ರಥ ಮುನ್ನೆಡೆಸುವಾಗ ಎಚ್ಚರಿಕೆ ಅಗತ್ಯ
ನಾಯಕನಹಟ್ಟಿ: ರಥ ಮುನ್ನೆಡೆಸುವಾಗ ಎಚ್ಚರಿಕೆ ಅಗತ್ಯ ಎಂದು ಡಿವೈಎಸ್ಪಿ ಸತ್ಯನಾರಾಯಣರಾವ್ ಹೇಳಿದರು.
ನಗರದ ಈಶ್ವರ ದೇವಾಲಯದಲ್ಲಿಸೋಮಧಿವಾರ ರಥ ಚಲಾಯಿಸುವ ಹಾಗೂ ಸೇವಾಕರ್ತರ ಸಭೆಯಲ್ಲಿಮಾತನಾಡಿದರು.
ಇದು ಅತ್ಯಂತ ದೊಡ್ಡ ರಥವಾಗಿದೆ. ಹೀಗಾಗಿ ಸಂಯಮ ಮತ್ತು ಸಹನೆಯಿಂದ ರಥ ಮುನ್ನೆಡೆಸಬೇಕು. ಪೊಲೀಸ್ ಅಧಿಕಾರಿಗಳು, ದೇವಾಲಯದ ಸಿಬ್ಬಂದಿ ನೀಡುವ ಸೂಚನೆ ಅನುಸರಿಸಬೇಕು. ಸೇವಾಕರ್ತರು ಮತ್ತು ರಥ ಚಲಾಯಿಸುವ ಸಂಪ್ರದಾಯಗಾರರ ಹೊರತುಪಡಿಸಿ ಯಾರಿಗೂ ಅವಕಾಶವಿರುವುದಿಲ್ಲಎಂದರು.
ಸಿಪಿಐ ಹನುಮಂತಪ್ಪ ಎಂ.ಶಿರೀಹಳ್ಳಿ ಮಾತನಾಡಿ, ಸೇವಾಕರ್ತರು ಮುಖ್ಯ ಅತಿಥಿಗಳಿಗೆ ಬೇರೆ ಬೇರೆ ರೀತಿಯ ಬ್ಯಾಡ್ಜಗಳನ್ನು ನೀಡಲಾಗುತ್ತದೆ. ಸೇವಾಕರ್ತರಿಗೆ ಮಾತ್ರ ಉತ್ಸವ ಸಮಯದಲ್ಲಿದೇವಾಲಯದ ಒಳಗಡೆ ಪ್ರವೇಶ ನೀಡಲಾಗುವುದು. ಆದರೆ ದೇವಾಲಯದಲ್ಲಿಬೇರೆ ಬೇರೆ ಕಡೆಗಳ ಸಿಬ್ಬಂದಿ ಇರುವುದರಿಂದ ಕೆಲವೊಮ್ಮೆ ಅಧಿಕೃತ ವ್ಯಕ್ತಿಗಳಿಗೂ ಕೂಡ ಪ್ರವೇಶ ನಿರಾಕರಣೆಯಾಗುತ್ತದೆ. ಇದನ್ನು ತಪ್ಪಿಸಲು ಸ್ಥಳದಲ್ಲಿರುವ ಪೊಲೀಸ್ ಮತ್ತು ದೇವಾಲಯದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
ಮುಖಂಡ ದಳವಾಯಿ ತಿಪ್ಪೇಸ್ವಾಮಿ ಮಾತನಾಡಿದರು. ದೇವಾಲಯದ ಇಒ ಎಚ್ .ಗಂಗಾಧರಪ್ಪ, ಪಪಂ ಮುಖ್ಯಾಧಿಕಾರಿ ಓ.ಧಿಶ್ರೀನಿವಾಸ್ , ಪಿಐಸ್ ಐ ಪಾಂಡುರಂಗಪ್ಪ, ಸಿಬ್ಬಂದಿ ಸತೀಶ್ , ಸೇವಾಕರ್ತರಾದ ದೊರೆ ತಿಪ್ಪೇಸ್ವಾಮಿ, ದಳವಾಯಿ ರುದ್ರಮುನಿ, ಉಮೇಶ್ , ಪಿ.ಯು.ಸುನಿಲ್ , ಕೆ.ತಿಪ್ಪೇರುದ್ರಪ್ಪ ಇದ್ದರು.
2 ಎನ್ ಕೆ ಹೆಚ್ 2
ನಾಯಕನಹಟ್ಟಿಯಲ್ಲಿಸೋಮವಾರ ರಥದ ಸೇವಾಕರ್ತರು ಮತ್ತು ರಥವನ್ನು ಮುನ್ನೆಡೆಸುವವರ ಸಭೆಯಲ್ಲಿಪೊಲೀಸ್ ಅಧಿಕಾರಿಗಳು ಚರ್ಚೆ ನಡೆಸಿದರು.

