಲಿ58 ದಿನಗಳಿಂದ ವಾಸ್ತವ್ಯ ಹೂಡಿದ್ದ ಟಿಬೇಟಿಯನ್ ಧರ್ಮಗುರು 14ನೇ ದಲೈಲಾಮಾ ಸೋಮವಾರ ಬೆಳಗ್ಗೆ ಹಿಮಾಚಲ ಪ್ರದೇಶದ ಧರ್ಮಶಾಲೆಯತ್ತ ಪ್ರಯಾಣ ಬೆಳೆಸಿದರು.
ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ.6ರ ಡ್ರೆಪುಂಗ್ ಲಾಚಿ ಬೌದ್ಧ ಮಂದಿರಕ್ಕೆ 2025ರ ಡಿ.12ರಂದು ಆಗಮಿಸಿ ವಾಸ್ತವ್ಯ ಹೂಡಿದ್ದ ದಲೈಲಾಮಾ ನಾನಾ ಧಾರ್ಮಿಕ ಕಾರ್ಯಗಳು, ದೀಕ್ಷೆ ಸಮಾರಂಭ ಹಾಗೂ ಸಾವಿರಾರು ದೇಶ ವಿದೇಶದ ಅನುಯಾಯಿಗಳಿಗೆ ಆಶೀರ್ವಚನ ನೀಡಿದ್ದರು.
ವಿಶೇಷ ಪೂಜೆ:
ಕ್ಯಾಂಪ್ ನಂ.6ರ ಡ್ರೆಪುಂಗ್ ಲಾಚಿ ಬೌದ್ಧ ಮಂದಿರದಲ್ಲಿನಡೆದ ವಿಶೇಷ ಪೂಜೆಯಲ್ಲಿನೂರಾರು ಭಿಕ್ಕುಗಳು, ಅವರ ಅನುಯಾಯಿಗಳು ದಲೈಲಾಮಾ ಅವರ ದೀರ್ಘಾಯುಷ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಆಶೀರ್ವಚನ:
ಕ್ಯಾಂಪ್ ನಂ.6ರ ಡ್ರೆಪುಂಗ್ ಗೋಮಾಂಗ್ ಬೌದ್ಧ ಮಂದಿರದಲ್ಲಿನಡೆದ 4ನೇ ಪಾಲಿ ಮತ್ತು ಸಂಸ್ಕೃತ ಅಂತಾರಾಷ್ಟ್ರೀಯ ಭಿಕ್ಷು ವಿನಿಮಯ ಕಾರ್ಯಕ್ರಮದಲ್ಲಿಕಾಂಬೋಡಿಯಾ, ಮ್ಯಾನ್ಮಾರ್ , ಶ್ರೀಲಂಕಾ, ಲಾವೋಸ್ , ಥಾಯ್ಲೆಂಡ್ ಹಾಗೂ ಟಿಬೇಟಿಯನ್ ಭಿಕ್ಕುಗಳು ಹಾಗೂ ಅವರ ಅನುಯಾಯಿಗಳಿಗೆ ಆಶೀರ್ವಚನ ನೀಡಿದರು.
ಬಿಗಿ ಬಂದೋಬಸ್ ್ತ:
ಝಡ್ ಪ್ಲಸ್ ರಕ್ಷಣೆ ಹೊಂದಿರುವ ದಲೈಲಾಮಾ ಅವರ ಸುರಕ್ಷತೆಗೆ ಟಿಬೇಟಿಯನ್ ವಿಶೇಷ ತಂಡ ಹಾಗೂ ರಾಜ್ಯ ಪೊಲೀಸ್ ಇಲಾಖೆ ಟಿಬೇಟಿಯನ್ ಕ್ಯಾಂಪ್ ನಲ್ಲಿವಿಶೇಷ ಬಂದೋಬಸ್ ್ತ ಕೈಗೊಂಡಿತ್ತು.
ಪೋಟೋ: 9ಎಮ್ ಎನ್ ಡಿ1,1ಎ
ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಿಂದ ಟಿಬೇಟಿಯನ್ ಧರ್ಮಗುರು ದಲೈಲಾಮಾ ಧರ್ಮಶಾಲಾದತ್ತ ಸೋಮವಾರ ಪ್ರಯಾಣ ಬೆಳೆಸಿದರು.
-----

